ಕೊಡಗು ವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿ
ಮಡಿಕೇರಿ, ಡಿ.8 : ಕೊಡಗು ವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಅಂತರಶಾಲಾ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್ 2025–26 ನೆರವೇರಿತು. 80 ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದರು. ಎರಡು ವರ್ಷಗಳಿಂದ ಕೊಡಗು ವಿದ್ಯಾಲಯ ಈ ಪಂದ್ಯಾವಳಿಗೆ ಆತಿಥ್ಯ ವಹಿಸುತ್ತಿದ್ದು, ಈ ಬಾರಿ ಕೂಡ ಅದನ್ನು ಯಶಸ್ವಿಯಾಗಿ ಆಯೋಜಿಸಿತು.
ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್ ಅಧ್ಯಕ್ಷ ಮಲ್ಲೆಂಗಡ ರಚನ್ ಪೊನ್ನಪ್ಪ ದೀಪ ಬೆಳಗಿಸಿ ಪಂದ್ಯಾವಳಿಯನ್ನು ಉದ್ಘಾಟಿಸಿದರು. ಟೇಬಲ್ ಟೆನಿಸ್ ಕ್ರೀಡೆ ಶಿಸ್ತು, ಏಕಾಗ್ರತೆ ಮತ್ತು ಕ್ರೀಡಾತ್ಮಕತೆಯನ್ನು ಬೆಳೆಸುವ ಕ್ರೀಡೆಯಾಗಿದೆ ಎಂದು ರಚನ್ ಪೊನ್ನಪ್ಪ ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿದ ಶಾಲಾ ಆಡಳಿತ ಮಂಡಳಿ ನಿದೇ೯ಶಕ ಗುರುದತ್ ಸಿ. ಎಸ್. ಟೇಬಲ್ ಟೆನಿಸ್ ಮನಸ್ಸಿನ ಏಕಾಗ್ರತೆ ಮತ್ತು ಗಮನವನ್ನು ವೃದ್ಧಿಸುವ ಕ್ರೀಡೆ ಎಂದು ತಿಳಿಸಿದರು.
ಟೇಬಲ್ ಟೆನ್ನಿಸ್ ಟ್ರೈನಿಂಗ್ ಅಕಾಡೆಮಿಯ ಸಂಚಾಲಕ ಹರಿಶಂಕರ್ ಸೇರಿದಂತೆ ಅತಿಥಿಗಳಿಗೆ ಗೌರವ ಸಲ್ಲಿಸಲಾಯಿತು.ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ಆಡಳಿತಾಧಿಕಾರಿ ರವಿ ಪಿ. ಶಾಲಾ ನಿರ್ವಹಣಾ ಮಂಡಳಿ, ಶಿಕ್ಷಕರು, ಪೋಷಕರು ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಜರಿದ್ದರು.
ಪಂದ್ಯಾವಳಿಯ ಫಲಿತಾಂಶಗಳು - :
14 ವಷ೯ದೊಳಗಿನ ವಿದ್ಯಾಥಿ೯ನಿಯರ ಸಿಂಗಲ್ಸ್ ವಿಭಾಗ (ಸಿಂಗಲ್ಸ್ ) - ಪ್ರಥಮ- ಅಮೃತಾ ನೀಲಮ್ಮ (ಕೊಡಗು ವಿದ್ಯಾಲಯ), ದ್ವಿತೀಯ – ಸಾಧನಾ ಕಾವೇರಮ್ಮ (ಕೊಡಗು ವಿದ್ಯಾಲಯ)
14 ವಷ೯ದೊಳಗಿನ ವಿದ್ಯಾಥಿ೯ಗಳ ಸಿಂಗಲ್ಸ್ ವಿಭಾಗ - ಪ್ರಥಮ ದೇವಾರ್ಯ ಎಂ. ವೈ. (ಮೂರ್ನಾಡು ಎಜ್ಯೂಕೇಶನಲ್ ಸೊಸೈಟಿ ಮೂರ್ನಾಡು), ದ್ವಿತೀಯ – ಗಗನ್ ಎಚ್. ಎಸ್. (ಮೋರಾರ್ಜಿ ದೆಸಾಯಿ ವಸತಿ ಶಾಲೆ ಕೂಡಿಗೆ)
18 ವಷ೯ದೊಳಗಿನ ವಿದ್ಯಾಥಿ೯ನಿಯರ ಸಿಂಗಲ್ಸ್ ವಿಭಾಗ - ಪ್ರಥಮ – ಶೀತಲ್ ಎಂ. ಎ. (ಮೋರಾರ್ಜಿ ದೆಸಾಯಿ ವಸತಿ ಶಾಲೆ ಕೂಡಿಗೆ ), ದ್ವಿತೀಯ – ಆದ್ಯಾ ಗಂಗಮ್ಮ ( ಕೊಡಗು ವಿದ್ಯಾಲಯ)
16 ವಷ೯ದೊಳಗಿನ ವಿದ್ಯಾಥಿ೯ಗಳ ಸಿಂಗಲ್ಸ್ ವಿಭಾಗ - ಪ್ರಥಮ - ಅವನೀಶ್ ಕೃಷ್ಣ ಜಿ. ಹೆಚ್. ( ಕೊಡಗು ವಿದ್ಯಾಲಯ) ,ದ್ವಿತೀಯ ಶಿಶಿರ ಜಿ. ಎಸ್. (ಸರ್ಕಾರಿ ಜೂನಿಯರ್ ಕಾಲೇಜು, ಮಡಿಕೇರಿ )
14 ವಷ೯ದೊಳಗಿನ ಡಬಲ್ಸ್ ವಿಭಾಗ - ಪ್ರಥಮ- ಶಶಾಂಕ್ ಎಚ್. ಎಂ. ಮತ್ತು ಗಗನ್ ಎಚ್. ಎಸ್. (ಮೋರಾರ್ಜಿ ದೆಸಾಯಿ ವಸತಿ ಶಾಲೆ ಕೂಡಿಗೆ.), ದ್ವಿತೀಯ – ನಿರಂಜನ್ ಎನ್. ಮಚ್ಚು ಫೆಲಿಕ್ಸ್ ರೋನಾಲ್ಡ್ ಆರ್. (ಕೊಡಗು ವಿದ್ಯಾಲಯ)
18 ವಷ೯ದೊಳಗಿನ ವಿದ್ಯಾಥಿ೯ನಿಯರ ಡಬಲ್ಸ್ ವಿಭಾಗ - ಪ್ರಥಮ - ಶೀತಲ್ ಎಂ. ಎ. ಮತ್ತು ಪ್ರಕೃತಿ ಎಸ್. ಪಿ. (ಮೋರಾರ್ಜಿ ದೇಸಾಯಿ ವಸತಿ ಶಾಲೆ, ಕೂಡಿಗೆ), ದ್ವಿತೀಯ – ಆದ್ಯಾ ಗಂಗಮ್ಮ ಮತ್ತು ಅಮೃತಾ ನೀಲಮ್ಮ (ಕೊಡಗು ವಿದ್ಯಾಲಯ )
16 ವಷ೯ದೊಳಗಿನ ಬಾಲಕರ ಡಬಲ್ಸ್ ವಿಭಾಗ - ಪ್ರಥಮ - ಗಗನ್ ಎಸ್. ಮತ್ತು ಕೌಶಿಕ್ ಕೆ. (ಸರ್ಕಾರಿ ಜೂನಿಯರ್ ಕಾಲೇಜು ಮಡಿಕೇರಿ ), ದ್ವಿತೀಯ – ಶಿಶಿರ ಜಿ. ಎಸ್. ಮತ್ತು ಆರೋನ್ ಎಂ. ವೈ. (ಸರ್ಕಾರಿ ಜೂನಿಯರ್ ಕಾಲೇಜು, ಮಡಿಕೇರಿ )
