ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ಘಟಕಕ್ಕೆ “100% ಎಫಿಷಿಯನ್ಸಿ ಅವಾರ್ಡ್” ಗೌರವ

ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ಘಟಕಕ್ಕೆ “100% ಎಫಿಷಿಯನ್ಸಿ ಅವಾರ್ಡ್” ಗೌರವ

ಸೋಮವಾರಪೇಟೆ: ವಲಯ 14ರ “ಜೂನಿಯರ್ ಚೇಂಬರ್ ಇಂಟರ್‌ನ್ಯಾಷನಲ್” (JCI) ಸಮ್ಮೇಳನ “ವಿಜಯಪರ್ವ – 2025” ಕಾರ್ಯಕ್ರಮವು ಚಿಕ್ಕಮಗಳೂರಿನ ಹೋಟೆಲ್ ಸಿ.ಎನ್. ವಿಂಡ್ಸರ್ ನಲ್ಲಿ ಜೆಸಿಐ ಚಿಕ್ಕಮಂಗಳೂರು ಮಲ್ನಾಡ್ ಘಟಕದ ಆತಿಥ್ಯದಲ್ಲಿ ಅದ್ದೂರಿಯಾಗಿ ಜರುಗಿತು. ಈ ಸಂದರ್ಭದಲ್ಲಿ ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ಘಟಕವು ಶೇ.100ರಷ್ಟು ಪರಿಣಾಮಕಾರಿಯಾಗಿ ತನ್ನ ವಾರ್ಷಿಕ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣ ವರ್ಷದ ಶೇ.100 ಶ್ರೇಷ್ಠ ಕಾರ್ಯಕ್ಷಮತೆ ಪ್ರಶಸ್ತಿ” ಗೌರವವನ್ನು ಪಡೆದಿದೆ. ವಲಯ 14ರ ಅಧ್ಯಕ್ಷರಾದ ಜೇಸಿ ವಿಜಯಕುಮಾರ್ ಅವರು ಈ ಪ್ರಶಸ್ತಿಯನ್ನು ಘಟಕದ ಅಧ್ಯಕ್ಷರಾದ ಜೇಸಿ ಜಗದಾಂಬ ಗುರುಪ್ರಸಾದ್ ಅವರಿಗೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ವಲಯ ನಿರ್ದೇಶಕಿ ಮಾಯಾ ಗಿರೀಶ್, ಜೇಸಿ ಗಿರೀಶ್, ಜೆಎಸಿ ಮಮತಾ ಹಾಗೂ ಜೇಸಿ ಗುರುಪ್ರಸಾದ್ ಉಪಸ್ಥಿತರಿದ್ದರು.

ಘಟಕದ ಅಧ್ಯಕ್ಷ ಜೇಸಿ ಜಗದಾಂಬ ಗುರುಪ್ರಸಾದ್ ಅವರು ಮಾತನಾಡಿ “ಈ ಗೌರವ ನಮ್ಮ ಘಟಕದ ಪ್ರತಿಯೊಬ್ಬ ಸದಸ್ಯರ ಶ್ರಮ, ನಿಷ್ಠೆ ಮತ್ತು ಸೇವಾಭಾವನೆಯ ಫಲ. ಸಮಾಜಮುಖಿ ಚಟುವಟಿಕೆಗಳು ಮತ್ತು ಯುವ ನಾಯಕತ್ವದ ಬೆಳವಣಿಗೆಗೆ ನಾವು ಸದಾ ಬದ್ಧರಾಗಿದ್ದೇವೆ.” ಜೇಸಿಐ — ಯುವ ಶಕ್ತಿಯ ನಾಡಿ, ಸಮಾಜ ಸೇವೆಯ ದಾರಿ: ಜೇಸಿಐ (Junior Chamber International) ವಿಶ್ವದ 100 ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವ ನಾಯಕರ ವೇದಿಕೆ ಆಗಿದ್ದು, "Leadership through Service" ಎಂಬ ಸಿದ್ಧಾಂತದ ಮೂಲಕ ಯುವಕರಲ್ಲಿ ನಾಯಕತ್ವ, ವ್ಯಕ್ತಿತ್ವ ಅಭಿವೃದ್ಧಿ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುತ್ತಿದೆ.

ಜೇಸಿಐ ಸದಸ್ಯರು “ Rise Up” ಎಂಬ ಮಂತ್ರದ ಅಡಿಯಲ್ಲಿ, ತಮ್ಮ ಸಮುದಾಯದ ಸುಧಾರಣೆಗೆ ಹೊಸ ಹೊಸ ಚಿಂತನೆಗಳು, ಯೋಜನೆಗಳು ಮತ್ತು ಪ್ರೇರಣಾದಾಯಕ ಕಾರ್ಯಗಳಿಂದ ಸಾಮಾಜಿಕ ಬದಲಾವಣೆಗೆ ಪೂರಕವಾಗಿದ್ದಾರೆ. ಈ ಪ್ರಶಸ್ತಿಯು ಘಟಕದ 50ನೇ ವರ್ಷದ ಸಂಭ್ರಮಾಚರಣೆ ಸಮಯದಲ್ಲಿ ದೊರೆತಿರುವುದರಿಂದ, ಪುಷ್ಪಗಿರಿ ಘಟಕಕ್ಕೆ ಇದು ಹೆಮ್ಮೆಯ ಕ್ಷಣವಾಗಿದೆ. ಘಟಕದ ತಂಡವು ತನ್ನ ಸೇವಾ ಚಟುವಟಿಕೆಗಳ ಮೂಲಕ ವಲಯದಲ್ಲಿ ಮಾದರಿಯಾಗಿದೆ ಎಂದರು..