ಸರ್ಕಾರ ಆಟೋಗಳಿಗೆ ಜಿಲ್ಲಾ ಪರ್ಮಿಟ್ ನೀಡಬಾರದು: ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್‌ ಟ್ರೇಡ್ ಯೂನಿಯನ್ ಆಗ್ರಹ

ಸರ್ಕಾರ ಆಟೋಗಳಿಗೆ ಜಿಲ್ಲಾ ಪರ್ಮಿಟ್ ನೀಡಬಾರದು: ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್‌ ಟ್ರೇಡ್ ಯೂನಿಯನ್ ಆಗ್ರಹ

ಮಡಿಕೇರಿ: ಸರ್ಕಾರ ಆಟೋಗಳಿಗೆ ಜಿಲ್ಲಾ ಪರ್ಮಿಟ್ ನೀಡಬಾರದು ಎಂದು ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್‌ ಟ್ರೇಡ್ ಯೂನಿಯನ್ ಆಗ್ರಹಿಸಿದೆ.

 ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರ್ನಾಟಕ ಟ್ಯಾಕ್ಸಿ ಡ್ರ್ರೈವರ್ಸ್‌ ಟ್ರೇಡ್ ಯೂನಿಯನ್ ರಾಜ್ಯ ಸಂಘಟನಾ ಕಾರ್ಯದರ್ಶಿ ವಿನ್ಸೆಂಟ್ ಬಾಬು ಅವರು, ಇತ್ತೀಚೆಗೆ ಕೊಡಗು ಜಿಲ್ಲಾ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ವತಿಯಿಂದ ೫೫ ಕಿ.ಮೀ ವರೆಗೆ ಆಟೋ ಸಂಚರಿಸಲು ಅನುಮತಿಗೆ ಆಗ್ರಹಿಸಿ ಸಾರಿಗೆ ಸಚಿವರಿಗೆ ಮನವಿ ಮಾಡಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಎಂದು ಆಗ್ರಹಿಸಿರುವ ಅವರು, ಇಂದು ಜಿಲ್ಲೆಯಲ್ಲಿ ವೈಟ್ ಬೋರ್ಡ್ ವಾಹನಗಳ ಹಾವಳಿಯಿಂದ ಸರಿಯಾದ ಬಾಡಿಗೆ ಸಿಗುತ್ತಿಲ್ಲ.

ಪರಿಣಾಮ ಟ್ಯಾಕ್ಸಿ ಚಾಲಕರು ಬಾಡಿಗೆ ಇಲ್ಲದೇ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಇದರ ನಡುವೆ ಆಟೋ ಚಾಲಕರಿಗೆ ಜಿಲ್ಲಾ ಪರವಾನಿಗೆ ನೀಡಿದರೆ, ಸರ್ಕಾರಕ್ಕೆ ತೆರಿಗೆ ಕಟ್ಟುವ ಟ್ಯಾಕ್ಸಿ ಚಾಲಕರು ಏನು ಮಾಡಬೇಕು ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್‌ ಟ್ರೇಡ್ ಯೂನಿಯನ್ ಜಿಲ್ಲಾಧ್ಯಕ್ಷ ಕೆ.ಎಂ.ಪರುಶುರಾಮ್, ಉಪಾಧ್ಯಕ್ಷ ಅಖಿಲ್ ಶಿವಾಜಿ, ಸಂಘಟನಾ ಕಾರ್ಯದರ್ಶಿ ಎಂ.ರಫಿಕ್, ಕೋಶಾಧಿಕಾರಿ ಎ.ಸಿ.ಲೋಕೇಶ್ ಇದ್ದರು.