ಜೈಕಿರಣ್ ಗೆ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ

ಜೈಕಿರಣ್ ಗೆ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ

ಮಡಿಕೇರಿ :- ಬೆಂಗಳೂರಿನ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಸಮಾಜ ಸೇವಾ ಸಾಧನೆಗಾಗಿ ನೀಡಲಾಗುವ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿಯನ್ನ ಸಮಾಜ ಸೇವಕ ಜೈಕಿರಣ್ ಅವರಿಗೆ ನೀಡಿ ಗೌರವಿಸಲಾಯಿತು.

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕ ಮಹಾದೇವಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಪ್ರಶಸ್ತಿ ಪ್ರಧಾನ ಮಾಡಿದರು. ಬನವಾಸಿ ಕನ್ನಡಿಗರು ಕನ್ನಡಮಯ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾಗಿರುವ ಜೈಕಿರಣ್ ಮೂಲತಃ ಚಿಕ್ಕನಾಯಕನಹಳ್ಳಿ ಯಾವರಾಗಿದ್ದು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.

ಬನವಾಸಿ ಕನ್ನಡಿಗರು ಹಾಗೂ ಕನ್ನಡಮಯ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರಾಗಿರುವ ಜೈ ಕಿರಣ್ 2014 ರಿಂದ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದ್ದು, ದಾನಿಗಳ ಸಹಕಾರದಿಂದ ಕೊಡಗು ಜಿಲ್ಲೆಯಲ್ಲಿ 2018ರ ಪ್ರವಾಹ, ಪ್ರಕೃತಿ ವಿಕೋಪ, ಕೋವಿಡ್ ಸಂದರ್ಭದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಆಹಾರ ಕಿಟ್ಟುಗಳನ್ನ ವಿತರಣೆ ಮಾಡಿ ನಂತರದ ದಿನಗಳಲ್ಲೂ ಸಮಾಜ ಸೇವೆಯನ್ನ ಮುಂದುವರಿಸಿ ಕಳೆದ 4 ವರ್ಷಗಳಿಂದಲೂ ಕೊಡಗು ಜಿಲ್ಲೆಯ ಗ್ರಾಮೀಣ ಭಾಗದ ನಾಗರಹೊಳೆ, ದೊಡ್ಡ ರೇಷ್ಮೆ, ಚೆನ್ನಂಗಿ, ಪಾಲಿಬೆಟ್ಟ ಪ್ರೌಢಶಾಲೆ, ದುಬಾರೆ ತಮಿಳು ಶಾಲೆ, ವಿ ಬಾಡಗ ಆಶ್ರಮ ಶಾಲೆ ಸೇರಿದಂತೆ ಮಡಿಕೇರಿ ಕುಶಾಲನಗರ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಕೆಲವು ಶಾಲೆಗಳು ಸೇರಿ 20ಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ನೊಂದಿಗೆ ಪರಿಕರಗಳನ್ನ ವಿತರಣೆ ಮಾಡಿದ್ದಾರೆ. ಪ್ರತಿ ವರ್ಷ ಮಳೆಗಾಲ ಸಂದರ್ಭದಲ್ಲಿ ಆದಿವಾಸಿ ಹಾಡಿಗಳಿಗೆ ಆಹಾರ ಕಿಟ್ಟುಗಳನ್ನ ವಿತರಣೆ ಸೇರಿದಂತೆ ದುಬಾರೆ ಆನೆ ಮಾವುತರ ಕಾವಾಡಿಗರ ಸಮಸ್ಯೆ ಗಳಿಗೆ ಸ್ಪಂದಿಸಿ ಆಹಾರ ಕಿಟ್ಟುಗಳನ್ನು ವಿತರಣೆ ಮಾಡಿದ್ದಾರೆ.

ಇವರ ಸೇವೆಗಳನ್ನು ಪರಿಗಣಿಸಿ ಕೊಡಗು ಜಿಲ್ಲೆಯಲ್ಲೂ ವಿವಿಧ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದ್ದು, ಇತ್ತೀಚೆಗೆ ಸುವರ್ಣ ಕರ್ನಾಟಕ ಪ್ರಸ್ ಅಸೋಸಿಯೇಷನ್ ವತಿಯಿಂದ ನೀಡಲಾಗಿರುವ ಸಮಾಜ ಸೇವ ರಾಜ್ಯ ಪ್ರಶಸ್ತಿಯನ್ನ ಪಡೆದಿರುವ ಜೈಕಿರಣ್ ಇದೀಗ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಸಮಾಜ ಸೇವಾ ಸಾಧನೆಗಾಗಿ ನೀಡಲಾಗುವ 2025 ನೆ ಸಾಲಿನ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿಯನ್ನ ನೀಡಿ ಗೌರವಿಸಿದೆ.

 ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗು ವಾಗ್ಮಿಗಳಾದ ಶ್ರೀ. ಬೈರಮಂಗಳ ರಾಮೇಗೌಡರು, ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ. ಮಂಜುಳ ಪಾವಗಡ, ಡಾ. ವಿಜಯಲಕ್ಷ್ಮಿ ಬಾಲಿಕುಂದ್ರಿ, ಖ್ಯಾತ ಗಾಯಕರಾದ ಶಶಿಧರ್ ಕೋಟೆ, ಪಾರ್ವತಿ ಬಿ ಎ, ವಾ ಚ ಚಾನೆಗೌಡ, ಪದ್ಮ ನಾಗರಾಜ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.