ಮೋದಿ ಅವಹೇಳನ: ಮತ್ತೊಬ್ಬ ಬಂಧನ
ಮಡಿಕೇರಿ: ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಅವಹೇಳನ ಮಾಡಿದ ಆರೋಪದಡಿ ಮಡಿಕೇರಿ ಪೊಲೀಸರು ಗುರುವಾರ ಮತ್ತೊಬ್ಬನನ್ನು ಬಂಧಿಸಿದ್ದಾರೆ ಮಡಿಕೇರಿ ಆಜಾದ್ ನಗರ ನಿವಾಸಿ ಮೊಹಮದ್ ರಿಯಾಜ್ (26) ಬಂಧಿತ.
ಬುಧವಾರ ರಾಣಿಪೇಟೆಯ ಎಂ.ಇ.ಫಾಹದ್ (31), ತ್ಯಾಗರಾಜ ಕಾಲನಿಯ ಎಂ.ಎಚ್.ಬಸಿಲ್ (29), ಎಂ.ಎಂ.ಸಮೀರ್ (31) ಎಂಬುವವರನ್ನು ಬಂಧಿಸಲಾಗಿತ್ತು. ನಾಲ್ಕನೇ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು. ಆರೋಪಿಗಳು ಮೋದಿ ಬಗ್ಗೆ ಅವಹೇಳನ ಮಾಡಿ ವಿಡಿಯೋ ಹಂಚಿಕೊಂಡಿದ್ದರು. ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
