ಕೊಡಗು ಜಿಲ್ಲಾ ಸಹಕಾರ ಮಾರಾಟ ಮಾಹಾಮಂಡಳ ನಿಯಮಿತ (ಫೆಡರೇಶನ್)ಕ್ಕೆ ವಾರ್ಷಿಕ 26.72 ಲಕ್ಷ ರೂ ಲಾಭ

ಕೊಡಗು ಜಿಲ್ಲಾ ಸಹಕಾರ ಮಾರಾಟ ಮಾಹಾಮಂಡಳ ನಿಯಮಿತ (ಫೆಡರೇಶನ್)ಕ್ಕೆ ವಾರ್ಷಿಕ  26.72 ಲಕ್ಷ ರೂ ಲಾಭ

ವೀರಾಜಪೇಟೆ:ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ ನಿಯಮಿತ( ಫೆಡರೇಶನ್) ವಿರಾಜಪೇಟೆಯ 2024-25 ನೇ ಸಾಲಿನ ಮಹಾ ಸಭೆಯು ಅಧ್ಯಕ್ಷರಾದ ವಾಟೇರಿರ ಪಿ. ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

 2024-25 ನೇ ಸಾಲಿನಲ್ಲಿ 13.90 ಕೋಟಿ ರೂ ವಾರ್ಷಿಕ ವಹಿವಾಟು ನಡೆಸಿದ್ದು 26.72 ಲಕ್ಷ ರೂಗಳು ಲಾಭಾಂಶ ಪಡೆದುಕೊಂಡಿದೆ ಎಂದು ಅದ್ಯಕ್ಷರು ಮಾಹಿತಿ ನೀಡಿದರು. ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ ನಿಯಮಿತ (ಫೆಡರೇಶನ್) ವಿರಾಜಪೇಟೆ 1943 ರಲ್ಲಿ ಸ್ಥಾಪನೆಗೊಂಡಿದ್ದು ಸಂಘವು ಜಿಲ್ಲೆಯಾದ್ಯಂತ ತನ್ನ ಕಾರ್ಯವ್ಯಾಪ್ತಿಯನ್ನ ಹೊಂದಿದೆ.

ಸಂಘವು 3057 ಸದಸ್ಯರನ್ನು ಹೊಂದಿದ್ದು 61.28 ಲಕ್ಷರೂ ಪಾಲು ಬಂಡವಾಳವನ್ನು ಹೊಂದಿದೆ. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರು ನಮ್ಮ ಸಂಘವು 2024-25 ನೇ ಸಾಲಿನಲ್ಲಿ 13.90 ಕೋಟಿ ರೂ ವಾರ್ಷಿಕ ವಹಿವಾಟು ನಡೆಸಿದ್ದು 75.70 ಲಕ್ಷ ರೂ ವ್ಯಾಪಾರ ಲಾಭಗಳಿಸಿದ್ದು ಕಾಯ್ದಿರಿಸಿದ ಬಾಪ್ತುಗಳನ್ನು ಕಳೆದು 26.72 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇಕಡಾ 15 ರಂತೆ ಲಾಭಾಂಶ ನೀಡಲು ಸಂಘವು ನಿರ್ಧರಿಸಿದೆ.

ಸಂಘವು ವಿರಾಜಪೇಟೆ ಗೋಣಿಕೊಪ್ಪ ಸಿದ್ದಾಪುರ ಶ್ರೀಮಂಗಲ, ಮತ್ತು ಆರ್ಜಿಯಲ್ಲಿ ಶಾಖೆಗಳನ್ನು ಹೊಂದಿದ್ದು ಸದಸ್ಯರಿಗೆ ಹಾಗೂ ಸದಸ್ಯರೇತರಿಗೆ ಗ್ರಾಹಕ ವಸ್ತು ರಸಗಗೊಬ್ಬರ, ಕ್ರಿಮಿನಾಶಕ, ಕೇಷಿ ಉಪಕರಣ ಮತ್ತು ಕೋವಿ ತೋಟಗಳ ಮೂಲಕ ವಾರ್ಷಿಕ ವಹಿವಾಟು ನಡೆಸುತ್ತಾ ಬಂದಿದೆ. ವ್ಯಾಪಾರಭಿವೃದ್ದಿಯೇ ಸಂಘದ ಧ್ಯೆಯೋದ್ದೇಶವಾಗಿರುತ್ತದೆ. ಸಂಸ್ಥೆಯು ಬ್ಯಾಂಕಿಂಗ್ ವಿಭಾಗದಲ್ಲಿ ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಆಭರಣ ಸಾಲ ನೀಡುವುದಲ್ಲದೇ ನಿಖರ ಠೇವಣಿ ಮೇಲೆ ಆಕರ್ಷಕ ಬಡ್ಡಿ ನೀಡಲಾಗುತ್ತಿದೆ. ಸಂಘವು ವಿರಾಜಪೇಟೆಯಲ್ಲಿ ಸುಸಜ್ಜಿತ ಆಧುನಿಕ ಅಕ್ಕಿ ಗಿರಣಿಯನ್ನು ಹೊಂದಿದ್ದು ಅಕ್ಕಿಗಿರಣಿಯಲ್ಲಿ ಸದಸ್ಯರಿಗೆ ಭತ್ತ ದಾಸ್ತಾನು ಇಡಲು ಗೋದಾಮು ವ್ಯವಸ್ಥೆ ಲಭ್ಯವಿರುತ್ತದೆ. ಸದಸ್ಯರಿಂದ ಭತ್ತ ಖರೀದಿಸಿ ಅಕ್ಕಿಯಾಗಿ ಪರಿವರ್ತಿಸಿ 10 ಕೆ.ಜಿ ಮತ್ತು 25 ಕೆ.ಜಿ ಬ್ಯಾಗ್ ಗಳಾಗಿ ಮಾಡಿ ಫೆಡರೇಶನ್ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ.

 ವಿದ್ಯುತ್ ಚಾಲಿತ ವಾಹನಗಳನ್ನು ಹೊಂದಿರುವ ಗ್ರಾಹಕರಿಗೆ ಅನುಕೂಲವಾಗುವಂತೆ ಆರ್ಜಿಯಲ್ಲಿ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಘಟಕವನ್ನು ಸ್ಥಾಪನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕೊಡಗು ಜಿಲ್ಲಾ ಸಹಕಾರ ಮಾರಾಟ ಮಾಹಾಮಂಡಳ‌ ನಿಯಮಿತ (ಫೆಡರೇಶನ್) ಉಪಾಧ್ಯಕ್ಷರಾದ ತಾತಂಡ ಎಂ. ಕಾವೇರಪ್ಪ, ನಿರ್ದೇಶಕರಾದ ಕಂಜಿತಡ ಕೆ. ಮಂದಣ್ಣ, ಮುಲ್ಲೆಂಗಡ ಎಂ. ಕುಟ್ಟಪ್ಪ, ಮಾಚಿಮಂಡ ಬಿ.ವಸಂತ, ಕೊಕ್ಕಂಡ ಎ. ಬಿದ್ದಪ್ಪ. ಚೇನಂಡ ಈ ಗಿರೀಶ್ ಪೂಣಚ್ಚ, ಮೂಕೊಂಡ ಶಶಿ ಸುಬ್ರಮಣಿ, ಕುಂಬೇರ ಎ. ಮನುಕುಮಾರ್, ಅಂಜಪರವಂಡ ಎಂ ಮಂದಣ್ಣ, ಕೂತಂಡ ಸಚೀನ್ ಕುಟ್ಟಯ್ಯ, ಪುಲಿಯಂಡ ಎ. ಪೊನ್ನಣ್ಣ, ಕೆ.ಆರ್. ವಿನೋದ್, ಕರ್ತಚ್ಚೀರ ಲತಾ. ಪುಟ್ಟಿಚಂಡ ವೀಣಾ ಮಹೇಶ್, ಹೆಚ್.ಎನ್, ಶೇಖರ್. ಹೆಚ್.ಜಿ. ಆನಂದ ಮತ್ತು ಸಹ ಕಾರ್ಯಧರ್ಶಿಗಳಾದ ಕೆ.ಎಂ. ಚಂದ್ರಕಾಂತ್ ಅವರಿಗಳು ಉಪಸ್ಥಿತರಿದ್ದರು. ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ ನಿಯಮಿತ (ಫೆಡರೇಶನ್) ವಿರಾಜಪೇಟೆ ಸದಸ್ಯರು ಮತ್ತು ಸಂಸ್ಥೆಯ ವಿವಿಧ ಘಟಕಗಳ ಸಿಬ್ಬಂದಿಗಳು ಮಾಹಾ ಸಭೆಯಲ್ಲಿ ಹಾಜರಿದ್ದರು.

 ವರದಿ:ಕಿಶೋರ್ ಕುಮಾರ್ ಶೆಟ್ಟಿ