ಸೆಪ್ಟೆಂಬರ್ 21ರಂದು ಮಡಿಕೇರಿಯಲ್ಲಿ ಕರುನಾಡು ಗಾಟ್ ಟ್ಯಾಲೆಂಟ್ ಕಾರ್ಯಕ್ರಮ

ಮಡಿಕೇರಿ: ಜಿಲ್ಲೆಯ ಮಕ್ಕಳ ಪ್ರತಿಭೆ ಅನಾವರಣಕ್ಕೆ ಸೆ.೨೧ರಂದು ನಗರದ ಹೋಟೇಲ್ ನ್ಯೂ ರಾಜದರ್ಶನ್ ನಲ್ಲಿ ಕರುನಾಡು ಗಾಟ್ ಟ್ಯಾಲೆಂಟ್ ಸೆಷನ್ ೨ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಅಸೋಸಿಯೇಟೆಡ್ ಡೈರೆಕ್ಟರ್ ಪಿ.ಎಂ.ದಿನೇಶ್ ತಿಳಿಸಿದರು. ಕಿಂಬರ್ಲಿ ಕೂರ್ಗ್, ರಿಜಾಯ್ಸ ಈವೆಂಟ್, ಸಂಜನಾ ಈವೆಂಟ್, ಎಸ್‌ಎ ಪ್ರೋಡಕ್ಷನ್ ಇಂಡಿಯಾ, ಕದ್ರಿ ಈವೆಂಟ್‌ಗಳ ಸಹಯೋಗದಲ್ಲಿ ಅಂದು ಬೆಳಗ್ಗೆ ಬೆಳಗ್ಗೆ ೯ ರಿಂದ ೪ ಗಂಟೆಯ ವವರೆಗೆ ಕಾರ್ಯಕ್ರಮ ನಡೆಯಲಿದೆ.
ಯೋಗ, ಜಾದು, ನಾಟಕ, ಹಾಡುಗಾರಿಕೆ, ನೃತ್ಯ, ಹಾಡುಗಾರಿಕೆ, ಮಿಮಿಕ್ರಿ, ಸಂಗೀತ ವಾದನ, ಕಲೆ, ಸಾಹಿತ್ಯ ಮತ್ತು ಇನ್ನಿತರ ಎಲ್ಲ ರೀತಿಯ ಪ್ರತಿಭೆಗಳಿಗೂ ಇದೊಂದು ಸುಂದರ ವೇದಿಕೆಯಾಗಿದೆ. ಆಸಕ್ತರು ಅಂದು ಭಾಗಿಯಾಗಬಹುದು. ಆಸಕ್ತರು ೬೩೬೨೨೫೦೭೭೮, ೯೧೬೪೮೩೧೯೮೯ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಪ್ರವೀಣ್ ಜೈನ್, ಸುಮಿತ್ ಅಮೀನ್, ಸುರಕ್ಷಾ ದಾಸ್ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮವು ಕ್ವಾರ್ಟರ್ ಫೈನಲ್, ಸೆಮಿಫೈನಲ್, ಫೈನಲ್ ಹಂತವಾಗಿ ನಡೆಯಲಿದೆ. ಒಟ್ಟು ೩ ಲಕ್ಷದ ಬಹುಮಾನವನ್ನು ಪ್ರಥಮ, ದ್ವಿತೀಯ, ತೃತೀ ಸ್ಥಾನ ಪಡೆದ ತಂಡಕ್ಕೆ ಅಥವಾ ವೈಯುಕ್ತಿಯ ವಿಜೇತರಿಗೆ ನೀಡಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಅಸೋಸಿಯೇಟೆಡ್ ಡೈರೆಕ್ಟರ್ ಸಚಿನ್ ವರ್ಗಿಸ್, ಪ್ರಮುಖರಾದ ವೈಶಿಕ, ಸಾನ್ವಿ, ಸಂಗಮ್ ಉಪಸ್ಥಿತರಿದ್ದರು.