ನಾಪೋಕ್ಲು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಮುಂಡಂಡ ಸುಶೀಲ ಸೋಮಣ್ಣ ನಿಧನ: ಅಂಗಡಿ ಬಂದ್ ಮಾಡಿ ಸಂತಾಪ ಸೂಚಿಸಿದ ವರ್ತಕರು

ನಾಪೋಕ್ಲು :ನಾಪೋಕ್ಲು ಬೇತು ಗ್ರಾಮದ ನಿವಾಸಿ ದಿವಂಗತ ಮುಂಡಂಡ ಸೋಮಣ್ಣ ಅವರ ಪತ್ನಿ ನಾಪೋಕ್ಲು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಮುಂಡಂಡ ಸುಶೀಲ ಸೋಮಣ್ಣ(76)ಅವರು ಗುರುವಾರ ನಿಧನರಾದರು.ಮೃತರು ಇಬ್ಬರು ಪುತ್ರರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯೆಕ್ರಿಯೆಯು ಶುಕ್ರವಾರ ಬೇತು ಗ್ರಾಮದ ಮೃತರ ಸ್ವಗೃಹದಲ್ಲಿ ನೆರವೇರಿಸಲಾಯಿತು. ಸಂತಾಪ: ನಾಪೋಕ್ಲು ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರಾಗಿದ್ದ ಮುಂಡಂಡ ಸುಶೀಲ ಸೋಮಣ್ಣ ಅವರ ನಿಧನಕ್ಕೆ ನಾಪೋಕ್ಲು ಗ್ರಾಮ ಪಂಚಾಯಿತಿ ವತಿಯಿಂದ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಶುಕ್ರವಾರ 12 ರಿಂದ 1ಗಂಟೆಯ ವರೆಗೆ ಮುಚ್ಚಿ ಸಂತಾಪ ಸೂಚಿಸಲಾಯಿತು.