ದುಬಾರೆ ಸಾಕಾನೆ ಶಿಬಿರದಲ್ಲಿ ಅನಾರೋಗ್ಯದಿಂದ ಮೃತ ಪಟ್ಟ ಆನೆ
ಕುಶಾಲನಗರ:ಸೋಮವಾರ ದುಬಾರೆ ಸಾಕಾನೆ ಶಿಬಿರದ ತಕ್ಷ ಆನೆಯು ಅನಾರೋಗ್ಯದಿಂದ ಸಾವನಪ್ಪಿರುವ ಘಟನೆ ನಡೆದಿದೆ.
ತಕ್ಷ ಆನೆಯು ದಿನಾಂಕ : 28-12-2024 ರಂದು ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸೆರಹಿಡಿದು ದುಬಾರೆ ಸಾಕಾನೆ ಶಿಬಿರಕ್ಕೆ ಕರೆತರಲಾಯಿತು. ದಿನಾಂಕ : 21-07-2025 ರಂದು ಆನೆಯನ್ನು ಕ್ರಾಲ್ನಿಂದ ಹೊರ ಬಿಡಲಾಗಿತ್ತು.ಕಳೆದ 10 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತಕ್ಷ ಆನೆಯು ದಿನಾಂಕ : 06-12-2025 ರಿಂದ ಆರೋಗ್ಯದಲ್ಲಿ ತೀವು ವ್ಯತ್ಯಾಸ ಕಂಡುಬಂದು ವೈದ್ಯಾಧಿಕಾರಿಯಾದ ಡಾ || ಮುಜೀಬ್ ರವರಿಂದ ಚಿಕಿತ್ಸೆಗೆ ಒಳಪಟ್ಟಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ : 08-12-2025 ರಂದು ಮೃತಪಟ್ಟಿರುತ್ತದೆ.
ದಿನಾಂಕ : 09-12-2025 ರಂದು ಸೊನಲ್ ವಿಷ್ಟಿ, ಅರಣ್ಯ ಸಂರಕ್ಷಣಾಧಿಕಾರಿಗಳು, ಕೊಡಗು ವೃತ್ತ, ಮಡಿಕೇರಿ, ಇವರ ಉಪಸ್ಥಿತಿಯಲ್ಲಿ ಪಶು ವೈದ್ಯಾಧಿಕಾರಿಗಳಾದ ಡಾ|| ಮುಜೀಬ್, ಡಾ|| ಚಿಟ್ಟಿಯಪ್ಪ ಹಾಗೂ ಡಾ|| ಸಂಜೀವ್ ಕುಮಾರ್ ಸಿಂಧೆ ಇವರಿಂದ ಮರಣೋತ್ತರ ಪರೀಕ್ಷೆಯನ್ನು ನಡೆಸಿ ನಂತರ ಸದ್ರಿ ಆನೆಯ ಸ್ಯಾಂಪಲ್ಸ್ ಗಳನ್ನು ಪುಯೋಗಾಲಯಕ್ಕೆ ಕಳುಹಿಸಲಾಗಿರುತ್ತದೆ.
ಸ್ಥಳದಲ್ಲಿಸೋನಲ್ ವಿಷಿ, ಅರಣ್ಯ ಸಂರಕ್ಷಣಾಧಿಕಾರಿಗಳು, ಕೊಡಗು ವೃತ್ತ ಮಡಿಕೇರಿ, ಅಭಿಷೇಕ್ ವಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಮಡಿಕೇರಿ ವಿಭಾಗ, ಮಡಿಕೇರಿ ಹಾಗೂ ಗೋಪಾಲ್ ಎ ಎ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಸೋಮವಾರಪೇಟೆ ಉಪ ವಿಭಾಗ, ಸೋಮವಾರಪೇಟೆ, ರಕ್ಷಿತ್ ಆರ್ ವಲಯ ಅರಣ್ಯಾಧಿಕಾರಿ, ಕುಶಾಲನಗರ ವಲಯ, ಕುಶಾಲನಗರ, ಕೆ ಪಿ ರಂಜನ್, ದುಬಾರೆ ಕ್ಯಾಂಪಿನ ಉಪ ವಲಯ ಅರಣ್ಯಾಧಿಕಾರಿಗಳು, ವೆಂಕಟೇಶ್ ನಲವಾಡಿ, ದುಬಾರೆ ಶಾಖಾ ಉಪ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
