ಬಾಳುಗೋಡು:ಅಂತರ್ ಕೊಡವ ಸಮಾಜದ ಹಾಕಿ ಪಂದ್ಯಾವಳಿಗೆ ಚಾಲನೆ ನೀಡಿದ ಶಾಸಕ ಎಎಸ್ ಪೊನ್ನಣ್ಣ

ಬಾಳುಗೋಡು:ಅಂತರ್ ಕೊಡವ ಸಮಾಜದ ಹಾಕಿ ಪಂದ್ಯಾವಳಿಗೆ ಚಾಲನೆ ನೀಡಿದ ಶಾಸಕ ಎಎಸ್ ಪೊನ್ನಣ್ಣ

ವಿರಾಜಪೇಟೆ:ಸಮೀಪದ ಬಾಳುಗೋಡು ಕೊಡವ ಸಮಾಜದಲ್ಲಿ ಆಯೋಜನೆಗೊಂಡ, ಅಂತರ ಕೊಡವ ಸಮಾಜ ಹಾಕಿ ಕ್ರೀಡಾ ಮತ್ತು ವಿವಿಧ ಸಾಂಸ್ಕೃತಿಕ ಪೈಪೋಟಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳು ಏರ್ಪಾಡಾಗಿತ್ತು. ವಿಶೇಷವಾಗಿ ಕೋವಿಯಲ್ಲಿ ಗುರಿಗೆ ತಾಗಿಸುವ ಸ್ಪರ್ಧೆ ಯಲ್ಲಿ ಮಾನ್ಯ ಶಾಸಕರು ಭಾಗಿಯಾಗಿ, ಎಂದಿನಂತೆ ಗುರಿ ತಪ್ಪದ ಸರದಾರ ನಾಗಿ ಬಂದೂಕಿನಿಂದ ಗುಂಡು ಹಾರಿಸಿ ಗುರಿಗೆ ತಾಗಿಸಿದ ಶಾಸಕರು, ಎಲ್ಲರ ಗಮನ ಸೆಳೆದರು. ತಾವು ಶಾಸಕರಾಗಿ ಆಯ್ಕೆಯಾಗುವ ಮೊದಲೇ ಬಾಳುಗೋಡು ಕೊಡವ ಸಮಾಜದವರ ಮನವಿ ಮೇರೆಗೆ ವೈಯುಕ್ತಿಕವಾಗಿ ಅನೇಕ ಬಾರಿ ಸಮಾಜದ ಅಭಿವೃದ್ಧಿಗೆ ಸಹಾಯ ಮಾಡಿದ್ದರು.

 ಶಾಸಕರಾಗಿ ಆಯ್ಕೆಯಾದ ಬಳಿಕ, ಬಾಳುಗೋಡು ಕೊಡವ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಅದರಲ್ಲೂ ವಿಶೇಷವಾಗಿ ಮೈದಾನ, ತಡೆಗೋಡೆ ಹಾಗೂ ಅಲ್ಲಿಯ ವಿವಿಧ ಕಟ್ಟಡಗಳ ಅಭಿವೃದ್ಧಿ ಹೀಗೆ ಹತ್ತು ಹಲವು ಕಾಮಗಾರಿಗಳಿಗೆ ವಿಶೇಷ ಅನುದಾನಗಳನ್ನು ಒದಗಿಸಿದನ್ನು ಇಲ್ಲಿ ಸ್ಮರಿಸಬಹುದು. ಈ ಕಾರ್ಯಕ್ರಮದಲ್ಲಿ, ಕೊಡಗು ಮೈಸೂರು ಸಂಸದ ಯದುವೀರ್ ಒಡೆಯರ್, ರಾಜ್ಯ ಕ್ರೀಡಾ ಪ್ರಯಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ, ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಬಾಳುಗೋಡು ಕೊಡವ ಸಮಾಜದ ಅಧ್ಯಕ್ಷರು ವಿಷ್ಣು ಕಾರ್ಯಪ್ಪ, ಎಲ್ಲಾ ಕೊಡವ ಸಮಾಜದ ಅಧ್ಯಕ್ಷರುಗಳು ಪ್ರಮುಖರು ಹಾಗೂ ಆಹ್ವಾನಿತ ಅತಿಥಿ ಗಣ್ಯರು ಉಪಸ್ಥಿತರಿದ್ದರು.