ಕೇರಳ ಪ್ರವಾಸಿ ಬಸ್ಸುಗಳು ಹುಚ್ಚಾಟಕ್ಕೆ ಕಡಿವಾಣ ಹಾಕುವಂತೆ ಕೊಡಗು ಹಿತರಕ್ಷಣಾ ವೇದಿಕೆ ಒತ್ತಾಯ
ಕುಶಾಲನಗರ: ಶನಿವಾರ ಸಂಜೆ ಕೇರಳದಿಂದ ಆಗಮಿಸಿದ್ದ ಪ್ರವಾಸಿ ಬಸ್ಸ್ ಗಳು ಡಿಜೆ ಹಾಕಿ ಸಾರ್ವಜನಿಕರಿಗೆ,ಕಿರಿಕಿರಿ ಉಂಟಾಗಿದೆ. ಸ್ಥಳೀಯರು ಅದನ್ನು ವಿಚಾರಿಸಿದಾಗ ಅವರನ್ನು ಲೆಕ್ಕಿಸದೆ ಕನ್ನಡಿಗರ ಮೇಲೆ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ.ಆದರೆ ಹೊರಗಿನಿಂದ ಬರುವ ಪ್ರವಾಸಿಗರು ನಿಯಮ ಪಾಲನೆ ಮಾಡುತ್ತಿಲ್ಲ.ಈ ಕೂಡಲೇ ಸಂಬಂಧ ಪಟ್ಟ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಇವರುಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳುವಂತೆ ಕೊಡಗು ಹಿತರಕ್ಷಣಾ ವೇದಿಕೆ ಅಧ್ಯಕ್ಷ ರವಿಗೌಡ ಅವರು ಸಂಬಂಧ ಪಟ್ಟ ಇಲಾಖೆಯಲ್ಲಿ ಒತ್ತಾಯಿಸಿದ್ದಾರೆ.
