ಸೆಪ್ಟೆಂಬರ್ 19ರಂದು ಕಲ್ಲುಬಾಣೆಯಲ್ಲಿ ಇಶ್ಕ್ ಮಜ್ಲಿಸ್ ಕಾರ್ಯಕ್ರಮ:ಪೋಸ್ಟರ್ ಬಿಡುಗಡೆ

ವಿರಾಜಪೇಟೆ: ಸೆಪ್ಟೆಂಬರ್ 19ರಂದು ಕಲ್ಲುಬಾಣೆಯಲ್ಲಿ ವಿರಾಜಪೇಟೆ ಸ್ವದೇಶಿ ರೇಂಜ್ ಸಮಿತಿ ವತಿಯಿಂದ ಬೃಹತ್ ಇಶ್ಕ್ ಮಜ್ಲಿಸ್ ಕಾರ್ಯಕ್ರಮದ ಸ್ವಾಗತ ಸಮಿತಿ ರಚನೆಯು ಕಲ್ಲುಬಾಣೆಯಲ್ಲಿ ನಡೆಯಿತು. ಕಲ್ಲುಬಾಣೆ ಮದರಸ ಆವರಣದಲ್ಲಿ ಸ್ವದೇಶಿ ರೇಂಜ್ ಉಪಾಧ್ಯಕ್ಷ ಅಬ್ದುಲ್ಲಾ ಫೈಝಿ ಅವರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚನೆ ಕಾರ್ಯಕ್ರಮ ನಡೆಯಿತು. ರೇಂಜ್ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಫೈಝಿ ಮಾತನಾಡಿ, ಪ್ರತಿಯೊಬ್ಬರು ಕೂಡ ಕಾರ್ಯಕ್ರಮ ವಿಜಯಗೊಳಿಸಲು ಸಹಕರಿಸಬೇಕೆಂದು ಕರೆ ನೀಡಿದರು.
ಸ್ವಾಗತ ಸಮಿತಿ ಚೇರ್ಮನ್ ಅಬ್ದುಲ್ಲ ಫೈಝಿ , ವೈಸ್ ಚೇರ್ಮನ್ ಜಂಶಿರ್ ಸ್ವಾದಿಕ್, ಕನ್ವೀನರ್ ಯೂಸುಫ್, ವೈಸ್ ಕನ್ವೀನರ್ , ಆಶಿಕ್ ರಾಶೀದ್ ಖಜಾಂಜಿ ಆದಿಲ್, ಟ್ರ್ಯಾಫಿಕ್ ನಿಯಂತ್ರಕರಾಗಿ ಖಾಲಿದ್ ಟೀಮ್ ಫುಡ್ ನಿಯಂತ್ರಕರಾಗಿ ಶಂಸುದ್ದೀನ್ ಮತ್ತು ತಂಡ , ವೇದಿಕೆ ಸಮಿತಿ ಸದಸ್ಯರಾಗಿ ರಿಯಾಜ್ ಅವರನ್ನು ಆಯ್ಕೆ ಮಾಡಲಾಯಿತು. ಸಭೆಗೆ ವಿರಾಜಪೇಟೆ ಸ್ವದೇಶಿ ರೇಂಜ್ ಕಾರ್ಯದರ್ಶಿ ಸಹದ್ ಫೈಝಿ ಸ್ವಾಗತಿಸಿ, ಸಹ ಕಾರ್ಯದರ್ಶಿ ಅಸ್ಲಂ ಫೈಝಿ ವಂದಿಸಿದರು. ಸಭೆಯಲ್ಲಿ ನೌಷಾದ್ ದಾರಿಮಿ, ಮುಹಮ್ಮದ್ ಅಲಿ ಬಾಖವಿ, ಅಕೀಂ ಮುಸ್ಲಿಯಾರ್ ,ಉಮರ್ ಮುಸ್ಲಿಯಾರ್, ಅಫ್ರೀದ್ ಫೈಝಿ, ಕಲ್ಲುಬಾಣೆ ಜಮಾಅತ್ ಸಹ ಕಾರ್ಯದರ್ಶಿ ಶಿಹಾಬ್,ಸಮಿತಿ ಸದಸ್ಯರು, SKSSF ಕಾರ್ಯಕರ್ತರು,ಇದ್ದರು.