ಪುತ್ತರಿ (ಹುತ್ತರಿ) ಹಬ್ಬಕ್ಕೆ ದಿನಾಂಕ ನಿಗದಿ

ಪುತ್ತರಿ (ಹುತ್ತರಿ) ಹಬ್ಬಕ್ಕೆ ದಿನಾಂಕ ನಿಗದಿ

ಮಡಿಕೇರಿ:ಕೊಡಗು ಜಿಲ್ಲೆಯ ಪ್ರಮುಖ ಹಬ್ಬಗಳಲ್ಲಿ ಒಂದಾದ ಪುತ್ತರಿ(ಹುತ್ತರಿ) ಡಿಸೆಂಬರ್ 4 ರಂದು ರೋಹಿಣಿ ನಕ್ಷತ್ರದಲ್ಲಿ ಪುತ್ತರಿ ಆಚರಣೆಗೆ ನಡೆಯಲಿದೆ. ಸಾವ೯ಜನಿಕರಿಗೆ ರಾತ್ರಿ 8.40 ಗಂಟೆಗೆ ನೆರೆ ಕಟ್ಟುವುದು ರಾತ್ರಿ 9.40 ಗಂಟೆಗೆ ಕದಿರು ತೆಗೆಯುವುದು ಭೋಜನಕ್ಕೆ ರಾತ್ರಿ 10.40 ಗಂಟೆಗೆ ಮುಹೂತ೯ ನಿಗಧಿಯಾಗಿದೆ.

ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಹಬ್ಬದ ಆಚರಣೆ: ರಾತ್ರಿ 8.10 ಗಂಟೆಗೆ ನೆರೆ ಕಟ್ಟುವುದು ರಾತ್ರಿ 9.10 ಗಂಟೆಗೆ ಕದಿರು ತೆಗೆಯುವುದು ಭೋಜನಕ್ಕೆ 10.10 ಗಂಟೆಗೆ ಮುಹೂತ೯ ನಿಗಧಿಯಾಗಿದೆ.