ಜಿಲ್ಲಾ ಹಾಗೂ ರಾಜ್ಯದ ಅವ್ಯವಸ್ಥೆ ಖಂಡಿಸಿ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ಸೆಪ್ಟೆಂಬರ್ 24ರಂದು ಪ್ರತಿಭಟನೆ

ಮಡಿಕೇರಿ: ಜಿಲ್ಲೆ ಹಾಗೂ ರಾಜ್ಯ ಅವ್ಯವಸ್ಥೆ ಖಂಡಿಸಿ ಬಿಜೆಪಿ ವತಿಯಿಂದ ಸೆ.೨೪ರಂದು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಮಾಜಿ ಸ್ಫೀಕರ್ ಮತ್ತು ಮಾಜಿ ಶಾಸಕರು ಕೆ.ಜಿ.ಬೋಪಯ್ಯ ತಿಳಿಸಿದರು.
ರಾಜ್ಯದಲ್ಲಿ ರಸ್ತೆಗಳ ಸ್ಥಿತಿ ಸೋಚನೀಯವಾಗಿದೆ. ಈ ಹಿನ್ನೆಲೆ ರಾಜ್ಯದ ಎಲ್ಲೆಡೆ ರಸ್ತೆಗಳ ಅವ್ಯವಸ್ಥೆ ಖಂಡಿಸಿ ಪ್ರತಿಭಟಿಸಲಾಗುತ್ತಿದೆ. ಅಂದು ಬೆಳಗ್ಗೆ ೧೧ ಗಂಟೆಗೆ ಕುಶಾಲನಗರ, ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ ಇತರ ಕಡೆಗಳಲ್ಲಿ ಏಕಕಾಲಕ್ಕೆ ಪ್ರತಿಭಟನೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ರಸ್ತೆಗಳ ದುರಸ್ತಿಗೆ ಪ್ರತ್ಯೇಕ ಅನುಧಾನ ಇರುತ್ತದೆ. ಆ ಹಣ ಬಳಕೆಯಾಗದ ಪರಿಣಾಮ ಇಂದು ರಸ್ತೆಯ ಪರಿಸ್ಥಿತಿ ಹೀಗಾಗಿದೆ. ರಸ್ತೆಗಳ ದುರಸ್ತಿಗೆ ಇದ್ದ ಹಣ ಎಲ್ಲಿ ಸೇರುತ್ತಿದೆ ಎಂಬ ಮಾಹಿತಿ ಪಡೆಯಲು ಮಾಹಿತಿ ಹಕ್ಕಿಗೆ ಪತ್ರ ಬರೆಯಲಾಗುವುದು ಎಂದು ಎಚ್ಚರಿಸಿದರು. ಕೊಡವ ಜನಾಂಗದವರು ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸುವಂತೆ ಮನವಿ ಮಾಡಿದ ಅವರು, ೭ ಧರ್ಮಗಳು ಮಾತ್ರ ಮಾನ್ಯತೆ ಪಡೆದಿದೆ. ಈ ಹಿನ್ನೆಲೆ ಕೊಡವರು ಧರ್ಮದ ಕಾಲಂನಲ್ಲಿ ಕೊಡವರು ಎಂದು ನಮೂದಿಸಿದರೆ ಇತರೆ ಜನಾಂಗಕ್ಕೆ ಸೇರುತ್ತಾರೆ. ಆದ್ದರಿಂದ ಜನಾಂಗ ಬಾಂಧವರು ಹಿಂದೂ ಎಂದು ನಮೂದಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ನೆಲ್ಲಿರ ಚಲನ್, ಮಹೇಶ್ ಜೈನಿ, ಪ್ರಮುಖರಾದ ಚಂದ್ರ, ಮನುಮಂಜುನಾಥ್ ಇದ್ದರು.