ಚೌಡ್ಲು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ

ಸೋಮವಾರಪೇಟೆ: ಚೌಡ್ಲು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕೆ.ಟಿ.ಪರಮೇಶ್ ಅವರ ಅಧ್ಯಕ್ಷತೆ ಸಂಘದ ಸಭಾಂಗಣದಲ್ಲಿ ಶನಿವಾರ ನಡೆಯಿತು. ನಂತರ ಪರಮೇಶ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸಂಘ 27,29,526 ರೂ.ಗಳ ಲಾಭಗಳಿಸಿದೆ. ಶೇ.5ರ ಲಾಭಂಶವನ್ನು ಸದಸ್ಯರಿಗೆ ನೀಡುವಂತೆ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದರು. ಅಪೂರ್ಣ ಷೇರು ಹೊಂದಿರುವ ಸದಸ್ಯರು ಸಂಘದ ಗುರುತಿನ ಚೀಟಿ ತಂದು ಸರಿಹೊಂದಿಸಿಕೊಳ್ಳಬೇಕು ಎಂದು ಹೇಳಿದರು.
ಸಂಘದದಲ್ಲಿ 2731 ಸದಸ್ಯರಿದ್ದಾರೆ. 2024-25ನೇ ಸಾಲಿನಲ್ಲಿ 1360 ಸದಸ್ಯರಿಗೆ ಕೆಪಿಸಿ ಸಾಲ ನೀಡಲಾಗಿದೆ. 295 ಸದಸ್ಯರಿಗೆ ಅಡಮಾನ ನೀಡಲಾಗಿದೆ. ಪಿಗ್ಮಿ, ಚಿನ್ನಾಭರಣ ಸೇರಿದಂತೆ ಇನ್ನಿತರ ಸಾಲವನ್ನು ನೀಡಲಾಗಿದೆ. ಶೇ.95 ರಷ್ಟು ಸಾಲ ಮರುಪಾವತಿಯಾಗಿದೆ. ಸಾಲಗಾರಿ ನಿಗದಿತ ಸಮಯದಲ್ಲಿ ಸಾಲ ಮರುಪಾವತಿಸಬೇಕು ಎಂದು ಹೇಳಿದರು. ಉಪಾಧ್ಯಕ್ಷ ಎ.ಜೆ.ಕೃಷ್ಣಪ್ಪ, ನಿರ್ದೇಶಕರಾದ ಜಾನಕಿ ವೆಂಕಟೇಶ್, ಕೆ.ಪಿ.ಭಾನುಪ್ರಕಾಶ್, ವಿ.ಹರೀಶ್, ಪದ್ಮಾವತಿ, ಸಿ.ಎಸ್.ಧರ್ಮಪ್ಪ, ಎಚ್.ಆರ್.ಪೃಥ್ವಿ, ವಿ.ಜೆ.ಭಾರತಿ, ಸಿ.ಕೆ.ರಾಘವೇಂದ್ರ, ಡಿ.ಎಸ್.ಸುರೇಶ್, ಎಚ್.ಎಚ್.ಹೂವಯ್ಯ, ಸಿಇಒ ಹರೀಶ್ ಇದ್ದರು.