ಕರ್ನಾಟಕ ಯಾವ ದೇಶದಲ್ಲಿ ಇದೆ...? ಅನ್ನೋದೇ ಈಗ ಸಂಶಯ: ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಕಿಡಿ..!!

ಕರ್ನಾಟಕ ಯಾವ ದೇಶದಲ್ಲಿ ಇದೆ...? ಅನ್ನೋದೇ ಈಗ ಸಂಶಯ: ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಕಿಡಿ..!!

ಮಡಿಕೇರಿ:- ಮದ್ದೂರಿನಲ್ಲಿ ಗಣೇಶೋತ್ಸವ ಗಲಾಟೆ ಹಾಗೂ ಭದ್ರಾವತಿಯಲ್ಲಿ ಪಾಕಿಸ್ತಾನಕ್ಕೆ ಘೋಷಣೆ ಕೂಗಿದ್ದ ವಿಚಾರವಾಗಿ ಪ್ರಸ್ತುತ ಕರ್ನಾಟಕ ಯಾವ ದೇಶದಲ್ಲಿ ಇದೆ.ಅನ್ನೋದೇ ಈಗ ಸಂಶಯ ಕಾಡುತ್ತಿದೆ ಎಂದು ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾಡಿದ್ದಾರೆ.ಕೊಡಗಿನ ಮಡಿಕೇರಿ ತಾಲೂಕಿನ ಕಾಲೂರು ಗ್ರಾಮದಲ್ಲಿ ಮಾತಾನಾಡಿದ ಅವರು.ಪ್ರಸ್ತುತ ಈಗಿನ ಸರ್ಕಾರದಿಂದ ಹಿಂದುಗಳ ಹಬ್ಬ ಅಡಚಣೆ ಮಾಡುವಾಗ ಭಯದಲ್ಲೇ ಮಾಡಬೇಕು.ಹಿಂದುಗಳ ಮೇಲೆ FIR ಗಳನ್ನು ಹಾಕಿಸಿಕೊಳ್ಳಬೇಕು.ಅನ್ನೋ ರೀತಿಯಲ್ಲಿ ತಯಾರು ಆಗಿರಬೇಕು. ಆದರೆ ಅಲ್ಪಸಂಖ್ಯಾತರು ಏನನ್ನೂ ಬೇಕಾದರು ಮಾಡಬಹುದು. ಮದ್ದೂರಿನಲ್ಲಿ ಕಲ್ಲು ತೂರಿದ್ರು.ಶಿವಮೊಗ್ಗ ಭದ್ರಾವತಿಯಲ್ಲಿ ಓಪನ್‌ ಅಗಿ ಪಾಕಿಸ್ತಾನಕ್ಕೆ ಜೈ ಅನ್ನುತ್ತಾರೆ.ಈಗಾಗಲೇ ಎಸ್ ಪಿ ಅವರು ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದವರನ್ನು ಒದ್ದು ಒಳಗೆ ಹಾಕಬೇಕು.

ದೇಶ ದ್ರೋಹದ ಕೇಸ್ ಹಾಕಿ ಗೂಂಡ ಕಾಯ್ದೆ ಅಡಿಯಲ್ಲಿ 6 ತಿಂಗಳು ಜೈಲಿನಲ್ಲಿ ಇಡಬೇಕು ಜಾಮೀನು ನೀಡದೇ ಇರುವ ರೀತಿಯಲ್ಲಿ ಸೆಕ್ಷನ್ ಹಾಕಬೇಕು. ಅದರೆ ಇದೀಗಾ ಕಾಂಗ್ರೆಸ್ ಸರ್ಕಾರ ಬಂದಿರುವುದರಿಂದ ಅವರಿಗೆ ಏನೋ ಒಂದು ಕೇಸ್ ಹಾಕುತ್ತಾರೆ.ಒಂದಷ್ಟು ದಿನ ಜೈಲಿನಲ್ಲಿ ಇರೋದು ಹೊರಗೆ ಬರೋದು‌ ಅನ್ನೋ ಮನಸ್ಥಿತಿ ಬಂದಿದೆ. ಮೊನ್ನೆ ಕ್ಯಾಬಿನೆಟ್ ನಲ್ಲಿ 168 ಕೇಸ್ ವಾಪಸು ತೆಗೆದುಕೊಂಡಿದ್ದಾರೆ ಹೀಗಾಗಿ ಅವರು ಬಾಲ ಬಿಚ್ಚುತ್ತ ಇದ್ದಾರೆ. ಹೀಗಾಗಿ ಅಲ್ಪಸಂಖ್ಯಾತರು ಹೈ ಹಮರ ಸರ್ಕಾರ ಕುಚ್ಚುಬಿ ನೈಯಿ‌ ಎಂದು ಈ ರೀತಿಯ ಆಟ ಆಡುತ್ತಾರೆ. ಈಗಾಗಲೇ ಶಿವಮೊಗ್ಗ ಸೂಕ್ಷ್ಮ ಜಿಲ್ಲೆ ಮೊದಲೇ ಕೊಲೆಗಳು ಆಗಿದೆ.ಹಿಂದು ಯುವಕರ‌ ಹತ್ಯೆ ಆಗಿದೆ.ಅಂತಹ ಜಾಗದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿದವರನ್ನ ಸುಮ್ಮನೆ ಬೀಡುತ್ತಿರ.?‌ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ ಎಂದು ಹೇಳುತ್ತಾರೆ. ಸಿಸಿಟಿವಿ ಹಾಕಿದ್ದಾರೆ ಎನ್ನುತ್ತಾರೆ. ಹದ್ದುಗಳು ಎಲ್ಲಾ ಈಗಾ ಕಾಗೆಗಳು ಆಗಿದ್ದೀರಾ! ಪೊಲೀಸರು ಅವರ ಹಾಗೆ ಕಾ.ಕಾ.. ಎಂದು ಹೇಳಿಕೊಂಡು ಇದ್ದಾರ.? ಎಂದು ಅಕ್ರೋಶ ಹೋರ ಹಾಕಿದರು. ಇದೇ ರೀತಿಯಲ್ಲಿ ಮುಂದುವರೆದ್ದಾರೆ ಭವಿಷ್ಯ ಹಿಂದುಗಳಿಗೆ ಯಾವುದೇ ರಕ್ಷಣೆ ಇಲ್ಲ ಅನ್ನೋ ಭಾವನೆ ಕಾಡುತ್ತದೆ. ಹೆಣ್ಣು ಮಕ್ಕಳ‌ ಮೇಲೆ ಲಾಠಿ ಚಾಜ್೯ ಮಾಡುತ್ತಾರೆ. ಸಿದ್ದರಾಮಯ್ಯ ಅವರು ಹಾಗೂ ಗೃಹ ಮಂತ್ರಿಗಳು ‌ತಕ್ಷಣವೇ ರಾಜಿನಾಮೆ ನೀಡಬೇಕು ಇಲ್ಲದೇ ಹೋದರೆ ರಾಜ್ಯಪಾಲರು ಈ ಸರ್ಕಾರವನ್ನು ವಜಾ ಮಾಡಲ್ಲಿಕ್ಕೆ ತಕ್ಷಣವೇ ರಾಷ್ಟ್ರಪತಿ ಶಿಪರಾಸು ಮಾಡಬೇಕು ಎ‌ಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.