ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ವಿವಿಧ ಯೋಜನೆಗೆ ಅರ್ಜಿ ಆಹ್ವಾನ

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ವಿವಿಧ ಯೋಜನೆಗೆ ಅರ್ಜಿ ಆಹ್ವಾನ

ಮಡಿಕೇರಿ:-ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 13 ಫಲಾನುಭವಿ ಆಧಾರಿತ ಯೋಜನೆಗಳನ್ನು 2025-26 ನೇ ಸಾಲಿನಲ್ಲಿ ಸೇವಾ ಸಿಂಧು, ಆನ್‍ಲೈನ್ ತಂತ್ರಾಂಶದಡಿ ಅಳವಡಿಸಲಾಗಿರುತ್ತದೆ. ಆದ್ದರಿಂದ ಪ್ರತಿಭಾವಂತ ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಯೋಜನೆ, ಶಿಶುಪಾಲನಾ ಭತ್ಯೆ, ನಿರುದ್ಯೋಗ ಭತ್ಯೆ, ಆಧಾರ ಯೋಜನೆ, ಮರಣ ಪರಿಹಾರ ನಿಧಿ, ಸಾಧನೆ ಯೋಜನೆ, ಪ್ರತಿಭೆ ಯೋಜನೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ ಟಾಪ್, ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ಯೋಜನೆ, ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ಯೋಜನೆ, ದೃಷ್ಟಿದೋಷ ಹೊಂದಿರುವ ವಿಕಲಚೇತನರಿಗೆ ಬ್ರೈಲ್ ಕಿಟ್ ಯೋಜನೆ ಹಾಗೂ ಸಾಧನ ಸಲಕರಣೆ ಯೋಜನೆ ಈ ಯೋಜನೆಗಳಿಗೆ 2025-26ನೇ ಸಾಲಿಗೆ ವಿಕಲಚೇತನ ಫಲಾನುಭವಿಗಳು ಆನ್‍ಲೈನ್ ಮೂಲಕ (https://sevasindhu.karnataka.gov.in/Sevasindhu/Kannada)ಪೋರ್ಟ್‍ಲ್‍ನಲ್ಲಿ ಅರ್ಜಿ ಸಲ್ಲಿಸಬಹುದು.

 ಅರ್ಜಿ ಸಲ್ಲಿಸಲು ಸೆಪ್ಟೆಂಬರ್, 30 ಕೊನೆಯ ದಿನವಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವಿಮಲ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಜಿಲ್ಲೆಯ ಗ್ರಾಮ ಪಂಚಾಯತ್‍ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಆರ್‍ಡಬ್ಲ್ಯು ಹಾಗೂ ತಾಲ್ಲೂಕು ಪಂಚಾಯತ್‍ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಂಆರ್‍ಡಬ್ಲ್ಯುಗಳಾದ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲ್ಲೂಕಿನವರು ಹರೀಶ್ ಟಿ.ಆರ್ ಮೊ.ಸಂ.8861428931, ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನವರು ಪ್ರಥನ್ ಕುಮಾರ್ ಸಿ.ಬಿ ಮೊ.ಸಂ.9900883654 ಹಾಗೂ ಮಡಿಕೇರಿ ತಾಲ್ಲೂಕಿನವರು ರಾಜೇಶ್ ಮೊ.ಸಂ. 8073192914 ಸಂಖ್ಯೆಗಳನ್ನು ಹಾಗೂ ಕಚೇರಿ ದೂ.ಸಂ..08272-295829 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವರು ತಿಳಿಸಿದ್ದಾರೆ.