ದ್ವಿತೀಯ ಟೆಸ್ಟ್ ನಲ್ಲಿ ಭಾರತಕ್ಕೆ ಹೀನಾಯ ಸೋಲು: 408 ರನ್‌ಗಳ ಅಂತರದಲ್ಲಿ ಜಯಿಸಿದ ದಕ್ಷಿಣ ಆಫ್ರಿಕಾ : 2-0 ಅಂತರರಿಂದ ಸರಣಿ ಜಯ
ಗುವಾಹಟಿ: ಆತಿಥೇಯ ಭಾರತ ತಂಡಕ್ಕೆ ತವರಿನಲ್ಲೇ ಗಂಭೀರ ಮುಖಭಂಗವಾಗುವಂತೆ ದಕ್ಷಿಣ ಆಫ್ರಿಕಾ ತಂಡ ಎರಡನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ 408 ರನ್‌ಗಳ ಅಂತರದ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಅತಿಥೇಯರು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0ರಲ್ಲಿ ಗೆದ್ದರು.
ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನೀಡಿದ್ದ 549 ರನ್‌ಗಳ ಗುರಿ ಬೆನ್ನತ್ತುವಾಗ ಭಾರತ, ತಂಡವು ಎರಡನೇ ಇನಿಂಗ್ಸ್‌ನಲ್ಲಿ ಕೇವಲ 140 ರನ್‌ಗಳಿಗೆ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾ ಬೌಲರ್‌ಗಳ ಶಿಸ್ತುಬದ್ಧ ದಾಳಿಯ ಎದುರು ಭಾರತೀಯ ಬ್ಯಾಟಿಂಗ್ ಸಂಪೂರ್ಣ ಕುಸಿಯಿತು.
ಭಾರತದ ಪರ ಪ್ರತಿರೋಧ ತೋರಿದ ರವೀಂದ್ರ ಜಡೇಜ 54 ರನ್‌ಗಳ ಹೋರಾಟದ ಇನ್ನಿಂಗ್ಸ್ ಆಡಿದರು. ಉಳಿದ ಯಾವುದೇ ಬ್ಯಾಟರ್ ಗಳಿಂದ ಯಾವುದೇ ಮಟ್ಟದ ಪ್ರತಿರೋಧ ಸಿಗಲಿಲ್ಲ.
ತವರಿನಲ್ಲೇ ಇಂತಹ ಅಂತರದ ಸೋಲು ಕಂಡಿರುವುದು ತಂಡ ನಿರ್ವಹಣೆ ಹಾಗೂ ಬ್ಯಾಟಿಂಗ್ ಘಟಕದ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ದಕ್ಷಿಣ ಆಫ್ರಿಕಾ ತಂಡದ ಶ್ರೇಷ್ಠ ಬೌಲಿಂಗ್ ಹಾಗೂ ಒಗ್ಗಟ್ಟಿನ ಪ್ರದರ್ಶನವೇ ಈ ಮಹತ್ವದ ಗೆಲುವಿಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
