ಗೋಣಿಕೊಪ್ಪ ಆಟೋ ಡ್ರೈವರ್ ಹತ್ಯೆ ಪ್ರಕರಣ: ಅನೈತಿಕ ಸಂಬಂಧಕ್ಕೆ ಬಲಿಯಾಯಿತೇ ನವಾಜ್!

ಗೋಣಿಕೊಪ್ಪ ಆಟೋ ಡ್ರೈವರ್ ಹತ್ಯೆ ಪ್ರಕರಣ:  ಅನೈತಿಕ ಸಂಬಂಧಕ್ಕೆ ಬಲಿಯಾಯಿತೇ ನವಾಜ್!

ಪೊನ್ನoಪೇಟೆ: ತಾಲೂಕಿನ ಹಾತೂರು ಕುದ್ದಾರಸ್ತೆಯಲ್ಲಿ ಮರಣಾಂತಿಕ ಹಲ್ಲೆಯಲ್ಲಿ ಮೃತಪಟ್ಟ ಡ್ರೈವರ್ ನವಾಜ್ ಎಂಬುವನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗೋಣಿಕೊಪ್ಪಲು ಪೊಲೀಸರು ನಾಲ್ಕರಿಂದ, ಐದು ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. 

ಪ್ರಥಮಿಕ ತನಿಖೆಯಲ್ಲಿ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. 

ಹಾತೂರು-ಕುಂದ ರಸ್ತೆಯಲ್ಲಿರುವ ಕಾಫಿ ಕ್ಯೂರಿಂಗ್ ಘಟಕದ ಲಾರಿ ಡ್ರೈವರ್ ರವರ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಮೃತಪಟ್ಟ ನವಾಜ್ ಗೆ, ಸಹಪಾಠಿ ಡ್ರೈವರ್ ರವರ ಪತ್ನಿ ಯೊಂದಿಗೆ ಸಂಬಂಧವಿರುವ ಬಗೆ ಅನುಮಾನ ವ್ಯಕ್ತವಾಗಿದೆ.

 ಈ ಹಿಂದೆ ಈ ಸಂಬಂಧ ಕಲಹ ಏರ್ಪಟ್ಟು ಪೊಲೀಸ್ ಠಾಣೆಯ ಮೆಟ್ಟಿಲೇರಲಾಗಿತ್ತು. ಆದರೆ ನವಾಜ್ ತನ್ನ ಚಾಳಿಯನ್ನು ಮುಂದುವರಿಸಿದ್ದಾನೆ ಎನ್ನಲಾಗುತ್ತಿದೆ. ನಿನ್ನೆ ರಾತ್ರಿ ಕುಶಾಲನಗರದ ಮೂಲದ ಪ್ರಸ್ತುತ ಕಾಫಿ ಕ್ಯೂರಿಂಗ್ ವರ್ಕ್ನ ಆವರಣದಲ್ಲಿ ವಾಸಿವಿರುವ ಡ್ರೈವರ್ ಪೂರ್ಣಚಂದ್ರ ತೇಜಸ್ವಿ ಹಾಗೂ ಇತರರು ನವಾಜ್ ಕಾರಿನಲ್ಲಿ ಆಗಮಿಸಿದಾಗ ಆತನನ್ನು ಸೆರೆ ಹಿಡಿದು ರಾಡುಗಳಲ್ಲಿ ಆತನನ್ನು ತಳಿಸಿ ರಸ್ತೆ ಸಮೀಪ ಬಿಟ್ಟು ಹೋಗಿದ್ದರು. ನಂತರ ಪೊಲೀಸರಿಗೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿ ಆತನನ್ನು ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಒಳಪಡಿಸಿದಾಗ ಕೆಲವೇ ಕ್ಷಣಗಳಲ್ಲಿ ಆತ ಮೃತಪಟ್ಟಿದ್ದನು.

ಘಟನೆ ಸಂಬಂಧ ಗೋಣಿಕೊಪ್ಪಲು ಪೊಲೀಸರು ಇದೀಗ ಐವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.  ಶಂಕಿತರಿಂದ ಸಂಪೂರ್ಣ ವಿವರ ಪಡೆದು ಆರೋಪಿಗಳೆಲ್ಲರ ಬಂಧನವಾಗುವ ಸಾಧ್ಯತೆ ಇದೆ. 

 ಆರೋಪಿಗಳೆಲ್ಲರೂ ಪೂರ್ಣಚಂದ್ರ ತೇಜಸ್ವಿ ಡ್ರೈವರ್ ಹಾಗೂ ಆತನ ಸ್ನೇಹಿತರಾಗಿದ್ದಾರೆ ಎಂದು ಹೇಳಲಾಗಿದೆ.ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.