ಗೋಣಿಕೊಪ್ಪ ದಸರಾ ಜನೋತ್ಸವ ಕಾರ್ಯಕ್ರಮ ಉದ್ಘಾಟನೆ

ಕೊಡಗು ಜಿಲ್ಲಾಡಳಿತ ಹಾಗೂ ಶ್ರೀ ಕಾವೇರಿ ದಸರಾ ಸಮಿತಿ ಗೋಣಿಕೊಪ್ಪ, ಇವರ ಸಹಯೋಗದಲ್ಲಿ ಆಯೋಜನೆಗೊಂಡ 47ನೇ ಗೋಣಿಕೊಪ್ಪ ದಸರಾ ಜನೋತ್ಸವ 2025 ಕಾರ್ಯಕ್ರಮವು ಸೋಮವಾರ ಸಂಜೆ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು. ಕೊಡಗು ಜಿಲ್ಲಾಡಳಿತ ಹಾಗೂ ಶ್ರೀ ಕಾವೇರಿ ದಸರಾ ಸಮಿತಿ ಗೋಣಿಕೊಪ್ಪ, ಇವರ ಸಹಯೋಗದಲ್ಲಿ ಆಯೋಜನೆಗೊಂಡ 47ನೇ ಗೋಣಿಕೊಪ್ಪ ದಸರಾ ಜನೋತ್ಸವ 2025 ಕಾರ್ಯಕ್ರಮವು ಸೋಮವಾರ ಸಂಜೆ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್ ಭೋಸ ರಾಜು,ಎಂಎಲ್ಸಿ ಸುಜಾ ಕುಶಾಲಪ್ಪ,ಕಾವೇರಿ ದಸರಾ ಸಮಿತಿಯ ಅಧ್ಯಕ್ಷರಾದ ಕುಲಚಂಡ ಪ್ರಮೋದ್ ಗಣಪತಿ, ಉಪಾಧ್ಯಕ್ಷೆ ಮಂಜುಳಾ, ಜಿಲ್ಲಾಧಿಕಾರಿಗಳಾದ ವೆಂಕಟರಾಜ, ಪೊಲೀಸ್ ವರಿಷ್ಠ ಅಧಿಕಾರಿಗಳಾದ ರಾಮರಾಜನ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಾದ ಶ್ರೀ ಆನಂದ್ ಪ್ರಕಾಶ್ ಮೀನಾ, ಉಪ ವಿಭಾಗಾಧಿಕಾರಿಗಳಾದ ನಿತಿನ್ ಚಕ್ಕಿ, ಮಾಜಿ ವಿಧಾನ ಪರಿಷತ್ ಸದಸ್ಯರು ಅರುಣ್ ಮಾಚಯ್ಯ, ವಿಧಾನ ಪರಿಷತ್ ಸುಜಾ ಕುಶಾಲಪ್ಪ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಕಾಳಿಮಾಡ ಪ್ರಶಾಂತ್, ತಹಶೀಲ್ದಾರ್ ಮೋಹನ್, ಶ್ರೀ ಕಾವೇರಿ ದಸರಾ ಸಮಿತಿಯ ಕಾರ್ಯಧ್ಯಕ್ಷರಾದ ಅಜಿತ್ ಅಯ್ಯಪ್ಪ, ಗೌರವ ಸಲಹೆಗಾರರು ಪ್ರಕಾಶ್, ಅಧ್ಯಕ್ಷರು ಮೆರ್ಚೆಂಟ್ ಬ್ಯಾಂಕ್ ಅರುಣ್ ಪೂಣಚ್ಚ, ಚೇಂಬರ್ ಆಫ್ ಕಾಮರ್ಸ್ ಸುನಿಲ್ ಮಾದಪ್ಪ, ಮಾಜಿ ಅಧ್ಯಕ್ಷರು ಕಾವೇರಿ ದಸರಾ ಸಮಿತಿಯ ಮುಕುಂದ, ಕಂದ ದೇವಯ್ಯ, ಯುವ ದಸರಾ ಅಧ್ಯಕ್ಷ ಅಂಕಿತ್ ಪೊನ್ನಪ್ಪ, ನಾಯಂದಿರ ಶಿವಾಜಿ, ಧ್ಯಾನ್, ಕೊಕ್ಕಂಡ ರೋಷನ್, ದಿಲಾನ್ ಚಂಗಪ್ಪ, ವಿನು, ಚಂದನ್, ಶೋಭಿತ್, ಶೀಲಾ, ಚಂದನ, ಕುಸುಮ, ನೂರೆರ ಧನ್ಯ, ಅಂಕಿತ್, ರಾಜ, ಕೆಶೇವ್ ಕಾಮತ್, ಪೂನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರು ಅಲೀರ ರಶೀದ್, ಅಣ್ಣಳಮಾಡ ಹರೀಶ್ ಪೂವಯ್ಯ, ಕೂಪಣ್ಣಮಾಡ ಪ್ರೀತಮ್, ಕುಂಡಚೀರ ಮಂಜು ದೇವಯ್ಯ, ಭವಿನ್, ರಫೀಕ್, ಜಿಲ್ಲಾಡಳಿತದ ಪ್ರಮುಖರು ಹಾಗೂ ಸಮಿತಿ ಸದಸ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಗೋಣಿಕೊಪ್ಪ ದಸರಾ ಜನೋತ್ಸವವು ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರನ್ನು ಆಕರ್ಷಿಸುತ್ತಿದ್ದು, ಕ್ಷೇತ್ರದ ಹಾಗೂ ನಾಡಿನ ಕೀರ್ತಿಯನ್ನು ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಪಸರಿಸುವಂತೆ ಮಾಡಿದೆ ಎಂದು ವ್ಯಾಖ್ಯಾನಿಸಿದರು. ರಾಜ್ಯ ಸರ್ಕಾರವು ಪ್ರತಿವರ್ಷದಂತೆ ಈ ವರ್ಷವೂ ಈ ಉತ್ಸವಕ್ಕೆ ಅನುದಾನವನ್ನು ಬಿಡುಗಡೆ ಮಾಡಿದ್ದು ಇದನ್ನು ಸದುಪಯೋಗಪಡಿಸಿಕೊಂಡು ಗೋಣಿಕೊಪ್ಪ ದಸರಾದ ಕೀರ್ತಿಯನ್ನು ಮತ್ತಷ್ಟು ಪ್ರಜ್ವಲಿಸುವಂತೆ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು. ದಸರಾ ಕಾರ್ಯಕ್ರಮವು ನಾಡಿನಲ್ಲಿ ಒಗ್ಗಟ್ಟು ಸಹಬಾಳ್ವೆ ಹಾಗೂ ಶಾಂತಿಯ ಸಂದೇಶವನ್ನು ಸಾರುವಂಥ ಆಗಲಿ ಎಂದು ಬಣ್ಣಿಸಿದ್ದರು.