ಗ್ರಾಮೀಣ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವುದು ಅತ್ಯಂತ ಮುಖ್ಯ: ಶಾಸಕ ಎಎಸ್ ಪೊನ್ನಣ್ಣ

ಗ್ರಾಮೀಣ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವುದು ಅತ್ಯಂತ ಮುಖ್ಯ: ಶಾಸಕ ಎಎಸ್ ಪೊನ್ನಣ್ಣ

ವಿರಾಜಪೇಟೆ:ಕೋಕೇರಿಯಲ್ಲಿ ನಡೆಯುತ್ತಿರುವ ಕೋಕೇರಿ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಮುಖ್ಯ ಅತಿಥಿಯಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.

ಚೆಯ್ಯಂಡಾಣೆಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜನೆಗೊಂಡಿರುವ ಈ ಪಂದ್ಯಾವಳಿಯ ಮುಖ್ಯ ಅತಿಥಿ ಭೂಮಿಕೆಯಲ್ಲಿ ಮಾತನಾಡಿದ ಮಾನ್ಯ ಶಾಸಕರು, ಜಗತ್ತಿನಾದ್ಯಂತ ಖ್ಯಾತಿ ಹೊಂದಿರುವ ಕ್ರಿಕೆಟ್ ಪಂದ್ಯಾಟ ಗ್ರಾಮೀಣ ಭಾಗದ ಯುವಕರ ಮನರಂಜನೆ ಹಾಗೂ ಅವರ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಲು ಸಹಕಾರಿಯಾಗುತ್ತದೆ ಎಂದು ಬಣ್ಣಿಸಿದರು. ಇಂತಹ ಪಂದ್ಯಾವಳಿಗಳು ಗ್ರಾಮೀಣ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವುದು ಅತ್ಯಂತ ಮುಖ್ಯ ಎಂದು ಹೇಳಿದರು.

 ಕ್ರೀಡೆಯನ್ನು ಎಲ್ಲರೂ ಕ್ರೀಡಾಮನೋಭಾವದಿಂದ ಸ್ವೀಕರಿಸಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗೆ ಶುಭ ಕೋರಿದ ಮಾನ್ಯ ಶಾಸಕರು ಪಂದ್ಯಾವಳಿಯು ಯಶಸ್ಸು ಗಳಿಸಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿಅನುಷ್ಠಾನ ಸಮಿತಿಯ ಉಪಾಧ್ಯಕ್ಷರು ಬೊಳ್ಳಂಡ ಶರಿನ್, ಕೆಡಿಪಿ ಸದಸ್ಯರು ಮಾಳೆಟೀರ ಪ್ರಶಾಂತ್, ನಾಪೋಕ್ಲು ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ನರಿಯಂದಡ ಗ್ರಾಮ ಅಧ್ಯಕ್ಷರು ಕೌಶಿ ಕಾವೇರಮ್ಮ, ಉಪಾಧ್ಯಕ್ಷರು ಹಾಗೂ ವಲಯ ಅಧ್ಯಕ್ಷರಾದ ಕೋಡಿರ ವಿನೋದ್ ನಾಣಯ್ಯ, ಶೈಲಾ ಕುಟ್ಟಪ್ಪ, ವಾಣಿ, ಪ್ರಕಾಶ್, ಸುಬೀರ್, ಮಮ್ಮಾದ್, ಕುಂಡಚ್ಚಿರ ಮಂಜು ದೇವಯ್ಯ, ಕಾರ್ಯಕ್ರಮ ಆಯೋಜಕರು ಹಾಗೂ ಪಕ್ಷದ ಪ್ರಮುಖರು, ಸ್ಥಳೀಯರು ಉಪಸ್ಥಿತರಿದ್ದರು.