ಕೊಡಗು ಕಾಂಗ್ರೆಸ್ ನಿಂದ ಇಂದಿರಾಗಾಂಧಿ ಜನ್ಮದಿನಾಚರಣೆ

ಕೊಡಗು ಕಾಂಗ್ರೆಸ್ ನಿಂದ ಇಂದಿರಾಗಾಂಧಿ ಜನ್ಮದಿನಾಚರಣೆ

ಮಡಿಕೇರಿ:ಕೊಡಗು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ದೇಶದ ಪ್ರಥಮ ಮಹಿಳಾ ಪ್ರಧಾನಿ ಭಾರತರತ್ನ ಇಂದಿರಾಗಾಂಧಿ ರವರ 108 ನೇ ಜನ್ಮ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಪುಷ್ಪಲತಾ ರವರು ಮತ್ತು ಮಹಿಳಾ ಪದಾಧಿಕಾರಿಗಳು ಕೇಕ್ ಕತ್ತರಿಸಿ ಸಂಭ್ರಮಿಸಿದರು.

ನಂತರ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎ.ಹಂಸ ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ,ಜಿಲ್ಲಾ ಕಾಂಗ್ರೆಸ್ ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್,ನಗರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ ರವರು ಇಂದಿರಾ ರವರ ಸಾಧನೆ ಕುರಿತು ವಿವರಿಸಿದರು.

 ಮೂಡಾ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ,ನಾಪೋಕ್ಲು ಗ್ರಾಮ ಪಂಚಾಯತಿ ಅಧ್ಯಕ್ಷರಾದ ವನಜಾಕ್ಷಿ ,ಮಾಜಿ ನಗರ ಸಭೆ ಅಧ್ಯಕ್ಷರಾದ ಜುಲೇಕಾಬಿ, ಪ್ರಮುಖರಾದ ಕೆ.ಜೆ.ಪೀಟರ್,ನಗರ ಸಭೆ ಸದಸ್ಯ ಮುದ್ದುರಾಜ್, ಮೀನಾಜ್ ಪ್ರವೀಣ್,ಮುನೀರ್ ಮಾಚರ್,ಶಶಿಕಲಾ,ರಾಜೇಶ್ವರಿ,ತುಳಸಿ ಗಾಂಧಿ ಪ್ರಸಾದ್,ಲೀಲಾ ಶೇಷಮ್ಮ,ಉದಯ ಚಂದ್ರಿಕಾ,ಅಮೀನಾ,ಬಿಂದು,ವಿಮಲ, ಗಿರಿಜಮ್ಮ,ದಿವ್ಯ ಪೆರುಮಂಡ, ಮಮ್ತಾಜ್ ಬೇಗಂ,ಹೇಮಾವತಿ,ಪ್ರೇಮಾ ಕೃಷ್ಣಪ್ಪ, ಹೆಚ್.ಕೆ.ಪ್ರೇಮ, ಚಂದ್ರವತಿ,ಶಾರದಾ, ಸದಾನಂದ ಬಂಗೇರ,ರಾಜು, ರಿಯಾಜುದ್ದೀನ್, ನಜೀರ್,ಗಿರಿಜ,ರಾಣಿ,ಉಷಾ ಮತ್ತಿತರರು ಉಪಸ್ಥಿತರಿದ್ದರು.