ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷರನ್ನಾಗಿ ಪಾಂಡಂಡ ಬೋಪ್ಪಣ್ಣನವರನ್ನು ಆಯ್ಕೆಮಾಡಲು ಒತ್ತಾಯ!

ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷರನ್ನಾಗಿ ಪಾಂಡಂಡ  ಬೋಪ್ಪಣ್ಣನವರನ್ನು ಆಯ್ಕೆಮಾಡಲು ಒತ್ತಾಯ!

ವರದಿ:ಝಕರಿಯ ನಾಪೋಕ್ಲು

 ನಾಪೋಕ್ಲು :ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷರನ್ನಾಗಿ ಕೊಡವ ಕೌಟುಂಬಿಕ ಹಾಕಿ ಸ್ಥಾಪಕ ದಿವಂಗತ ಪಾಂಡಂಡ ಕುಟ್ಟಪ್ಪ (ಕುಟ್ಟಣಿ) ಯವರ ಮಗ ಸುದು ಬೋಪ್ಪಣ್ಣ ನವರನ್ನು ಆಯ್ಕೆ ಮಾಡುವಂತೆ ಕೊಡವ ಕಲ್ಚರಲ್ & ರಿಕ್ರೀಯೇಶನ್ ಕ್ಲಬ್ ಕರಡ ಒತ್ತಾಯಿಸಿದ್ದಾರೆ.

ಕರಡ ಕೊಡವ ಕಲ್ಚರಲ್ & ರಿಕ್ರೀಯೇಶನ್ ಕ್ಲಬ್ ಸಭಾಂಗಣದಲ್ಲಿ ಕರೆಯಲಾಗಿದ್ದ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಕ್ಲಬ್ ಅಧ್ಯಕ್ಷ ಬೇಪಡಿಯಂಡ ಬಿದ್ದಪ್ಪ 1997 ರಲ್ಲಿ ಪ್ರಪ್ರಥಮ ಬಾರಿಗೆ ಕೊಡವ ಕೌಟುಂಬಿಕ ಹಾಕಿ ಹಬ್ಬವನ್ನು ಕರಡ ಕುಗ್ರಾಮದಲ್ಲಿ ಪಾಂಡಂಡ ಕುಟ್ಟಪ್ಪ (ಕುಟ್ಟಣಿ) ಯವರ ನೇತೃತ್ವದಲ್ಲಿ ಆಯೋಜಿಸಿದ್ದು ಅದು ಇವತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್, ಗಿನ್ನಿಸ್ ವಲ್ಡ್ ರೆಕಾರ್ಡ್ ಕೂಡ ಆಗಿದೆ.

 1997 ರಲ್ಲಿ ಪ್ರಪ್ರಥಮ ಬಾರಿಗೆ ಕೊಡವ ಕುಟುಂಬಗಳ ಹಾಕಿ ಪಂದ್ಯಾಟವನ್ನು ಕರಡ ಮೈದಾನದಲ್ಲಿ ಪಾಂಡಂಡ ಕುಟ್ಟಪ್ಪ (ಕುಟ್ಟಣಿ ) ಮತ್ತು ಕಾಶಿ ಸಹೋದರರು ಪಾಂಡಂಡ ಕಪ್ ಮುಖಾಂತರ ಕರಡ ಅರಪಟ್ಟು ಗ್ರಾಮಗಳನ್ನೊಳಗೊಂಡ ಗ್ರಾಮಸ್ಥರ ಸಮ್ಮುಖದಲ್ಲಿ 60 ಕುಟುಂಬ ತಂಡಗಳ ಮೂಲಕ ಆರಂಭಿಸಲಾಯಿತು.ಇಂದು ಈ ಹಾಕಿ ಹಬ್ಬವು ಜನಪ್ರಿಯತೆ ಪಡೆಯಲು ಮೂಲ ಕಾರಣ ಪಾಂಡಂಡ ಕುಟ್ಟಣಿ ಯವರು.

 ಕೊಡವ ಹಾಕಿ ಅಕಾಡೆಮಿ ಸ್ಥಾಪನೆ ಆಗಲು ಕೂಡ ಕಾರಣ ಪಾಂಡಂಡ ಕುಟ್ಟಣಿಯವರು ಅಂದಿನಿಂದ ಮರಣ ಹೊಂದುವ ತನಕ ಕುಟ್ಟಣಿಯವರೇ ಅಧ್ಯಕ್ಷರಾಗಿದ್ದರು. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಸ್ಥಾಪಕರಾದ ದಿವಂಗತ ಕುಟ್ಟಪ್ಪ (ಕುಟ್ಟಣಿ )ಯವರ ಮಗ ಸುದು ಬೋಪ್ಪಣ್ಣ ನವರನ್ನು 28 ರಂದು ನಡೆಯುವ ಚುನಾವಣೆ ಸಂದರ್ಭ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂದ ಅವರು ಕೆಳೆದ ಬಾರಿ ಅಧ್ಯಕ್ಷರಾಗಿದ್ದ ಇವರು ಉತ್ತಮ ರೀತಿಯಲ್ಲಿ ಅಕಾಡೆಮಿಯನ್ನು ಮುನ್ನಡೆಸಿದ್ದಾರೆ ಎಂದರು. ಕ್ಲಬ್ ನಾ ಕಾರ್ಯದರ್ಶಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಬೇಪಡಿಯಂಡ ವಿಲಿನ್ ಮಾತನಾಡಿ 1997 ರಲ್ಲಿ ಸ್ಥಾಪಿತವಾದ ಹಾಕಿ ಹಬ್ಬ ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪಡೆದಂತಹ ಪಾಂಡಂಡ ಕುಟ್ಟಪ್ಪ (ಕುಟ್ಟಣಿ) ಹುಟ್ಟು ಹಾಕಿದ ಹಾಕಿ ಹಬ್ಬ, ಈ ಹಾಕಿ ಹಬ್ಬ ಕೊಡವರ ಭಾಂದವ್ಯ ಸ್ನೇಹ ಒಗ್ಗಟ್ಟು ಪ್ರದರ್ಶಿಸಲು ಸಹಕಾರಿಯಾಗಿದೆ.

ಯುವ ಪೀಳಿಗೆಯು ರಾಷ್ಟ್ರೀಯ,ಅಂತರ್ರಾಷ್ಟೀಯ ಮಟ್ಟಕ್ಕೆ ಬೆಳೆಯಲು ಅವಕಾಶ ದೊರೆತಿದೆ. ಭವಿಷ್ಯದಲ್ಲಿ ನಡೆಯಲಿರುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಕರಡ ಗ್ರಾಮಸ್ಥರ ಸಂಪೂರ್ಣ ಸಹಕಾರವಿದೆ.ಭವಿಷ್ಯದ ಹಿತದೃಷ್ಟಿಯಿಂದ ಅಧ್ಯಕ್ಷ ಸ್ಥಾನಕ್ಕೆ ಪಾಂಡಂಡ ಕುಟ್ಟಣಿ ಅವರು ಮಾಡಿದ ಸೇವೆಯನ್ನು ನೆನಪಿಟ್ಟು ಅವರ ಮಗನಾದ ಸುದು ಬೋಪಣ್ಣ ನವರಿಗೆ ಆದ್ಯತೆ ನೀಡಿ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಬೇಕು ಎಂದ ಅವರು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷರಾಗಿದ್ದ ಸುದು ಬೋಪ್ಪಣ್ಣ ನವರು ಕ್ರಿಯಾಶೀಲರಾಗಿ ಹಾಕಿ ಅಕಾಡಮಿಯನ್ನು ಈ ಮಟ್ಟಕ್ಕೆ ತರಲು ಮುಖ್ಯ ಕಾರಣರಾದವರು, ಕೌಟಿಂಬಿಕ ಹಾಕಿ ಹಬ್ಬಕ್ಕೆ ಕರಡ ಶಾಲಾ ಮೈದಾನದಲ್ಲಿ ಚಾಲನೆ ನೀಡಿದ ದಿವಂಗತ ಕುಟ್ಟಣಿಯವರಿಗೆ ನೀಡುವ ಗೌರವ ಹಾಗೂ ಅವರ ಬೆಂಬಲಕ್ಕೆ ನಿಂತ ಪಾಂಡಂಡ ಕುಟುಬಸ್ಥರಿಗೆ ಹಾಗೂ ಕರಡ ಗ್ರಾಮದ ಜನತೆಗೆ ನೀವು ಕೊಡುವ ಗೌರವ ಎಂದ ವಿಲಿನ್ ಈ ಬಾರಿಯ ಅಧ್ಯಕ್ಷರಾಗಿ ಸುದು ಬೋಪ್ಪಣ್ಣನವರನ್ನು ಆಯ್ಕೆ ಮಾಡಿ ಎಂದು ಕ್ಲಬ್ ನ ಪರವಾಗಿ ಹಾಗೂ ಗ್ರಾಮಸ್ಥರ ಪರವಾಗಿ ಸುದ್ದಿ ಗೋಷ್ಠಿಯಲ್ಲಿ ಕೇಳಿಕೊಂಡರು.

ಭಗವತಿ ದೇವಸ್ಥಾನ ಅಧ್ಯಕ್ಷ ಸೊಮ್ಮಯ್ಯ ಮಾತನಾಡಿ ಈ ಬಾರಿ ಕೊಡವ ಹಾಕಿ ಅಕಾಡಮಿ ಅಧ್ಯಕ್ಷರನ್ನಾಗಿ ಪಾಂಡಂಡ ಕುಟ್ಟಣಿಯವರ ಮಗ ಸುದು ಬೋಪ್ಪಣ್ಣನವರನ್ನು ಆಯ್ಕೆ ಮಾಡಿ ಎಂದು ಗ್ರಾಮಸ್ಥರ ಪರವಾಗಿ ಹಾಗೂ ಊರಿನ ಪರವಾಗಿ ಕೇಳಿಕೊಂಡರು. ಈ ಸಂದರ್ಭ ಕ್ಲಬ್ ಉಪಾಧ್ಯಕ್ಷರಾದ ಬಿಮ್ಮಯ್ಯ, ಕೋಶಾಧಿಕಾರಿ ಐತಿಚಂಡ ಪ್ರಕಾಶ್ ಕಾರ್ಯಪ್ಪ,ಪಾಂಡಂಡ ಕಿಶನ್, ಕಿರಣ್,ಬೇಪಡಿಯಂಡ ಅಚ್ಚಪ್ಪ,ಅರುಣ್,ನೆರಪಂಡ ಶುಶ,ದೀನಾ,ಕುಶಾಲಪ್ಪ,ಮನ್ನಾ ಕುಟ್ಟಪ್ಪ,ಚಂಗಡ ಕಿಶನ್,ಪಾಲೇಯಂಡ ಉಮೇಶ್,ಕರೋಟ್ಟಿರ ಜಯ ಈರಪ್ಪ ಮತ್ತಿತರರು ಹಾಜರಿದ್ದರು.