ರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟಕ್ಕೆ ಕೊಡಗು ವಿದ್ಯಾಲಯದ ವಿದ್ಯಾರ್ಥಿ ದೇವಾವೃತ್ ಡಿ.ಬಿ. ಆಯ್ಕೆ

ಮಡಿಕೇರಿ :- ಕೊಡಗು ವಿದ್ಯಾಲಯದ ಎಂಟನೇ ತರಗತಿ ವಿದ್ಯಾರ್ಥಿ ದೇವಾವೃತ್ ಡಿ.ಬಿ. ಮಹಾರಾಷ್ಟ್ರದ ಸದ್ವಿ ಪ್ರೀತಿ ಸುಧಾಜಿ ಇಂಟರ್ನ್ಯಾಷನಲ್ ಸ್ಕೂಲ್ ಮೆಹತಾ ದಲ್ಲಿ ನಡೆದ ಸಿಬಿಎಸ್‌ಸಿ ದಕ್ಷಿಣ ವಲಯ ಮಟ್ಟದ ಅಂಡರ್-14 ಕ್ರಿಕೆಟ್ ಆಯ್ಕೆ ಪ್ರಕ್ರಿಯೆಯಲ್ಲಿ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾನೆ. ಒಟ್ಟು 450 ಆಟಗಾರರು ಪಾಲ್ಗೊಂಡ ಆಯ್ಕೆ ಪ್ರಕ್ರಿಯೆಯಲ್ಲಿ, ಕೇವಲ 18 ಮಂದಿಯ ತಂಡದಲ್ಲಿ ಸ್ಥಾನ ಪಡೆದಿರುವ ದೇವಾವೃತ್ ದಕ್ಷಿಣ ವಲಯ ಮಟ್ಟದ ಕ್ರಿಕೆಟ್ ತಂಡದಲ್ಲಿ ಲೆಗ್ ಸ್ಪಿನ್ನರ್ ಆಗಿ ಆಡಲಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ ತಿಳಿಸಿದ್ದಾರೆ. ಸೆಪ್ಟೆಂಬರ್ 15 ರಿಂದ 20 ರವರೆಗೆ ನೋಯಿಡಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸಿಬಿಎಸ್‌ಇ ಟಿ-20 ಕ್ರಿಕೆಟ್ ಪಂದ್ಯಾಟದಲ್ಲಿ ದೇವಾವೃತ್ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ದೇವಾವೃತ್ ಅವರು ದಂಬೆಕೋಡಿ ಭೀಷ್ಮ ಮತ್ತು ಕವನ ದಂಪತಿಯ ಪುತ್ರನಾಗಿದ್ದಾನೆ.