ಶ್ರೀ ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆ: ಶಾಸಕ ಎಎಸ್ ಪೊನ್ನಣ್ಣ ವಿಶೇಷ ಪೂಜೆ

ಪೊನ್ನಂಪೇಟೆ:ನವರಾತ್ರಿ ಉತ್ಸವದ ಆರಂಭ ದಿನವಾದ ಇಂದು, ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪದ ಸ್ವಾತಂತ್ರ ಹೋರಾಟಗಾರರ ಭವನದಲ್ಲಿ ಆಯೋಜಿಸಿದ ಶ್ರೀ ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು ಭಾಗವಹಿಸಿದರು.
ಶ್ರೀ ಚಾಮುಂಡೇಶ್ವರಿ ತಾಯಿಯ ಪ್ರತಿಷ್ಠಾಪನೆ ಕಾರ್ಯಕ್ರಮದ ಬಳಿಕ ಮಾತನಾಡಿದ ಶಾಸಕರು, ನಾಡಿನ ಎಲ್ಲಾ ಜನರು ಶ್ರದ್ಧಾಭಕ್ತಿಯಿಂದ ಆಚರಿಸುವ ಈ ನವರಾತ್ರಿ ಉತ್ಸವದಂದು, ನಾಡಿನ ಸಮಸ್ತ ಜನರಿಗೆ ಆ ತಾಯಿಯ ಕೃಪಾಶೀರ್ವಾದ ದೊರೆಯುವಂತಾಗಲಿ ಎಂದು ಹಾರೈಸಿದರು. ನಮ್ಮ ಪುರಾತನ ಆಚರಣೆ ಹಾಗೂ ನಂಬಿಕೆಯಂತೆ, ಈ ನವರಾತ್ರಿಯ ಸಂದರ್ಭವು ಎಲ್ಲಾ ದುಷ್ಟ ಶಕ್ತಿಗಳನ್ನು ಹೋಗಲಾಡಿಸುವ ದೇವಿಯ ಅವತಾರವನ್ನು ಪೂಜಿಸುವ ದಿನವಾಗಿದೆ. ಆ ಶಕ್ತಿ ಮಾತೆಯು ನಾಡಿನ ಎಲ್ಲರಿಗೂ ಒಳಿತನ್ನು ಮಾಡಿ ದುಷ್ಟತನವನ್ನು ದೂರ ಮಾಡಿ ಸಮಾಜವು ಉತ್ತಮ ಬಾಂಧವ್ಯದೊಂದಿಗೆ ಮುಂದುವರೆಯುವಂತೆ ಹರಿಸಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರು ಅರುಣ್ ಮಾಚಯ್ಯ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಕಾಳಿಮಾಡ ಪ್ರಶಾಂತ್, ಗೋಣಿಕೊಪ್ಪ ಪಂಚಾಯಿತಿ ಅಧ್ಯಕ್ಷರಾದ ಪ್ರಮೋದ್ ಗಣಪತಿ, ಉಪಾಧ್ಯಕ್ಷೆ ಮಂಜುಳಾ, ನಾಯಂದಿರ ಶಿವಾಜಿ, ಎ ಜೆ ಬಾಬು, ಕೆಶೇವ್ ಕಮತ್, ಪೊನಂಪೇಟೆ ಪಂಚಾಯಿತಿ ಅಧ್ಯಕ್ಷರು ಅಣ್ಣೀರ ಹರೀಶ್, ಉಪಾಧ್ಯಕ್ಷರು ಅಲೀರ ರಶೀದ್, ಕೊಕಂಡ ರೋಷನ್, ಗಪು, ಶಾಜಿ ಅಚ್ಚುತನ್, ಚೆಪ್ಪುಡೀರ ಧ್ಯಾನ್, ಕಂದ ದೇವಯ್ಯ, ಟಾಟು ಮೊಣ್ಣಪ್ಪ, ಶೇಖರ್, ಕುಸುಮ, ನೊರೆರ ಧನ್ಯ, ಪ್ರಕಾಶ್, ಶರತ್, ತಿಮ್ಮಯ್ಯ, ಶೋಭಿತ್, ವಿನು, ಚಂದನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಜಮ್ಮಡ ಸೋಮಣ್ಣ, ಪಟ್ಟಡ ರಕ್ಷಿತ್, ಧ್ಯಾನ್, ಮುತಣ್ಣ, ಎಲ್ಲಾ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.