ಹಾರಂಗಿ ಹಿನ್ನೀರು ದುರಂತ : ಓರ್ವನ ಮೃತ ದೇಹ ಪತ್ತೆ
ಮಡಿಕೇರಿ:ಇಂದು ಮಧ್ಯಾಹ್ನ ಹೇರೂರು ಸಮೀಪದ ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟ ಇಬ್ಬರು ವಿದ್ಯಾರ್ಥಿಗಳ ಪೈಕಿ ಒಬ್ಬನ ಮೃತದೇಹ ನೀರಿನಲ್ಲಿ ಪತ್ತೆ ಆಗಿದೆ.
ಮಡಿಕೇರಿ ಜೂನಿಯರ್ ಕಾಲೇಜಿನ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿ, ಹೆಬ್ಬಟಗೇರಿಯ ಪುವಯ್ಯ ಎಂಬುವವರ ಪುತ್ರ ಚಂಗಪ್ಪ (17) ರವರ ಮೃತ ದೇಹವನ್ನು ಪತ್ತೆಹಚ್ಚಿ ನೀರಿನಿಂದ ಮೇಲಕ್ಕೆ ತರಲಾಗಿದೆ. ಇದೇ ಕಾಲೇಜಿನ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿ, ಮಡಿಕೇರಿ
ರಾಜಸೀಟ್ ನಿವಾಸಿ ತಿಮ್ಮಯ್ಯರವರ ಪುತ್ರ ತರುಣ್ ತಮ್ಮಯ್ಯ (17) ರವರ ಮೃತದೇಹ ಪತ್ತೆ ಆಗಿರುವುದಿಲ್ಲ. ಸಂಜೆ ಕತ್ತಲಾವರಿಸಿದ್ದರಿಂದ ಮತ್ತು ಕಾಡಾನೆಗಳ ಹಾವಳಿ ಇರುವುದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಮಡಿಕೇರಿ ಜೂನಿಯರ್ ಕಾಲೇಜಿನ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿ, ರಾಣಿಪೇಟೆಯ ಮುತ್ತಣ್ಣರವರ ಪುತ್ರ ನವೀನ್ ಪೊನ್ನಪ್ಪ (17) ಎಂಬಾತ ಈಜಿನ ನಡುವೆ ದಡಕ್ಕೆ ಬಂದು ಜೀವ ಉಳಿಸಿಕೊಂಡಿದ್ದಾನೆ.
ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್ ರಾಜ್ ಮತ್ತು ಸಿಬ್ಬಂದಿಗಳು, ಕುಶಾಲನಗರ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮತ್ತು ದುಬಾರೆ Rafting ತಂಡದವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
