ಕೈಲ್ ಮುಹೂರ್ತ ಸಂತೋಷ ಕೂಟ ಜಂಬರ: ಅರೆಭಾಷಿಕರು ಸಂಸ್ಕೃತಿ ಹಾಗೂ ಪರಂಪರೆಯನ್ನು ಬೆಳೆಸುವಲ್ಲಿ ಗಮನಹರಿಸುವಂತಾಗಬೇಕು: ಶಾಸಕ ಎಎಸ್ ಪೊನ್ನಣ್ಣ

ಕೈಲ್ ಮುಹೂರ್ತ ಸಂತೋಷ ಕೂಟ ಜಂಬರ: ಅರೆಭಾಷಿಕರು ಸಂಸ್ಕೃತಿ ಹಾಗೂ ಪರಂಪರೆಯನ್ನು ಬೆಳೆಸುವಲ್ಲಿ ಗಮನಹರಿಸುವಂತಾಗಬೇಕು: ಶಾಸಕ ಎಎಸ್ ಪೊನ್ನಣ್ಣ
ಹಾಲಿ ಹಾಗೂ ಮಾಜಿ ಶಾಸಕರಿಗೆ ಸನ್ಮಾನ

ಮಡಿಕೇರಿ:ಗೌಡ ಸಮಾಜ ಚೇರಂಬಾಣೆ (ರಿ) ಹಾಗೂ ಗೌಡ ಮಹಿಳಾ ಒಕ್ಕೂಟ ಚೇರಂಬಾಣೆ ಇವರ ಸಹಯೋಗದಲ್ಲಿ ನಡೆಯುತ್ತಿರುವ ಕೈಲ್ ಮುಹೂರ್ತ ಸಂತೋಷಕೂಟ ಜಂಬರ 2025 ಕಾರ್ಯಕ್ರಮದಲ್ಲಿ, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಸಮಾರೋಪ ಸಮಾರಂಭದ ಉದ್ಘಾಟಕರಾಗಿ ಭಾಗವಹಿಸಿದರು.

ಕಾರುಗುಂದದಲ್ಲಿರುವ ಚೇರಂಬಾಣೆ ಗೌಡ ಸಮಾಜ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಗೌಡ ಸಮಾಜದವರ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, ಅರೆಭಾಷಿಕರು ಈ ಭಾಗದಲ್ಲಿ ಹೆಚ್ಚಿನ ಮುತುವರ್ಜಿಯಿಂದ ತಮ್ಮ ವಿಶಿಷ್ಟ, ಸಂಸ್ಕೃತಿ ಹಾಗೂ ಪರಂಪರೆಯನ್ನು ಬೆಳೆಸುವಲ್ಲಿ ಗಮನಹರಿಸುವಂತಾಗಬೇಕು. ಇಂತಹ ಕಾರ್ಯಕ್ರಮಗಳು ಸಂಸ್ಕೃತಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ಮನವರಿಕೆ ಮಾಡಿಕೊಡಲು ಸಹಾಯಕವಾಗಲಿದೆ. ಸಮಾಜದ ಬಾಂಧವರನ್ನೆಲ್ಲ ಒಟ್ಟುಗೂಡಿಸಿ ಇಂತಹ ಕಾರ್ಯಕ್ರಮಗಳು ಜರುಗುವುದರಿಂದ ಜನಾಂಗವು ಬಲಿಷ್ಠವಾಗಲಿದೆ ಎಂದು ಹೇಳಿದರು .

ಕೊಡಗಿನ ಪ್ರಮುಖ ಜನಾಂಗಗಳಲ್ಲಿ ಒಂದಾಗಿರುವ ಗೌಡರು, ಕೊಡಗಿನ ಬೆಳವಣಿಗೆಗೆ ಅನೇಕ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದು, ಕ್ರೀಡೆ, ಸೈನ್ಯ, ಉದ್ಯಮ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಕೊಡಗಿನ ಹಾಗೂ ಇಡೀ ನಾಡಿನ ಏಳಿಗೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ. ಜನಾಂಗದವರ ಯಾವುದೇ ಬೇಡಿಕೆಗೆ ತನ್ನ ವ್ಯಾಪ್ತಿಯಲ್ಲಿ ಸಹಕಾರ ನೀಡಲು ತಾನು ಸದಾ ಉತ್ಸುಕನಾಗಿರುವುದಾಗಿ ಇದೇ ಸಂದರ್ಭದಲ್ಲಿ ಹೇಳಿದರು.

 ಸಮಾರಂಭದಲ್ಲಿ ವೇದಿಕೆ ಉಪಸ್ಥಿತರಿರುವ ಎಲ್ಲಾ ಗಣ್ಯರು, ಚೇರಂಬಾಣೆ ಗೌಡ ಸಮಾಜ ಅಧ್ಯಕ್ಷರು, ಉಪಾಧ್ಯಕ್ಷರು,ಮಾಜಿ ಶಾಸಕರಾದ ಕೆ.ಜಿ ಬೋಪಯ್ಯ ಸದಸ್ಯರು, ಪಕ್ಷದ ಪ್ರಮುಖರು ಕೊಲ್ಯದ ಗಿರಿಶ್, ಬೇಕಲ್ ರಮನಾಥ್, ಕೊಡಗನ ತೀರ್ಥ ಪ್ರಸಾದ್, ಕೋಡಿ ಮೋಟಯ್ಯ, ಪ್ರಕಾಶ್ ಕುದುಪಾಜೆ, ಕೇಟೋಳಿ ಮೋಹನ್ ರಾಜ್, ಕುಮಾರ್, ಡಿಂಪು,, ಪ್ರತಾಪ್ ಹಾಗೂ ಜನಾಂಗದ ಪ್ರಮುಖರು ಉಪಸ್ಥಿತರಿದ್ದರು.