ಕೊಂಡಂಗೇರಿ ಚಿನ್ನದ ಸರ ಕಳವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಪ್ರಕರಣದ ಹಿಂದಿನ ನೈಜಾಂಶ ಗೊತ್ತೇ!

ಸಿದ್ದಾಪುರ:ಠಾಣಾ ವ್ಯಾಪ್ತಿಯ ಕೊಂಡಂಗೇರಿ ಗ್ರಾಮ ಪೆರಂಬು ಎಂಬಲ್ಲಿ ವಾಸವಿರುವ ಶ್ರೀಮತಿ ಸಫಾನ ಮತ್ತು ಶ್ರೀಮತಿ ಸಾರಮ್ಮ ಎಂಬುವವರು ಮನೆಯಲ್ಲಿದ್ದ ಸಂದರ್ಭ ದಿನಾಂಕ: 21-07-2025 ರಂದು ಮಧ್ಯಾಹ್ನ ಸುಮಾರು 01.30 ಘಂಟೆ ಸಮಯದಲ್ಲಿ ಅಪರಿಚಿತ ವ್ಯಕ್ತಿಯು ನೀರು ಕೇಳುವ ನೆಪದಲ್ಲಿ ಮನೆಯ ಬಳಿ ಬಂದು ಮಹಿಳೆಯರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿ ಕುತ್ತಿಗೆಯಲ್ಲಿದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕಲಂ: 309(6) ಬಿಎನ್ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಮುನಾವರ್,( 26 ವರ್ಷ,) ಮೇಕೂರು ಹೊಸ್ಕೇರಿ, ಪಾಲಿಬೆಟ್ಟ ಎಂಬಾತನನ್ನು ದಸ್ತಗಿರಿ ಮಾಡಿ ಕಾನೂನು ಕ್ರಮಕೈಗೊಳ್ಳಲಾಗಿದೆ.
ಸದರಿ ಆರೋಪಿ ಮುನಾವರ್‌ನನ್ನು ವಿಚಾರಣೆ ನಡೆಸಿದ್ದು, ಶ್ರೀಮತಿ ಸಫಾನರವರ ಅಕ್ಕನ ಗಂಡನಾದ ಮುಜೀದ್ ಎಂಬಾತನು ಆಟೋ ಚಾಲಕನಾಗಿದ್ದು ಆರ್ಥಿಕ ಸಂಕಷ್ಟದಲ್ಲಿದ್ದರಿಂದ ಆರೋಪಿ ಮುನಾವರ್‌ನೊಂದಿಗೆ ಸೇರಿ ಶೀಘ್ರವಾಗಿ ಹಣ ಮಾಡುವ ಉದ್ದೇಶದಿಂದ ಮುಜೀದ್‌ನ ಪತ್ನಿಯ ತಂಗಿಯಾದ ಶ್ರೀಮತಿ ಸಫಾನ ರವರು ಮನೆಯಲ್ಲಿ ಅತ್ತೆಯೊಂದಿಗೆ ಇಬ್ಬರು ಮಾತ್ರ ಇರುವುದರಿಂದ ಅವರ ಮನೆಯಲ್ಲಿರುವ ಹಣ ಮತ್ತು ಚಿನ್ನ ಭಾರಣಗಳನ್ನು ದರೋಡೆ ಮಾಡಿದರೆ ಅವರು ಘಟನೆ ಕುರಿತು ಮೊದಲು ಅಕ್ಕನ ಗಂಡನಾಗಿರುವುದರಿಂದ ನನಗೆ ತಿಳಿಸುತ್ತಾರೆ. ಆ ಸಂದರ್ಭ ಪೊಲೀಸ್ ಠಾಣೆ & ಕೋರ್ಟ್ ತೆರಳದಂತೆ ಮಾಡಬಹುದಾಗಿದೆ ಎಂದು 15 ದಿನಗಳಿಂದ ಸಂಚು ರೂಪಿಸಿರುತ್ತಾರೆ.
ದಿನಾಂಕ: 21-07-2025 ರಂದು ಮಧ್ಯಾಹ್ನ ವೇಳೆಯಲ್ಲಿ ಮುಜೀದ್ ಮತ್ತು ಮುನಾವರ್ ಇಬ್ಬರ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡು ಕಾರ್‌ನಲ್ಲಿ ಮುನಾವರ್‌ನನ್ನು ಕೊಂಡಂಗೇರಿಗೆ ಬಿಟ್ಟು ಈ ಮೊದಲೇ ರೂಪಿಸಿದ ಸಂಚಿನಂತೆ ಶ್ರೀಮತಿ ಸಫಾನ ಮತ್ತು ಶ್ರೀಮತಿ ಸಾರಮ್ಮ ಮನೆಯ ಬಳಿ ಬಂದು ಕತ್ತಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿ ಕುತ್ತಿಗೆಯಲ್ಲಿದ ಚಿನ್ನದ ಸರವನ್ನು ದರೋಡೆ ಮಾಡಿರುತ್ತಾರೆ ಹಾಗೂ ಈ ಕೃತ್ಯಕ್ಕೆ ಸಂಚು ರೂಪಿಸಿದ ಶ್ರೀಮತಿ ಸಫಾನರವರ ಅಕ್ಕನ ಗಂಡನಾದ ಮುಜೀದ್ 2-ಗ್ಲೌಸ್, 01-ಕತ್ತಿ & 01-ಚಾಕು ಅನ್ನು ನೀಡಿ ಮುನಾವರ್‌ನನ್ನು ಈ ಕೃತ್ಯ ಎಸಗುವಂತೆ ಕಳುಹಿಸಿರುತ್ತಾನೆ ಮತ್ತು ಈ ಕೃತ್ಯದಿಂದ ಸಿಗುವ ಹಣ & ಚಿನ್ನಾಭರಣಗಳನ್ನು ಹಂಚಿಕೊಳ್ಳವ ಬಗ್ಗೆ ನಿರ್ಧರಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿರುತ್ತದೆ. ಸದರಿ ಪ್ರಕರಣ ಮಾಸ್ಟರ್ ಮೈಂಡ್ ಆದ ಪಾಲಿಬೆಟ್ಟ ಗ್ರಾಮದ ನಿವಾಸಿ ಆರೋಪಿ ಮುಜೀದ್‌ನನ್ನು ದಿನಾಂಕ: 23-07-2025 ರಂದು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ ಮತ್ತು ಕೃತ್ಯಕ್ಕೆ ಬಳಸಿದ ಚಾಕು, ಗ್ಲೌಸ್ ಮತ್ತು ಮಾರುತಿ ವ್ಯಾಗನರ್ ಕಾರನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಶ್ರೀ ಕೆ.ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಮತ್ತು ಶ್ರೀ ದಿನೇಶ್ ಕುಮಾರ್.ಬಿ.ಪಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ಶ್ಲಾಘಿಸಿರುತ್ತಾರೆ.