ಫೆ.11ರಂದು ನಾಪೋಕ್ಲುವಿನಲ್ಲಿ ಮಸ್ಜಿದು ತೌಹೀದ್ ನೂತನ ಮಸೀದಿ ಉದ್ಘಾಟನೆ ಹಾಗೂ ದಅವಾ ಸಮ್ಮೇಳನ

ಫೆ.11ರಂದು ನಾಪೋಕ್ಲುವಿನಲ್ಲಿ ಮಸ್ಜಿದು ತೌಹೀದ್ ನೂತನ ಮಸೀದಿ ಉದ್ಘಾಟನೆ ಹಾಗೂ ದಅವಾ ಸಮ್ಮೇಳನ

ವರದಿ :ಝಕರಿಯ ನಾಪೋಕ್ಲು ನಾಪೋಕ್ಲು : ಫೆ.11ರಂದು ನಾಪೋಕ್ಲುವಿನ ಬೇತು ರಸ್ತೆಯಲ್ಲಿ ಅಲ್ ನೂರ್ ವೆಲ್ಫೇರ್ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಮಸ್ಜಿದು ತೌಹೀದ್ ನೂತನ ಮಸೀದಿ ಉದ್ಘಾಟನಾ ಸಮಾರಂಭ ಹಾಗೂ ದಅವಾ ಸಮ್ಮೇಳನ ನಡೆಯಲಿದೆ. ಫೆ.11ರಂದು ಸಂಜೆ 4ಗಂಟೆಗೆ ನೂತನ ಮಸೀದಿಯ ಉದ್ಘಾಟನೆ ನಡೆಯಲಿದ್ದು ವಿಸ್ಡಮ್ ಇಸ್ಲಾಮಿಕ್ ಆರ್ಗನೈಸೇಷನ್ ಅಧ್ಯಕ್ಷರಾದ ಪಿ.ಎನ್.ಅಬ್ದುಲ್ ಲತೀಫ್ ಮದನಿ ಅವರು ನೂತನ ಮಸೀದಿಯನ್ನು ಉದ್ಘಾಟಿಸಲಿದ್ದಾರೆ.

 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ, ಕರ್ನಾಟಕ ಸಲಫಿ ಅಸೋಸಿಯೇಷನ್ ಅಧ್ಯಕ್ಷ ಹಫೀಸ್ ಸ್ವಲಾಹಿ,ಖಲೀಲ್ ತಲಪ್ಪಾಡಿ,ಶಿಹಾಬ್ ತಲಪ್ಪಾಡಿ,ಡಾ.ಸಣ್ಣುವಂಡ ಕಾವೇರಪ್ಪ ನಾಪೋಕ್ಲು, ನಾಪೋಕ್ಲು ಪೊಲೀಸ್ ಉಪನಿರೀಕ್ಷಕರಾದ ಪಿ.ಜಿ. ರಾಘವೇಂದ್ರ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಪಿ.ಎಂ. ಖಾಸಿಂ,ನಾಪೋಕ್ಲು ಗ್ರಾಮ ಪಂಚಾಯತಿ ಸದಸ್ಯರಾದ ಕುಶು ಕುಶಾಲಪ್ಪ, ಮಹಮ್ಮದ್ ಖುರಶಿ, ಅರುಣ್ ಬೇಬ,ಇಸ್ಮಾಯಿಲ್ ಭಾಗವಹಿಸಲಿದ್ದಾರೆ. ಮಸೀದಿ ಉದ್ಘಾಟನಾ ಸಮಾರಂಭದ ಪ್ರಯುಕ್ತ ಸಂಜೆ 7 ಗಂಟೆಯಿಂದ ಮೌಲವಿ ಶಿಹಾಬ್ ಎಡಕ್ಕರ ಹಾಗೂ ಮುನೀರ್ ಶರಫಿ ಅವರ ನೇತೃತ್ವದಲ್ಲಿ ದಅವಾ ಸಮ್ಮೇಳನ ನಡೆಯಲಿದೆ ಎಂದು ಮಸ್ಜಿದು ತೌಹೀದ್ ನಾಪೋಕ್ಲು ಇದರ ಆಡಳಿತ ಮಂಡಳಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.