ಸ್ಟಾರ್ ಆಫ್ ಮೈಸೂರು ಮತ್ತು ಮೈಸೂರು ಮಿತ್ರ ಪತ್ರಿಕೆಗಳ ಸಂಸ್ಥಾಪಕ-ಸಂಪಾದಕ ಡಾ.ಕೆ.ಬಿ. ಗಣಪತಿ ನಿಧನ

ಮೈಸೂರು: 'ಸ್ಟಾರ್ ಆಫ್ ಮೈಸೂರು' ಮತ್ತು 'ಮೈಸೂರು ಮಿತ್ರ' ಪತ್ರಿಕೆಗಳ ಸಂಸ್ಥಾಪಕ-ಸಂಪಾದಕ ಗಣಪತಿ (85) ಇಂದು ಬೆಳಗ್ಗೆ ನಗರದಲ್ಲಿ ನಿಧನರಾದರು. ಅವರು ತಮ್ಮ ಪತ್ನಿ ರಾಲಿ ಗಣಪತಿ, ಪುತ್ರರಾದ ವಿಕ್ರಮ್ ಮುತ್ತಣ್ಣ ಮತ್ತು ಮಿಕ್ಕಿ ಬೋಪಣ್ಣ, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಅಪಾರ ಬಂಧುಗಳು, ಸ್ನೇಹಿತರು, ಹಿತೈಷಿಗಳು, ಗೌರವಾನ್ವಿತ ಓದುಗರು, ಜಾಹೀರಾತುದಾರರು ಮತ್ತು ಪೋಷಕರನ್ನು ಅಗಲಿದ್ದಾರೆ. ಪಾರ್ಥಿವ ಶರೀರವನ್ನು ಮಧ್ಯಾಹ್ನ 12 ಗಂಟೆಗೆ ಅವರ ನಿವಾಸಕ್ಕೆ ತರಲಾಗುವುದು. [ವಿಳಾಸ: ‘ಫೋರ್ತ್ ಎಸ್ಟೇಟ್’ #375, 8ನೇ ಮುಖ್ಯ, 9ನೇ ಅಡ್ಡ ಲಲಿತಾದ್ರಿ ರಸ್ತೆ, ಕೆ.ಸಿ. ಲೇಔಟ್, ಮೈಸೂರು - 5700 11]. ಇಂದು (ಜುಲೈ 13) ಸಂಜೆ 4 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.