ಕೊಡಗಿನಲ್ಲಿ ಕೇರಳ ಪೊಲೀಸರಿಂದ ಮಹಿಳೆ ಮತ್ತು ಮಕ್ಕಳ ಮೇಲೆ ಹಲ್ಲೆ
ಸೋಮವಾರಪೇಟೆ:ಕೊಡಗಿನಲ್ಲಿ ಕೇರಳ ಪೊಲೀಸರ ಆಟಾಟೋಪ, ಮುಂಜಾನೆ ಮನೆಗೆನುಗ್ಗಿ ಮಹಿಳೆ,ಮಕ್ಕಳು ಸೇರಿದಂತೆ ಸಿಕ್ಕಿದವರ ಮೇಲೆಲ್ಲಾ ಹಲ್ಲೆ ಮಾಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ಅಬ್ಬೂರುಕಟ್ಟೆ ಸಮೀಪದ ಮೋರಿಕಲ್ಲು ಗ್ರಾಮದಲ್ಲಿ ನಡೆದಿದೆ.
ಬಿನೇಶ್ ಹಾಗೂ ಹೆಂಡತಿ ಮಕ್ಕಳ ಮೇಲೆ ಹಲ್ಲೆ ನಡೆದಿದ್ದು, ಗಾಯಾಳು ಬಿನೇಶ್ ಸೋಮವಾರಪೇಟೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೇರಳದ ಪ್ರಕರಣವೊಂದಕ್ಕೆ ಬೇಕಾಗಿದ ಆರೋಪಿಯನ್ನು ಬಂಧಿಸಲು ಆಗಮಿಸಿದ್ದ ಪೊಲೀಸರು, ಆರೋಪಿಯ ಮನೆ ಬಿಟ್ಟು ಅವರ ತಮ್ಮನ ಮನೆ ನುಗ್ಗಿದ್ದಾರೆ. ಪೊಲೀಸರೆಂದು ತಿಳಿಸದೆ,ಮಾಹಿತಿ ನೀಡದೆ ಮನೆಯವರಬಮೇಲೆಲ್ಲಾ ಹಲ್ಲೆ ನಡೆಸಿದ್ದಾರೆ. ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಬಿನೇಶ್ ಅವರ ಮೇಲೆ ತೀವ್ರ ಹಲ್ಲೆಯಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆ ಪ್ರಶ್ನಿಸಿದ ಬಿನೇಶ್ ಪತ್ನಿ ಹೇಮಾಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ್ತೆ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ತಾನು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ಕೈ ಮುಗಿದರೂ ಬೇಡಿಕೊಂಡರೂ, ನಿನ್ನ ಹಾರ್ಟ್ ನ್ನು ಕೀಳುತ್ತೇನೆ ಎಂದು ಹೆದರಿಸಿ ಹಲ್ಲೆ ನಡೆಸಿದ್ದಾರೆ ಎಂದು ಹೇಮಾ ಹೇಳಿದ್ದಾರೆ.
ಇಂದು ಬೆಳಿಗ್ಗೆ 6.30ಕ್ಕೆ ಘಟನೆ- ಮನೆಗೆ ಬಂದಾಗ ಕೇರಳ ಪೊಲೀಸರು ಮದ್ಯಪಾನಮಾಡಿರುವ ಆರೋಪದ ಮೇಲೆ ಸೋಮವಾರಪೇಟೆ ಪೊಲೀಸರಿಗೆ ಪುಕಾರು ನೀಡಲಾಗಿದೆ. ಪ್ರಕರಣದ ಬಗ್ಗೆ ಕೇರಳ ಪೊಲೀಸ್ ವರಿಷ್ಠರಿಗೆ ಮಾಹಿತಿ ನೀಡಿರುವುದಾಗಿ ವೃತ್ತ ನಿರೀಕ್ಷಕ ಮುದ್ದುಮಾದೇವ ತಿಳಿಸಿದ್ದಾರೆ.