ಚೆಟ್ಟಳ್ಳಿ ಗ್ರಾ.ಪಂ ಮುಂಭಾಗದಲ್ಲಿ ನಿವೇಶನ ರಹಿತರಿಗೆ ನಿವೇಶ ನೀಡುವಂತೆ ಆಗ್ರಹಿಸಿ ಮುಷ್ಕರ

ಚೆಟ್ಟಳ್ಳಿ:ನಿವೇಶನ ರಹಿತರಿಗೆ ನಿವೇಶ ನೀಡಿ ಮನೆ ನಿರ್ಮಿಸಿ ಕೊಡುವಂತೆ ಒತ್ತಾಯಿಸಿ ಚೆಟ್ಟಳ್ಳಿಯಲ್ಲಿ ನಿವೇಶನ ರಹಿತ ಹೋರಾಟ ಸಮಿತಿ ವತಿಯಿಂದ ಒಂದು ದಿನದ ಅನಿರ್ದಿಷ್ಟಾವಧಿ ಮುಷ್ಕರ ಚೆಟ್ಟಳ್ಳಿ ಗ್ರಾ.ಪಂ ಮುಂಭಾಗದಲ್ಲಿ ನಡೆಯಿತು.
ಈ ಸಂದರ್ಭ ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಮಾತನಾಡಿ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಂತವಾಗಿ ವಾಸಿಸಲು ಮನೆಯಿಲ್ಲದೆ ಸುಮಾರು ನೂರಕ್ಕಿಂತಲೂ ಹೆಚ್ಚು ಕುಟುಂಬಗಳು ಸುಮಾರು ವರ್ಷಗಳಿಂದ ಬಾಡಿಗೆ ಮನೆ ತೋಟದ ಲೈನ್ ಮನೆ ಸಂಬಂಧಿಕರ ಆಶ್ರಯದಲ್ಲಿ ಬದುಕುತ್ತಿರುವ ಕುಟುಂಬಗಳು ಮನೆ ಇಲ್ಲದೆ ಅಪಾಯಕಾರಿ ಪ್ರದೇಶಗಳಲ್ಲಿಯೂ ಬದುಕು ನಡೆಸುತ್ತಿದ್ದಾರೆ ಹುಟ್ಟಿನಿಂದಲೂ ಈ ರೀತಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ವಾತಂತ್ರ್ಯ ಬಂದು 77 ವರ್ಷಗಳಾಗಿವೆ ಸಂವಿಧಾನ ಜಾರಿಯಾಗಿ 25 ವರ್ಷಗಳು ಕಳೆದಿದ್ದರೂ ಮಹಾತ್ಮ ಗಾಂಧೀಜಿಯವರ ರಾಮರಾಜ್ಯದ ಕನಸು ಈಡೇರಲಿಲ್ಲ. ಸಂವಿಧಾನ ಆಶಯಗಳು ಜಾರಿ ಮಾಡಲು ಸಾಧ್ಯವಾಗದ ಕಾರಣಕ್ಕಾಗಿ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆದಿವಾಸಿ ದಲಿತ ಹಿಂದುಳಿದ ವರ್ಗ ಅಲ್ಪಸಂಖ್ಯಾತ ಇನ್ನೂ ಅನೇಕ ಸಮುದಾಯಗಳು ಬದುಕುವ ನೈಜ ಸ್ವಾತಂತ್ರ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗವು ಒತ್ತುವರಿಯಾಗಿದ್ದು ಉಳ್ಳವರ ಪಾಲಾಗಿದೆ.
ಸರ್ಕಾರವನ್ನು ಒತ್ತುವರಿದಾರರಿಂದ ಬಿಡಿಸಿ ಬಡಕುಟುಂಬಕ್ಕೆ ನಿವೇಶನ ನೀಡಿ ಮನೆ ಕಟ್ಟಿಕೊಡಲು ಹತ್ತಾರು ವರ್ಷಗಳಿಂದ ಬೇಡಿಕೆ ಇಟ್ಟು ಗ್ರಾಮಪಂಚಾಯಿತಿಯ ಮುಂಭಾಗ ಹಲವು ಬಾರಿ ಹೋರಾಟ ರೂಪಿಸಿದ್ದರೂ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷದಿಂದ ಬಡವರಿಗೆ ಸೂರು ಕೊಡಲು ಸಾಧ್ಯವಾಗಲಿಲ್ಲ. 2004 ರಲ್ಲಿ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಬಕ್ಕ, ಬ್ಯಾರಿಂಗ್ ವ್ಯಾಪ್ತಿಯಲ್ಲಿ ನಾಲ್ಕುವರೆ ಎಕರೆ ಜಾಗವನ್ನು ಗುರುತಿಸಿದ್ದರೂ ಜಾಗವನ್ನು ಒತ್ತುವರಿದಾರರಿಂದ ತೆರವು ಮಾಡಿಸಿ ಭೂಮಿಯನ್ನು ಸಮತಟ್ಟು ಮಾಡಿಸದೆ ನಿರ್ಲಕ್ಷ್ಯ ವಹಿಸಲಾಗಿದೆ.
ಈಗಾಗಲೇ ಕಂಡಕೆರೆ ಗ್ರಾಮ ದಲ್ಲಿ ಗುರುತಿಸಿದ ಜಾಗವನ್ನು ಸರಿಯಾದ ರೀತಿಯಲ್ಲಿ ಪಟ್ಟಿ ತಯಾರಿ ಮಾಡದೆ ಇಚ್ಛೆ ಬಂದ ರೀತಿಯಲ್ಲಿ ನಿವೇಶನ ಹಂಚುವ ಕೆಲಸ ನಡೆಯುತ್ತಿದೆ ಎಂದರು ಮುಂದಿನ ದಿನಗಳಲ್ಲಿ ಬೇಡಿಕೆಗಳ ಬಗ್ಗೆ ರವಿನ್ನೂ ಮತ್ತು ಪಂಚಾಯಿತಿ ಹೋರಾಟಗಾರರ ಜೊತೆಯಲ್ಲಿ ಚರ್ಚಿಸಲು ಅವಕಾಶ ನೀಡದಿದ್ದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ತೀವ್ರ ರೀತಿಯ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಸಂದರ್ಭ ಹೋರಾಟಗಾರರು ಎಚ್ಚರಿಕೆ ನೀಡಿದರು.
ಕೊಡಗು ಜನರಲ್ ಯೂನಿಯನ್ ವರ್ಕರ್ಸ್ ನ ಜಿಲ್ಲಾ ಅಧ್ಯಕ್ಷ ಹೆಚ್.ಪಿ.ರಮೇಶ್, ಹೋರಾಟ ಸಮಿತಿಯ ಸಂಚಾಲಕ ಜಯರಾಮ್, ಗಂಗಾಧರ್, ಕೃಷ್ಣಕುಮಾರ್, ಎಂ.ಆರ್. ಕಮಲ,ಪುಷ್ಪ, ಸರಸು,ರಮ್ಯಾ, ಕನ್ಯಾಕುಮಾರಿ,ಸೇರಿದಂತೆ ನಿವೇಶ ರಹಿತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು