ಜಿ.ಎಸ್.ಟಿ.ಇಳಿಕೆ: ಕುಶಾಲನಗರ ಎಲ್.ಐ.ಸಿ.ಕಛೇರಿಯಲ್ಲಿ ಸಂಭ್ರಮಾಚರಣೆ

ಜಿ.ಎಸ್.ಟಿ.ಇಳಿಕೆ: ಕುಶಾಲನಗರ ಎಲ್.ಐ.ಸಿ.ಕಛೇರಿಯಲ್ಲಿ  ಸಂಭ್ರಮಾಚರಣೆ

ಕುಶಾಲನಗರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್‌.ಟಿ.) ಸುಧಾರಣಾ ನೀತಿಯು ಸೋಮವಾರ ಜಾರಿಗೆ ಬಂದು ಭಾರತೀಯ ಜೀವವಿಮಾ ನಿಗಮದ ಪಾಲಿಸಿದಾರರು ಪಾವತಿಸುವ ವಿಮಾ ಮೊತ್ತಕ್ಕೆ ಜಿ.ಎಸ್.ಟಿ.ಸಂಪೂರ್ಣವಾಗಿ ಇಳಿಕೆಯಾದ ಹಿನ್ನೆಲೆಯಲ್ಲಿ ಕುಶಾಲನಗರ ಎಲ್.ಐ.ಸಿ. ಉಪಗ್ರಹ ಕಛೇರಿಯಲ್ಲಿ ಜಿ.ಎಸ್.ಟಿ.ಇಳಿಕೆಯ ಸಂಭ್ರಮಾಚರಣೆ* ಯನ್ನು ಆಚರಿಸಲಾಯಿತು.

 ಜಿ.ಎಸ್.ಟಿ.ಇಳಿಕೆಯ ಸಂಭ್ರಮಾಚರಣೆಯಲ್ಲಿ ಜಿ.ಎಸ್.ಟಿ. ತೆರಿಗೆಯು ಶೂನ್ಯ(0%) ಕ್ಕೆ ಕಡಿತಗೊಂಡ ಹಿನ್ನೆಲೆಯಲ್ಲಿ ಎಲ್.ಐ.ಸಿ. ಉಪಗ್ರಹ ಶಾಖಾ ಮೆನೇಜರ್ ಎಸ್.ಬಿ.ಶಿವಪ್ರಸಾದ್ ಸಿಹಿ ಹಂಚಿದರು.

ಎಲ್.ಐ.ಸಿ. ಕಛೇರಿಯಲ್ಲಿ ಸಂಸ್ಥೆಯ ಅಭಿವೃದ್ಧಿ ಅಧಿಕಾರಿಗಳು, ಪ್ರತಿನಿಧಿಗಳು, ಕಛೇರಿಯ ಸಿಬ್ಬಂದಿ ಹಾಗೂ ಪಾಲಿಸಿದಾರರು ಜತೆಗೂಡಿ ಜಿ.ಎಸ್.ಟಿ. ಇಳಿಕೆಯ ಕುರಿತು ಘೋಷಣೆ ಕೂಗುವ ಮೂಲಕ ಸಂಭ್ರಮಿಸಿದರು. ಜಿ.ಎಸ್.ಟಿ.ಇಳಿಕೆಯ ಮಾಹಿತಿ ನೀಡಿದ ಶಾಖಾ ಮೆನೇಜರ್ ಎಸ್.ಬಿ.ಶಿವಪ್ರಸಾದ್ , ಭಾರತೀಯ ಜೀವ ವಿಮಾ ಪಾಲಿಸಿಗಳಿಗೆ ಪಾಲಿಸಿದಾರರು ಪಾವತಿಸುವ ವಿಮಾ ಮೊತ್ತಕ್ಕೆ ಕೇಂದ್ರ ಸರ್ಕಾರವು ಜಿ.ಎಸ್.ಟಿ.ಯನ್ನು ಶೇಕಡಾ ಶೂನ್ಯ( 0%) ಕ್ಕೆ ಇಳಿಸಿರುವುದರಿಂದ ಪಾಲಿಸಿದಾರರಾದ ಗ್ರಾಹಕರು ತಮ್ಮ ಉಳಿತಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಎಲ್.ಐ.ಸಿ.ಯಲ್ಲಿ ಮಾಡಲು ಸಾಧ್ಯವಿದೆ ಎಂದರು.

ಎಲ್.ಐ.ಸಿ.ಪಾಲಿಸಿದಾರರು ತಾವು ಪಾವತಿಸುತ್ತಿದ್ದ ವಿಮಾ ಮೊತ್ತದಲ್ಲಿ ಈ ಹಿಂದೆ ಶೇಕಡಾ 4.5 ರಿಂದ 18 ರಷ್ಟು ಜಿ.ಎಸ್.ಟಿ. ತೆರಿಗೆಯನ್ನು ವಿಧಿಸಲಾಗುತ್ತಿತ್ತು. ಇದೀಗ ಜಿ.ಎಸ್.ಟಿ. ಹೊರೆಯನ್ನು ಸಂಪೂರ್ಣವಾಗಿ ಇಳಿಕೆ ಮಾಡಿರುವುದರಿಂದ ನಾಗರಿಕರು ಇನ್ನುಮುಂದೆ ವಿಮಾ ಪಾಲಿಸಿ ಮಾಡಿಸಲು ಹೆಚ್ಚಿನ ಅನುಕೂಲವಾಗಲಿದೆ. ಆದ್ದರಿಂದ, ನಾಗರಿಕರು ಭವಿಷ್ಯದಲ್ಲಿ ತಮ್ಮ ಕುಟುಂಬದ ಭದ್ರತೆ ಹಾಗೂ ಉಳಿತಾಯದ ದೃಷ್ಠಿಯಿಂದ ಎಲ್.ಐ.ಸಿ. ಪಾಲಿಸಿಗಳನ್ನು ಪಡೆದುಕೊಳ್ಳಬೇಕು ಎಂದು ಮೆನೇಜರ್ ಶಿವಪ್ರಸಾದ್ ಮನವಿ ಮಾಡಿದರು.

 ಈ ಸಂಭ್ರಮಾಚರಣೆಯಲ್ಲಿ ಎಲ್.ಐ.ಸಿ.ಅಭಿವೃದ್ಧಿ ಅಧಿಕಾರಿಗಳಾದ ಡಿ.ಎಚ್.ಸತೀಶ್, ಎಂ.ಡಿ.ಅಶೋಕ್, ಉಲ್ಲಾಸ ಕೃಷ್ಣ, ಎಲ್.ಐ.ಸಿ.ಅಸೋಸಿಯೇಟ್ ಎನ್.ಡಿ.ಯೋಗೇಶ್, ಪ್ರತಿನಿಧಿಗಳಾದ ಕೆ.ಆರ್.ಸುಬ್ರಮಣ್ಯ, ಎಸ್.ಎಸ್.ಚಂದ್ರಶೇಖರ್, ಕೆ.ಸಿ.ಮೋಹನ್, ಟಿ.ಬಿ.ಜಗದೀಶ್, ವೀರಭದ್ರೇಗೌಡ, ಡಿ.ಸಿ.ಶಿವಣ್ಣ, ಎಚ್.ಎನ್.ದಿನೇಶ್ ಕುಮಾರ್, ಟಿ.ಎಸ್.ರಾಜಶೇಖರ್, ಹೇಮಲತಾ, ರೋಸ,ತಾರಾ ಭಟ್, ಪ್ರವೀಣ ಸೇರಿದಂತೆ ಕಛೇರಿಯ ಸಿಬ್ಬಂದಿ ಹಾಗೂ ವಿಮಾ ಪಾಲಿಸಿದಾರರು ಇದ್ದರು.