ಜೀನದಲ್ಲಿ ಆಹಾರ ಪದ್ದತಿ ಅತ್ಯಮೂಲ: ಡಾ ಮಂತರ್ ಗೌಡ:ಪೊಮ್ಮಕ್ಕಡ ಕೂಟಕ್ಕೆ ಪ್ರತ್ಯೇಕ ಕಟ್ಟಡ ನಿರ್ಮಿಸಲು 20 ಲಕ್ಷ ರೂಗಳ ಅನುದಾನ ನೀಡುವ ಭರವಸೆ ನೀಡಿದ ಶಾಸಕ ಡಾ.ಮಂತರ್ ಗೌಡ

ಜೀನದಲ್ಲಿ ಆಹಾರ ಪದ್ದತಿ ಅತ್ಯಮೂಲ: ಡಾ ಮಂತರ್ ಗೌಡ:ಪೊಮ್ಮಕ್ಕಡ ಕೂಟಕ್ಕೆ ಪ್ರತ್ಯೇಕ ಕಟ್ಟಡ ನಿರ್ಮಿಸಲು 20 ಲಕ್ಷ ರೂಗಳ ಅನುದಾನ ನೀಡುವ ಭರವಸೆ ನೀಡಿದ ಶಾಸಕ ಡಾ.ಮಂತರ್ ಗೌಡ

ಮಡಿಕೇರಿ:ಮನುಷ್ಯ ಆರೋಗ್ಯವಂತರಾಗಿ ಇರಬೇಕು ಅಂದರೆ ಉತ್ತಮ ಆರೋಗ್ಯ ಪದ್ದತಿ ಅತ್ಯಮೂಲವಾದದ್ದು ಎಂದು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ಕಿವಿಮಾತು ಹೇಳಿದ್ದಾರೆ.

ಮಡಿಕೇರಿ ಕೊಡವ ಸಮಾಜದಲ್ಲಿ ನಡೆಯುತ್ತಿರುವ ಕಕ್ಕಡ ನಮ್ಮೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ನಿಸರ್ಗದತ್ತವಾದ ಆಹಾರ ಬಳಕೆ ಮಾಡುವ ಮೂಲಕ ಉತ್ತಮ ಆರೋಗ್ಯವನ್ನು ನಾವು ಪಡೆಯಬಹುದು. ಕೊಡಗಿನಲ್ಲಿ ಕೊಡಗಿನ ಹವಾಗುಣಕ್ಕೆ ತಕ್ಕಂತೆ ಆಹಾರ ಪದ್ದತಿ ಕ್ರಮ ಇದ್ದು ಅದನ್ನು ನಮ್ಮ ಹಿರಿಯರು ಪಾಲಸಿಕೊಂಡು ಇಲ್ಲಿಯವರೆಗೆ ಬಂದಿದ್ದಾರೆ.ಇನ್ನು ಮುಂದಕ್ಕೂ ಕೂಡ ಈ ಪದ್ದತಿ ಮುಂದುವರಿಯಬೇಕು ಎಂದು ಮಂತರ್ ಗೌಡ ಆಶಯ ವ್ಯಕ್ತಪಡಿಸಿದರು.

ಕೊಡವ ಸಮಾಜ ಪೊಮ್ಮಕ್ಕಡ ಕೂಟ ಸಂಸ್ಕೃತಿ ಮತ್ತು ಪರಂಪರೆಯ ಪರವಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದು ಪೊಮ್ಮಕ್ಕಡ ಕೂಟಕ್ಕೆ ಪ್ರತ್ಯೇಕ ಕಟ್ಟಡ ನಿರ್ಮಿಸಲು 20 ಲಕ್ಷ ರೂಗಳ ಅನುದಾನ ನೀಡುವ ಭರವಸೆಯನ್ನು ಡಾ ಮಂತರ್ ಗೌಡ ನೀಡಿದರು.