ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿ ವಿಜೇತರ ವಿವರ ಇಲ್ಲಿದೆ ನೋಡಿ

ಮಡಿಕೇರಿ:-ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ನಡೆಯಿತು. ಮುಖ್ಯ ಅತಿಥಿಯಾಗಿ ಲೀಲಾ ರಾಘವನ್, ಗುರುದತ್ತ್, ಕೆ.ಎನ್.ಪ್ರವೀಣ್ ಶೇಟ್, ಇತರರು ಪಾಲ್ಗೊಂಡಿದ್ದರು. ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯ ಸಮಾರೋಪ ಸಮಾರಂಭವು ಭಾನುವಾರ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಸೋಮವಾರಪೇಟೆಯ ಅನಂತರಾಜ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಬಹುಮಾನ ವಿತರಿಸಿದರು.. ಕೆ.ಎನ್.ಪ್ರವೀಣ್ ಶೇಟ್ ಅವರು ಅಧ್ಯಕ್ಷತೆ ವಹಿಸಿದ್ದರು. ಲೀಲಾ ರಾಘವನ್, ಹರಿಶಂಕರ್, ಅಜರ್ ವಾಸಿನ್, ಕುಮಾರೇಷ್ ವಿ.ಎಸ್.ಮೊಹಮ್ಮದ್ ಆಸಿಪ್, ಟೇಬಲ್ ಟೆನ್ನಿಸ್ ಆಟಗಾರರಾದ ಪಿ.ಎನ್.ಮಂಜುನಾಥ್ ಇತರರು ಇದ್ದರು. ರಶ್ಮಿ ಪ್ರವೀಣ್ ಮತ್ತು ಪೃಥ್ವಿ ಅವರು ಸ್ವಾಗತಿಸಿದರು.
ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ವಿಜೇತರಾದವರ ವಿವರ:
13 ವರ್ಷದೊಳಗಿನ ಸಿಂಗಲ್ಸ್ ಬಾಲಕರ ವಿಭಾಗದಲ್ಲಿ ಸುದೀಪ್ ಎನ್.(ಪ್ರಥಮ), ಡಿವಿನ್ ಗೌಡ(ದ್ವಿತೀಯ), 13 ವರ್ಷದೊಳಗಿನ ಸಿಂಗಲ್ಸ್ ಬಾಲಕಿಯರ ವಿಭಾಗದಲ್ಲಿ ಲಿಪಿಕ (ಪ್ರಥಮ), ನಿಮ್ರಾ(ದ್ವಿತೀಯ). 17 ವರ್ಷದೊಳಗಿನ ಸಿಂಗಲ್ಸ್ ಬಾಲಕರ ವಿಭಾಗದಲ್ಲಿ ಲಿತೇಶ್ (ಪ್ರಥಮ), ಅಯಿಜನ್‌ವಾಷಿಮ್(ದ್ವಿತೀಯ), ಬಾಲಕಿಯರ ವಿಭಾಗದಲ್ಲಿ ಫಿದಾ(ಪ್ರಥಮ), ಬೃಂದಾ(ದ್ವಿತೀಯ), 17 ವರ್ಷದೊಳಗಿನ ಡಬಲ್ಸ್ ಬಾಲಕರ ವಿಭಾಗದಲ್ಲಿ ಆಯಿಜನ್ ವಾಷಿಮ್ ಮತ್ತು ಅವನೀಶ್(ಪ್ರಥಮ), ಲಿತೇಶ್ ಮತ್ತು ವಿಶ್ವಾಸ್(ದ್ವಿತೀಯ), ಬಾಲಕಿಯರ ವಿಭಾಗದಲ್ಲಿ ಫಿಧಾ ಮತ್ತು ಹೇಮನಿ(ಪ್ರಥಮ), ಬೃಂದಾ ಮತ್ತು ಕಾವೇರಮ್ಮ(ದ್ವಿತೀಯ). ಪುರುಷರ ಸಿಂಗಲ್ಸ್ ವಿಭಾಗದಲ್ಲಿ ರಚನ್ ಪೊನ್ನಪ್ಪ (ಪ್ರಥಮ), ಡೇರಿಕ್(ದ್ವಿತೀಯ), ಮಹಿಳಾ ವಿಭಾಗದಲ್ಲಿ ಫಿದಾ (ಪ್ರಥಮ), ಶಾಂತಿ ದೇವರಾಜ್(ದ್ವಿತೀಯ), ಪುರುಷರ ಡಬಲ್ಸ್ ವಿಭಾಗದಲ್ಲಿ ಈಶ್ವರ್ ಮತ್ತು ಲಿತೇಶ್(ಪ್ರಥಮ), ಹರಿಶಂಕರ್ ಮತ್ತು ಆಯಿಜನ್(ದ್ವಿತೀಯ), ಮಹಿಳಾ ವಿಭಾಗದಲ್ಲಿ ಪೂವಮ್ಮ ಮತ್ತು ಬೃಂದಾ(ಪ್ರಥಮ), ಸಿಂಚನ ಮತ್ತು ಶೀತಲ್(ದ್ವಿತೀಯ), 50 ವರ್ಷ ಮೇಲ್ಪಟ್ಟವರಲ್ಲಿ ಪುರುಷರ ವಿಭಾಗದಲ್ಲಿ ಪ್ರವೀಣ್ ಶೇಟ್(ಪ್ರಥಮ), ಅಜರ್ ವಾಷಿಮ್(ದ್ವಿತೀಯ), 60 ವರ್ಷ ಮೇಲ್ಪಟ್ಟವರಲ್ಲಿ ಬಿ.ಎಲ್.ಹರೀಶ್(ಪ್ರಥಮ), ಆಸಿಪ್ ಮೊಹಮ್ಮದ್(ದ್ವಿತೀಯ), ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಶಾಂತಿ(ಪ್ರಥಮ), ಪುಷ್ಪಾ(ದ್ವಿತೀಯ) ಹಾಗೂ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರವೀಣ್ ಮತ್ತು ಅಜರ್(ಪ್ರಥಮ), ಬಿ.ಎಲ್.ಹರೀಶ್(ದ್ವಿತೀಯ), ಗುಂಪು ವಿಭಾಗದಲ್ಲಿ ರಚನ್ ಮತ್ತು ಪೂವಮ್ಮ(ಪ್ರಥಮ), ಪ್ರವೀಣ್ ಮತ್ತು ಸಿಂಚನ(ದ್ವಿತೀಯ) ಸ್ಥಾನ ಪಡೆದಿದ್ದಾರೆ.