ತೋಳೂರುಶೆಟ್ಟಳ್ಳಿಯಲ್ಲಿ ಅದ್ಧೂರಿ ಗೌರಿ-ಗಣೇಶೋತ್ಸವ

ತೋಳೂರುಶೆಟ್ಟಳ್ಳಿಯಲ್ಲಿ ಅದ್ಧೂರಿ ಗೌರಿ-ಗಣೇಶೋತ್ಸವ

ಸೋಮವಾರಪೇಟೆ: ಸಮೀಪದ ತೋಳೂರು ಶೆಟ್ಟಳ್ಳಿಯ ಶುಭಾಶದ ನಗರದಲ್ಲಿ ಶ್ರೀ ವಿನಾಯಕ ಯುವಕ ಸಂಘದ ವತಿಯಿಂದ 9ನೇ ವರ್ಷದ ಗೌರಿ ಗಣೇಶ ಮೂರ್ತಿ ವಿಸರ್ಜನ ಕಾರ್ಯಕ್ರಮ ಸೋಮವಾರ ನಡೆಯಿತು

. ಡಿಜೆ ಸೌಂಡ್ ಹಾಗೂ ಗೊಂಬೆ ಕುಣಿತದೊಂದಿಗೆ ವಿದ್ಯುತ್ ದೀಪಾಲಂಕಾರಗೊಂಡ ವಾಹನದಲ್ಲಿ ಗೌರಿ ಗಣೇಶ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ನಡೆಸಿ, ತೋಳುರುಶೆಟ್ಟಳ್ಳಿಯ ಬಸವೇಶ್ವರ ದೇವಸ್ಥಾನದ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.

ಈ ಸಂದರ್ಭ ಯುವಕ ಸಂಘದ ಅಧ್ಯಕ್ಷ ಟಿ.ಏನ್.ಬಸವರಾಜು, ಕಾರ್ಯದರ್ಶಿ ಕೆ.ಎಸ್.ನಂದೀಶ್, ಖಜಾಂಚಿ ಸತೀಶ್ (ದಾಮು), ಟಿ.ವಿ.ಅಭಿಜಿತ್, ಚಂದನ್, ರಾಜೇಶ್, ದರ್ಶನ್ ಮತ್ತು ಅರ್ಚಕ ಸುಧಾಕರ್ ಜೈನ್ ಮುಂತಾದವರು ಉಪಸ್ಥಿತರಿದ್ದರು.