ಬಾಲ್ ಬ್ಯಾಡ್ಮಿಂಟನ್: ಕನ್ನಡ ಭಾರತಿ ಪದವಿಪೂರ್ವ ಕಾಲೇಜು ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ
ಕುಶಾಲನಗರ:ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವತಿಯಿಂದ ಪೊನ್ನಂಪೇಟೆ ಸೇಂಟ್ ಅಂಟೋನಿಸ್ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕುಶಾಲನಗರ ಕನ್ನಡ ಭಾರತಿ ಪದವಿಪೂರ್ವ ಕಾಲೇಜಿನ ತಂಡ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿದೆ.
ವಿನಯ್,ಆರ್,( ನಾಯಕ) ಶರತ್ ಕುಮಾರ್ ಆರಾಧ್ಯ, ಪ್ರಿಯತಮ್, ಗೌತಮ್.ಬಿ.ಎಂ. ಚರಣ್ ಕುಮಾರ್, ಆದಿತ್ಯ, ಕುಮಾರ, ರಾಕೇಶ್, ರಿಜ್ವನ್, ಪ್ರಜ್ವಲ್. ಅಕ್ಷಯ್ ಇವರುಗಳು ಈ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
