ಕೊಡಗಿನ ಶಾಸಕದ್ವಯರಿಗೆ ಸಚಿವ ಸ್ಥಾನ ನೀಡಿ: ಪಂಚಾಯತ್ ರಾಜ್ ಸಂಘಟನೆ ಆಗ್ರಹ

ಕೊಡಗಿನ ಶಾಸಕದ್ವಯರಿಗೆ ಸಚಿವ ಸ್ಥಾನ ನೀಡಿ: ಪಂಚಾಯತ್ ರಾಜ್  ಸಂಘಟನೆ ಆಗ್ರಹ
ತೆನ್ನಿರಾ ಮೈನಾ

ಮಡಿಕೇರಿ: ರಾಜ್ಯ ಸಚಿವ ಸಚಿವ ಸಂಪುಟ ಪರಿಷ್ಕರಣೆಯಲ್ಲಿ ಕೊಡಗು ಜಿಲ್ಲೆಯ ಇಬ್ಬರು ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ರವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕೊಡಗು ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ಅಗ್ರಹಿಸಿದ್ದಾರೆ.

ಎ.ಐ.ಸಿ.ಸಿ ಆಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ,ಕೇಂದ್ರ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ,ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರಿಗೆ ಪತ್ರ ಮುಖೇನ ಮನವಿ ಸಲ್ಲಿಸಿರುವ ತೆನ್ನಿರ ಮೈನಾ ರವರು ಪ್ರಸ್ತುತ ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ರವರು ತಮ್ಮ ಕ್ರಿಯಾಶೀಲ ಕಾರ್ಯಚಟುವಟಿಕೆಗಳಿಂದ ರಾಜ್ಯದ ನಂ 1 ಶಾಸಕರುಗಳಾಗಿ ಗುರುತಿಸಿಕೊಂಡಿದ್ದಾರೆ.

 ಅ‌ನುದಾನದ ಸಮರ್ಪಕ ಬಳಕೆ,ಆರ್ಥಿಕ ಶಿಸ್ತು ಪಾಲನೆ,ಕಾರ್ಯಾಂಗದಲ್ಲಿ ಹಿಡಿತ, ಶ್ರೀಸಾಮಾನ್ಯ ರೊಂದಿಗೆ ನಿರಂತರ ಸಂಪರ್ಕ, ಹೊಂದಿರುವುದನ್ನು ಮನವಿಯಲ್ಲಿ ಉಲ್ಲೇಖಿಸಿ ಇವರಿಗೆ ಮಂತ್ರಿ ಪದವಿ ನೀಡಿದಲ್ಲಿ ರಾಜ್ಯಕ್ಕೆ ಒಳಿತಾಗುವುದರೊಂದಿಗೆ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ವಿನಂತಿಸಿಕೊಂಡಿದ್ದಾರೆ.