ಕೊಂಡಂಗೇರಿ ಜಮಾಅತ್ ನಿಂದ ಮೂವರ ಸದಸ್ಯತ್ವ ರದ್ದು ಕಾರಣವೇನು ಗೊತ್ತೇ!

ಕೊಂಡಂಗೇರಿ ಜಮಾಅತ್ ನಿಂದ ಮೂವರ ಸದಸ್ಯತ್ವ ರದ್ದು ಕಾರಣವೇನು ಗೊತ್ತೇ!
ಫೋಟೋ 1: ಕೊಂಡಂಗೇರಿ ಸುನ್ನಿ ಮುಸ್ಲಿಂ ಜಮಾಅತ್ ಆದೇಶ ಪ್ರತಿ : ಫೋಟೋ2 ಹಸು ಕಳವು ಪ್ರಕರಣದ ಆರೋಪಿಗಳು

ಮಡಿಕೇರಿ:ವಿರಾಜಪೇಟೆ ತಾಲ್ಲೂಕಿನ ಮೈತಾಡಿ ನಿವಾಸಿಯಾದ ಬೊಳ್ಳಪಂಡ ಎಂ.ಭೀಮಯ್ಯ ಎಂಬುವವರ ಗಬ್ಬದ ಹಸು ಕಳವು ಪ್ರಕರಣದಲ್ಲಿ ಆರೋಪಿಗಳಾಗಿರುವ ಕೊಂಡಂಗೇರಿ ಗ್ರಾಮದ ಎ.ಎ ಶಾಹಿದ್,ಬಿ‌ಎಂ ಬಾರಿಸ್ ಹಾಗೂ ಕೆ.ಎ ಆಶಿಕ್ ಎಂಬುವವರನ್ನು ಶರೀಅತ್ ವಿರುದ್ಧವಾಗಿರುವ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದರಿಂದ ಈ ಮೂವರ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ ಎಂದು ಕೊಂಡಂಗೇರಿ ಸುನ್ನಿ ಮುಸ್ಲಿಂ ಜಮಾಅತ್ ಆದೇಶ ಹೊರಡಿಸಿದ್ದಾರೆ.

 ಕೊಂಡಂಗೇರಿ ಮುಸ್ಲಿಂ ಜಮಾಅತ್ ಪ್ರಕಟಿಸಿರುವ ಆದೇಶದಲ್ಲಿ ‌ಗಬ್ಬದ ಹಸು ಕಳವು ಪ್ರಕರಣದಲ್ಲಿ ಆರೋಪಿಗಳಾಗಿರುವ ವ್ಯಕ್ತಿಗಳೊಂದಿಗೆ ಜಮಾಅತ್ ಸದಸ್ಯರು ಯಾವುದೇ ರೀತಿಯ ವಹಿವಾಟುಗಳನ್ನು ನಡೆಸುವಂತಿಲ್ಲ.

ಒಂದು ವೇಳೆ ಯಾರಾದರೂ ಅವರೊಂದಿಗೆ ವಹಿವಾಟು ನಡೆಸುವುದು,ಮತ್ತಿತರ ಕಾರ್ಯಕ್ರಮಗಳಿಗೆ ಆಹ್ವಾನಿಸುವುದು,ಜೊತೆಗೆ ಸೇರುವುದು ಕಂಡಬಂದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದೆಂದು ಕೊಂಡಂಗೇರಿ ಸುನ್ನಿ ಮುಸ್ಲಿಂ ಜಮಾಅತ್ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.