ವಿವಿಧ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

ವಿವಿಧ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

ಮಡಿಕೇರಿ-ಮೈಸೂರು ವಿಶ್ವವಿದ್ಯಾನಿಲಯಕ್ಕೆ ಶಾಶ್ವತ ಸಂಯೋಜನೆಗೊಂಡಿರುವ ಚಾಮ ರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು(ಕಾವಾ) ಸಿದ್ದಾರ್ಥನಗರ, ಮೈಸೂರು ಸಂಸ್ಥೆಯಲ್ಲಿ ಮಾಸ್ಟರ್ ಆರ್ಫ ವಿಜ್ಯುಯಲ್ ಆಟ್ರ್ಸ್ (ಎಂವಿಎ)(ಎರಡು ಶೈಕ್ಷಣಿಕ ವರ್ಷದ ನಾಲ್ಕು ಸೆಮಿಸ್ಟರ್ ಸಿಬಿಸಿಎಸ್ ಪದ್ದತಿ) ದೃಶ್ಯ ಕಲೆಯಲ್ಲಿ 2025-26 ನೇ ಶೈಕ್ಷಣಿಕ ಸಾಲಿಗೆ ಪ್ರಥಮ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಬಿವಿಎ ಸ್ನಾತಕ ಪದವಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಆಫ್ ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.

 ಈ ಸ್ನಾತಕೋತ್ತರ ಪದವಿಯಲ್ಲಿ ಚಿತ್ರಕಲೆ ವಿಭಾಗ, ಗ್ರಾಫಿಕ್ಸ್ ವಿಭಾಗ ಮತ್ತು ಶಿಲ್ಪಕಲೆ ವಿಭಾಗಗಳಲ್ಲಿ ವಿಶೇಷ ಅಧ್ಯಯನದ ಸ್ನಾತಕೋತ್ತರ ಪದವಿಯಾಗಿರುತ್ತದೆ ಪ್ರಥಮ ವರ್ಷದ ಮಾಸ್ಟರ್ ಆಫ್ ವಿಜ್ಯುಯಲ್ ಆಟ್ರ್ಸ್ (ಎಂವಿಎ) ಪ್ರವೇಶಾತಿಗಾಗಿ ಚಿತ್ರಕಲೆ ವಿಭಾಗ, ಗ್ರಾಫಿಕ್ಸ್ ವಿಭಾಗ ಮತ್ತು ಶಿಲ್ಪಕಲೆ ವಿಭಾಗಗಳಿಗೆ ಕಚೇರಿಯಿಂದ ಅರ್ಜಿ ಪಡೆದು ಸಲ್ಲಿಸಲು ಆಗಸ್ಟ್ 30 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಅರ್ಹತಾ ಪರೀಕ್ಷೆ ಹಾಗೂ ವೈಯುಕ್ತಿಕ ಸಂದರ್ಶನದ ದಿನಾಂಕ ತಿಳಿಸಲಾಗುವುದು, ಆಸಕ್ತ ಆಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಈ ಕಾರ್ಯಾಲಯದ ದೂರವಾಣಿ ಸಂಖ್ಯೆ 0821-2438931 ನ್ನು ಸಂಪರ್ಕಿಸಬಹುದು ಎಂದು ಮೈಸೂರು ಚಾಮ ರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು(ಕಾವಾ) ಡೀನ್ ಅವರು ತಿಳಿಸಿದ್ದಾರೆ.