ಶಾಸಕ ಪೊನ್ನಣ್ಣ ವಿರುದ್ದ ಅವಹೇಳನ ಕಾಮೆಂಟ್: ಆರೋಪಿ ಶರತ್ ನನ್ನು ಬಂಧಿಸಿದ ಮಡಿಕೇರಿ ನಗರ ಪೋಲೀಸರು
ಮಡಿಕೇರಿ:ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ನವರ ಕುರಿತು ಆಕ್ಷೇಪಾರ್ಹ ಕಾಮೆಂಟ್ ನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ ಕಿಡಿಗೇಡಿಯನ್ನು ಮಡಿಕೇರಿ ನಗರ ಪೋಲೀಸರು ಚೆನ್ನಪಟ್ಟಣ ತಾಲ್ಲೂಕಿನ ಹೊಟ್ಟಗನ ಹೊಸಹಳ್ಳಿ ಗ್ರಾಮದಿಂದ ಬಂಧಿಸಿ ಠಾಣೆಗೆ ಕರೆ ತಂದಿದ್ದಾರೆ.
ಆರೋಪಿಯ ಮೊಬೈಲ್ Advertising ಪೋಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕೊಡಗು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ರವರ ನಿರ್ದೇಶನದ ಮೇರೆಗೆ ಮಡಿಕೇರಿ ನಗರ ವೃತ್ತ ನಿರೀಕ್ಷರಾದ ಪಿ.ಕೆ.ರಾಜು ರವರ ನೇತೃತ್ವದ ಸಿಬ್ಬಂದಿ ವರ್ಗದವರು ಕಿಡಿಗೇಡಿಯನ್ನು ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಕೊಡಗು ಪೋಲೀಸರ ತ್ವರಿತ ಕಾರ್ಯಾಚರಣೆಗೆ ಕೊಡಗಿನಾದ್ಯಂತ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
