ನಾಳೆ ಕಲ್ಲುಬಾಣೆಯಲ್ಲಿ ಇಶ್ಕ್ ಮಜ್ಲಿಸ್ ಕಾರ್ಯಕ್ರಮ: ಯಶಸ್ಸುಗೊಳಿಸಲು ಸಹದ್ ಫೈಝಿ ಚೋಕಂಡಳ್ಳಿ ಕರೆ

ನಾಳೆ ಕಲ್ಲುಬಾಣೆಯಲ್ಲಿ ಇಶ್ಕ್ ಮಜ್ಲಿಸ್ ಕಾರ್ಯಕ್ರಮ: ಯಶಸ್ಸುಗೊಳಿಸಲು ಸಹದ್ ಫೈಝಿ ಚೋಕಂಡಳ್ಳಿ ಕರೆ

ವಿರಾಜಪೇಟೆ:ವಿರಾಜಪೇಟೆ ಸ್ವದೇಶಿ ರೇಂಜ್ ವತಿಯಿಂದ ಸೆಪ್ಟೆಂಬರ್ 19ರಂದು ನಡೆಯಲಿರುವ ಇಶ್ಕ್ ಮಜ್ಲಿಸ್ ಹಾಗೂ ನಾಲಂಗೇರಿ ಉಸ್ತಾದ್ ಅವರ ದುವಾ ಸಂಗಮ ವಿಜಯಗೊಳಿಸಲು ಸ್ವದೇಶಿ ರೇಂಜ್ ಕಾರ್ಯದರ್ಶಿ ಸಹದ್ ಫೈಝಿ ಚೋಕಡಳ್ಳಿ ಕರೆ ನೀಡಿದ್ದಾರೆ.

 ಸಮಸ್ತ ಕೇರಳ ಜಂ ಯ್ಯತುಲ್ ಮುಅಲಿಮೀನ್ ನಿರ್ದೇಶ ಪ್ರಕಾರ ಪ್ರವಾದಿ ಮುಹಮ್ಮದ್ ಸ.ಅ ಆವರ 1500 ನೇ ಜನ್ಮ ದಿನದ ಅಂಗವಾಗಿ ಕಲ್ಲುಬಾಣೆಯಲ್ಲಿ ಸೆಪ್ಟೆಂಬರ್ 19 ಶುಕ್ರವಾರ ಮಗ್ರಿಬ್ ನಮಾಝ್ ಬಳಿಕ ನಡೆಯಲಿರುವ ಬೃಹತ್ ಇಶ್ಕ್ ಮಜ್ಲಿಸ್ ಕಾರ್ಯಕ್ರಮ ಸಮಸ್ತ ಕೇರಳ ಜಂಇಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯ ಶೈಖುನಾ ಎಂ ಎಂ ಅಬ್ದುಲ್ಲಾ ಫೈಝಿ ಉಸ್ತಾದ್ ಉದ್ಘಾಟನೆ ಮಾಡಲಿದ್ದಾರೆ. ಉಸ್ಮಾನ್ ಫೈಝಿ ದುವಾ ನೆರವೇರಿಸಲಿದೆ. ಹಾರಿಸ್ ಬಾಖವಿ ಮತ್ತು ಸಂಗಡಿಗರ ಬುರ್ದಾ ಆಲಾಪನೆ ಇದ್ದು, ಸಮಸ್ತ ಉಲಮಾ ಉಮರಾ ನೇತಾರರು ಹಾಗೂ ರಾಜಕೀಯ ನಾಯಕರು ಸಂಘಟನೆಯ ಕಾರ್ಯಕರ್ತರು ಪಾಲ್ಗೊಳ್ಳುವ ಕಾರ್ಯಕ್ರಮ ಎಲ್ಲರೂ ಬಂದು ಸಹಕರಿಸಿ ವಿಜಯಗೊಳಿಸಬೇಕೆಂದು‌ ರೇಂಜ್ ಕಾರ್ಯದರ್ಶಿ ಸಹದ್ ಫೈಝಿ ಚೋಕಡಳ್ಳಿ ತಿಳಿಸಿದ್ದಾರೆ.