"ಕಾಫಿ ಕಪ್ ಟೇಸ್ಟ್" ಸಂವಾದ ಕಾರ್ಯಕ್ರಮ: ಆಸ್ಟ್ರೇಲಿಯಾದ ಡೆಪ್ಯೂಟಿ ಕೌನ್ಸಿಲ್ ಜನರಲ್‌ರಿಗೆ ಸ್ಥಳೀಯ ಕಾಫಿಯನ್ನು ಪರಿಚಯಿಸುವ ವಿನೂತನ ಕಾರ್ಯಕ್ರಮ

ಮಡಿಕೇರಿ:ಹದವಾದ ನೆರಳಿನಲ್ಲಿ ಬೆಳೆಯುವ ಕೊಡಗಿನ 'ಷೇಡ್ ಕಾಫಿ'ಯ ಸುವಾಸನೆ ಮತ್ತು ಸ್ವಾಧವನ್ನು ವಿಶ್ವ ಸ್ತರದಲ್ಲಿ ಪರಿಚಯಿಸುವ ವ್ಯಾಪಕ ಪ್ರಯತ್ನಗಳಿಂದು ನಡೆಯುತ್ತಿದೆ. ಇದರ ಭಾಗವಾಗಿ ಕೊಡಗಿನ ಕಾಫಿಗೆ ಸುದೂರದ ಆಸ್ಟ್ರೇಲಿಯಾದಲ್ಲಿ ಮಾರುಕಟ್ಟೆಯನ್ನು ದೊರಕಿಸಿಕೊಳ್ಳುವ ದೂರದೃಷ್ಟಿಯ ಚಿಂತನೆಯೊಂದಿಗೆ ಇಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಆಸ್ಟ್ರೇಲಿಯಾದ ಬೆಂಗಳೂರಿನಲ್ಲಿರುವ ಡೆಪ್ಯೂಟಿ ಕೌನ್ಸಿಲ್ ಜನರಲ್‌ರಿಗೆ ಸ್ಥಳೀಯ ಕಾಫಿಯನ್ನು ಪರಿಚಯಿಸುವ ವಿನೂತನ ಕಾರ್ಯಕ್ರಮ ನಡೆಯಿತು.ನಗರದ ಅಂಚಿನಲ್ಲಿರುವ ಬಿಗ್ ಕಪ್ ಹೋಟೆಲ್‌ನಲ್ಲಿ 'ಬಯೋಟ ಕೂರ್ಗ್ ಫಾರ್ಮಿಂಗ್ ಪ್ರೊಡ್ಯೂಸರ್ ಕಂಪೆನಿಯಿಂದ' ಕಾಫಿ ಕಪ್ ಟೇಸ್ಟ್ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು.
ಬಯೋಟ ಕೂರ್ಗ್ ಫಾರ್ಮರ್ ಪ್ರೊಡ್ಯೋಸರ್ ಕಂಪೆನಿ ಎನ್ನುವುದು ಜಿಲ್ಲೆಯ ಸುಮಾರು ೧೨೦ ಕಾಫಿ ಬೆಳೆಗಾರರನ್ನು ಒಳಗೊಂಡ ಸಂಘಟನೆ. ಇದರ ಪದಾಧಿಕಾರಿಗಳು ಮತ್ತು ಸದಸ್ಯರು ತಮ್ಮ ತೋಟಗಳಲ್ಲಿ ಬೆಳೆದ ಷೇಡ್ ರೋಬಸ್ಟಾ ಮತ್ತು ಅರೇಬಿಕಾ ಕಾಫಿಯ ಸ್ವಾಧವನ್ನು ಆಸ್ಟೇಲಿಯದ ಡೆಪ್ಯೂಟಿ ಕೌನ್ಸಿಲ್ ಜನರಲ್ ಸ್ಟೀವನ್ ಕನೋಲಿ ಮತ್ತು ಸ್ಟೆಫಿ ಚೆರಿಯನ್ ಅವರಿಗೆ ಪರಿಚಯಿಸಿದ್ದು ವಿಶೇಷ, ಟೇಬಲ್‌ನಲ್ಲಿ ಅಂದವಾಗಿ ಜೋಡಿಸಿದ್ದ ಹನ್ನೆರಡು ಕಪ್‌ಗಳಲ್ಲಿನ ವಿವಿಧ ಸ್ವಾಧ ಮತ್ತು ಸುವಾಸನೆಯ ಕಾಫಿ ಹುಡಿಯ ಪರಿಮಳವನ್ನು ಮೊದಲು ಪರಿಚಯಿಸಲಾಯಿತಾದರೆ, ಬಳಿಕ ಅದರ ಸ್ವಾದವನ್ನು ಸವಿಯುವ ಅವಕಾಶವನ್ನು ಕಲ್ಪಿಸಲಾಗಿತ್ತು.
ಬಯೋಟ ಸಂಸ್ಥೆಯ ಸಿಇಒ ಕೆ.ಕೆ. ವಿಶ್ವಾಥ್ ಅವರು ಹೇಳುವಂತೆ, ಆಸ್ಟ್ರೇಲಿಯಾವು ಕಾಫಿಯನ್ನು ಮೊದಲಿನಿಂದಲು ಬಳಸುತ್ತಿದೆ. ಆದರೆ, ಇದನ್ನು ಬ್ರಿಟನ್ ಮೊದಲಾದ ಮಾರುಟ್ಟೆಗಳಿಂದ ಅದು ಪಡೆಯುತಿತ್ತು. ಇದೀಗ ನೇರವಾಗಿ ವಿಶ್ವದ ಮತ್ತೆಲ್ಲೂ ಕಾಣದ ಕೊಡಗಿನ ಷೇಡ್ ಕಾಫಿಯನ್ನು ಆಸ್ಟ್ರೇಲಿಯಾದ ಬೆಂಗಳೂರಿನಲ್ಲಿರುವ ಡೆಪ್ಯೂಟಿ ಕೌನ್ಸಿಲ್ ಜನರಲ್‌ರಿಗೆ ಪರಿಚಯಿಸಲಾಗಿದೆ. ಇವರ ಮೂಲಕ ಆಸ್ಟ್ರೇಲಿಯಾದ ಕಾಫಿ ಉದ್ಯಮಿಗಳ ಸಂಪರ್ಕವನ್ನು ಸಾಧಿಸುವ ಮೂಲಕ, 'ಕೊಡಗಿನ ಕಾಫಿ'ಗೆ ಮಾರುಕಟ್ಟೆಯನ್ನು ಕಂಡುಕೊಳ್ಳ್ಳುವ ಪ್ರಯತ್ನ ಇದಾಗಿದೆಯೆಂದು ಸ್ಪಷ್ಟ ಪಡಿಸಿದರು.
ಸಂಪರ್ಕ ಸೇತುವಾಗಿ- ಬಯೋಟ ಕೂರ್ಗ್ ಫಾರ್ಮರ್ ಪ್ರೊಡ್ಯೋಸರ್ ಕಂಪೆನಿಯ ಸದಸ್ಯರು ಅತ್ಯಂತ ಗುಣಮಟ್ಟದ ಕಾಫಿಯನ್ನು ಹದವಾದ ನೆರಳಿನಲ್ಲಿ ಬೆಳೆೆಸುವ ಮೂಲಕ ಅತ್ಯುತ್ಕೃಷ್ಟ ಗುಣಮಟ್ಟವನ್ನು ಕಾಯ್ದುಕೊಂಡಿದೆ. ಅದರಲ್ಲೂ ಪ್ರಮುಖವಾಗಿ ಉತ್ಕೃಷ್ಟ ಮಟ್ಟದ ವಾಶ್ಡ್ ಮತ್ತು ನ್ಯಾಚುರಲ್ ರೋಬಸ್ಟಾ ಕಾಫಿ ಮತ್ತು ಅರೇಬಿಕಾ ಕಾಫಿಯನ್ನು ಉತ್ಪಾದಿಸುತ್ತಿದೆ. ಗುಣಮಟ್ಟದ ಕಾಫಿಯನ್ನು ಉತ್ಪಾದಿಸುತ್ತಿದ್ದರು ಏಕಾಂಗಿಯಾಗಿ ಆಸ್ಟ್ರೇಲಿಯಾದಲ್ಲಿ ಕಾಫಿ ವಹಿವಾಟನ್ನು ಏಕಾಂಗಿಯನ್ನು ನಡೆಸುವುದು ಕಷ್ಟಸಾಧ್ಯ. ಈ ಹಿನ್ನೆಲೆ 'ಸಂಪರ್ಕ ಸೇತು'ವಾಗಿ, ಅಲ್ಲಿನ ಕಾಫಿ ವಹಿವಾಟುದಾರರೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ಮಾಡಿಕೊಡುವಂತೆ ಬಯೋಟ ಸಂಸ್ಥೆಯ ಪ್ರಮುಖರು ಡೆಪ್ಯೂಟಿ ಕೌನ್ಸೆಲ್ ಸ್ಟೀವನ್ ಕನೋಲಿ ಅವರ ಬಳಿ ಸಂವಾದದ ಸಂದರ್ಭ ವಿನಂತಿಸಿಕೊAಡು ಮನವಿಯನ್ನು ಸಲ್ಲಿಸಿದರು.
ಕೊಡಗಿನ ವಿಶಿಷ್ಟ ಕಾಫಿ 'ಕಪ್ ಟೇಸ್ಟಿಂಗ್'ಗೆ ವರ್ಚುವಲ್‌ನಲ್ಲಿ ಅವಕಾಶ ಕಲ್ಪಿಸಿದಲ್ಲಿ,ಅದಕ್ಕೆ ಪೂರ್ವಭಾವಿಯಾಗಿ ಕಾಫಿ ಸ್ಯಾಂಪಲ್‌ಗಳನ್ನು ಒದಗಿಸುವುದಾಗಿಯೂ ಬಯೋಟ ಪ್ರಮುಖರು ಸಭೆಯಲ್ಲಿ ತಿಳಿಸಿದರಲ್ಲದೆ, 'ಕೊಡಗು ಕಾಫಿ'ಯನ್ನು ಆಸ್ಟ್ರೇಲಿಯಾದಲ್ಲಿ ಪ್ರಚುರ ಪಡಿಸುವುದಕ್ಕೆ ಮತ್ತು ಮಾರುಕಟ್ಟೆಗೆ ಒಳಪಡಿಸುವುದಕ್ಕೆ ಪೂರಕವಾದ ವ್ಯವಸ್ಥೆಯನ್ನು ರೂಪಿಸಿಕೊಡುವಂತೆ ಇದೇ ಸಂದರ್ಭ ವಿನಂತಿಸಿಕೊಳ್ಳಲಾಯಿತು.
ಆಸ್ಟ್ರೇಲಿಯಾದಲ್ಲಿ ನಡೆಯುವ ಕಾಫಿ ಮಾರುಕಟ್ಟೆಯ ಕಾರ್ಯಕ್ರಮಗಳು, ಪ್ರದರ್ಶನಗಳಲ್ಲಿ ಪಾಲ್ಗೊಳ್ಳಲು ಅಗತ್ಯ ಅವಕಾಶ ಮತ್ತು ಮಾರ್ಗದರ್ಶನ ಮಾಡಿದಲ್ಲಿ ಕೊಡಗಿನ ಅತ್ಯುತ್ಕೃಷ್ಟ ಕಾಫಿಯ ಹೆಜ್ಜೆಗುರುತುಗಳನ್ನು ಆಸ್ಟ್ರೇಲಿಯಾದಲ್ಲಿ ಮುಡಿಸಲು ಸಾಧ್ಯವೆನ್ನುವ ಆಶಾಭಾವನೆಯನ್ನು ಇದೇ ಸಂದರ್ಭ ಬಯೋಟ ಪದಾಧಿಕಾರಿಗಳು ವ್ಯಕ್ತಪಡಿಸಿದರು.ವಿಶಿಷ್ಟ ಕಾರ್ಯಕ್ರಮದಲ್ಲಿ ಬಯೋಟ ಕೂರ್ಗ್ ಫಾರ್ಮರ್ ಪ್ರೊಡ್ಯೋಸರ್ ಕಂಪೆನಿಯ ನಿರ್ದೇಶಕರು, ಸದಸ್ಯರು ಪಾಲ್ಗೊಂಡಿದ್ದರು.
ಕಾಫಿ ತೋಟಗಳಿಗೆ ಭೇಟಿ- ಆಸ್ಟ್ರೇಲಿಯಾದ ಬೆಂಗಳೂರಿನಲ್ಲಿರುವ ಡೆಪ್ಯೂಟಿ ಕೌನ್ಸಿಲ್ ಜನರಲ್ ಸ್ಟೀವನ್ ಕನೋಲಿ ಮತ್ತು ಸ್ಟೆಫಿ ಚೆರಿಯನ್ ಅವರಿಗೆ ಇಂದು ಬೆಳಗ್ಗೆ ಕೊಡಗಿನ ಕಾಫಿ ತೋಟಗಳನ್ನು ತೋರಿಸಿ, ಅಲ್ಲಿ ಷೇಡ್ ಕಾಫಿಯನ್ನು ಉತ್ಪಾದಿಸುವ ವಿಧಾನಗಳ ಬಗ್ಗೆ ಬಯೋಟ ಪದಾಧಿಕಾರಿಗಳು ಮಾಹಿತಿಯನ್ನು ನೀಡಿದರು.
What's Your Reaction?






