ಕೂಡಿಗೆ : ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ
ಕುಶಾಲನಗರ : ಶಾಲಾ ಶಿಕ್ಷಣ ಇಲಾಖೆ ಕೊಡಗು ಜಿಲ್ಲೆ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸೋಮವಾರಪೇಟೆ ಇವರ ಆಶ್ರಯದಲ್ಲಿ 14 ಮತ್ತು 17ರ ವಯೋಮಿತಿಯ ಬಾಲಕ,ಬಾಲಕಿಯರ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಕೂಡಿಗೆ ಕ್ರೀಡಾಶಾಲಾ ಮೈದಾನದಲ್ಲಿ ಶನಿವಾರ ನಡೆಯಿತು.
ಓಟ ಸ್ಪರ್ಧೆ, ಉದ್ದ ಜಿಗಿತ ,ಭಾರದ ಗುಂಡು ಎಸೆತ, ಜವಲಿಂಗ್ ಹಾಗೂ ತಟ್ಟೆ ಎಸೆತ ಸೇರಿದಂತೆ ಇನ್ನಿತರ ಮೇಲಾಟ ಸ್ಪರ್ಧೆಗಳು ನಡೆದವು. 17ರ ವಯೋಮಿತಿಯ ಬಾಲಕರ ವಿಭಾಗದ ಮೂರು ಸಾವಿರ ಮೀಟರ್ ಓಟ ಸ್ಪರ್ಧೆಯಲ್ಲಿ ಗೋಣಿಕೊಪ್ಪ ಸೆಂಟ್ ಥಾಮಸ್ ಹೈಸ್ಕೂಲ್ ನ ವಿದ್ಯಾರ್ಥಿ ನಿಖಿಲ್ ಬಿ.ಕೆಟ್ಟಿ ಪ್ರಥಮ ಸ್ಥಾನ, ಏಳನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಪಿ.ಎಚ್.ಕಾರ್ತಿಕ್ ದ್ವಿತೀಯ ಸ್ಥಾನ, ಮಡಿಕೇರಿ ಸೆಂಟ್ ಮೈಕಲ್ ಹೈಸ್ಕೂಲ್ ನ ಎಚ್.ಎಸ್.ತರುಣ್ ತೃತೀಯ ಸ್ಥಾನ ಗಳಿಸಿದರು.
ಬಾಲಕಿಯರ ವಿಭಾಗದಲ್ಲಿ ಕಳಾತ್ಮಾಡು ಲಯನ್ಸ್ ಹೈಸ್ಕೂಲ್ ನ ವಿದ್ಯಾರ್ಥಿನಿ ಎಂ.ವಿ.ವಿದ್ಯಾಪೊನ್ನಮ್ಮ ಪ್ರಥಮ ಸ್ಥಾನ,ಪೊನ್ನಂಪೇಟೆ ಕೆಪಿಎಸ್ ಶಾಲೆಯ ವಿದ್ಯಾರ್ಥಿ ಕೆ.ಎಸ್.ಧನ್ಯ ದ್ವಿತೀಯ ಸ್ಥಾನ ಹಾಗೂ ಭಾಗಮಂಡಲ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿ ಜಿ.ಎಂ.ಧನ್ಯ ತೃತೀಯ ಸ್ಥಾನಗಳಿಸಿದ್ದಾರೆ. ಎರಡು ನೂರು ಮೀಟರ್ ಓಟದಲ್ಲಿ ಬಾಲಕಿಯರ ವಿಭಾಗದಲ್ಲಿ ವಿರಾಜಪೇಟೆ ಕಾವೇರಿ ಸ್ಕೂಲ್ ನ ಬಿ. ಹನ್ಷಿಕ ಪೊನ್ನಪ್ಪ ಪ್ರಥಮ, ಹಕತ್ತೂರು ಸರ್ಕಾರಿ ಹೈಸ್ಕೂಲ್ ನ ಆರ್.ಕಾವ್ಯ ದ್ವಿತೀಯ ಹಾಗೂ ಸಿದ್ದಾಪುರ ಮೊರಾರ್ಜಿ ಶಾಲೆಯ ಕೆ.ಆರ್.ಪ್ರಜೀಲ ತೃತೀಯ ಸ್ಥಾನಗಳಿಸಿದರು.
ಬಾಲಕರ ವಿಭಾಗದಲ್ಲಿ ನಾಪೋಕ್ಲು ಶ್ರೀರಾಮ ಟ್ರಸ್ಟ್ ನ ಕೆ.ಎ.ತಿನಿತ್ ಪ್ರಥಮ,ಕೊಡ್ಲಿಪೇಟೆ ಪಿಯು ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಡಿ.ಎಸ್.ಸಬೀಲ್ ದ್ವಿತೀಯ ಹಾಗೂ ವಿರಾಜಪೇಟೆ ಪ್ರಗತಿ ಹೈಸ್ಕೂಲ್ ನ ಎಸ್.ಗೌತಮ್ ತೃತೀಯ ಸ್ಥಾನಗಳಿಸಿದರು. 17 ರ ವಯೋಮಿತಿಯ ಬಾಲಕಿಯರ ವಿಭಾಗದ ಎಂಟು ನೂರು ಮೀಟರ್ ಓಟ ಸ್ಪರ್ಧೆಯಲ್ಲಿ ಎಂ.ಯು.ವಿದ್ಯಾಪೊನ್ನಮ್ಮ ಪ್ರಥಮ, ನಂಜರಾಯಪಟ್ಟಣ ಮೊರಾರ್ಜಿ ಶಾಲೆಯ ವಿದ್ಯಾರ್ಥಿನಿ ಎಚ್.ಪಿ.ಪ್ರತಿಜ್ಞಾ ದ್ವಿತೀಯ, ಮಡಿಕೇರಿ ಜ್ಯೋತಿ ಹೈಸ್ಕೂಲ್ ನ ಪಿ.ಆರ್.ಹಿತಶ್ರೀ ತೃತೀಯ ಸ್ಥಾನಗಳಿಸಿದರು.ಬಾಲಕರ ವಿಭಾಗದಲ್ಲಿ ವಿರಾಜಪೇಟೆ ಪ್ರಗತಿ ಹೈಸ್ಕೂಲ್ ನ ಬಿ.ಎಸ್.ಕೀರ್ತನ ಪ್ರಥಮ, ಹಂಡ್ಲಿ ಸರ್ಕಾರಿ ಪ್ರೌಢಶಾಲೆಯ ಬಿ.ವಿ.ಶ್ರೀಕಾಂತ್ ದ್ವಿತೀಯ ಹಾಗೂ ನಾಪೋಕ್ಲು ಡಾ.ಬಿ.ಆರ್.ಅಂಬೇಡ್ಕರ್ ಶಾಲೆಯ ಪಿ.ಯು.ಲಿತೇಶ್ ತೃತೀಯ ಸ್ಥಾನಗಳಿಸಿದರು.
ಬಾರದ ಗುಂಡು ಎಸೆತ ಬಾಲಕಿಯರ ವಿಭಾಗದಲ್ಲಿ ಶ್ರೀಮಂಗಲ ಹೈಸ್ಕೂಲ್ ನ ಎಂ.ಅನನ್ಯ ಪ್ರಥಮ, ಮಡಿಕೇರಿ ಕಕ್ಕಬ್ಬೆ ಹೈಸ್ಕೂಲ್ ನ ಫಾತಿಮ ಫಾಜ್ನ ದ್ವಿತೀಯ, ಕೂಡಿಗೆ ಜ್ಞಾನೋದಯ ಹೈಸ್ಕೂಲ್ ನ ಹಂಸವೇಣಿ ತೃತೀಯ ಸ್ಥಾನಗಳಿಸಿದರು. ಬಾಲಕರ ವಿಭಾಗದಲ್ಲಿ ಕೊಡ್ಲಿಪೇಟೆ ಎಸ್.ಕೆ.ಎಸ್ ಶಾಲೆಯ ಕೆ.ಯು.ಹರ್ಷಿತ ಪ್ರಥಮ, ಕುಶಾಲನಗರ ಫಾತಿಮ ಹೈಸ್ಕೂಲ್ ನ ಮಹಮ್ಮದ್ ಸುಹನ್ ದ್ವಿತೀಯ, ಮಡಿಕೇರಿ ಸೆಂಟ್ ಮೈಕಲ್ ಶಾಲೆಯ ಮಹಮ್ಮದ್ ಅನ್ಸರ್ ತೃತೀಯ ಸ್ಥಾನಗಳಿಸಿದರು.
ತಟ್ಟೆ ಎಸೆತ ಸ್ಪರ್ಧೆಯಲ್ಲಿ ಸೋಮವಾರಪೇಟೆ ಕುವೆಂಪು ಪ್ರೌಢಶಾಲೆಯ ಕೆ.ಎಸ್.ಪೂಜನ್ ಪ್ರಥಮ, ಐಗೂರು ಜಿಪಿಯು ಪ್ರೌಢಶಾಲೆಯ ಪಿ.ಎಸ್.ಜೀವನ್ ದ್ವಿತೀಯ ಹಾಗೂ ಮಡಿಕೇರಿ ಚೇರಂಬಾಣೆ ಎಸ್.ಆರ್.ಆರ್.ಎಸ್ ಶಾಲೆ ಪಿ.ಸಿ.ಶರಣ್ ಚಂಗಪ್ಪ ತೃತೀಯ ಸ್ಥಾನಗಳಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಕ್ರೀಡಾಪಟುಗಳಿಗೆ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಡಾ.ಸದಾಶಿವಯ್ಯ ಎಸ್.ಪಲ್ಲೇದ್ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಚ್.ಪಿ.ಮಂಜುನಾಥ್,ಕೊಡಗು ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಜಿ.ಕುಮಾರ್ ಅವರು ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಣೆ ಮಾಡಿದರು.
ಈ ಸಂದರ್ಭ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಸುಕುಮಾರಿ, ವಿರಾಜಪೇಟೆ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಡಾ.ಸೋಮಯ್ಯ,ಮಡಿಕೇರಿ ತಾಲ್ಲೂಕು ಪರಿವೀಕ್ಷಕ ಶ್ರೀನಿವಾಸ್,ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಚ್.ಪಿ.ಮಂಜುನಾಥ್, ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ್, ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭುಕುಮಾರ್,ಪ್ರಧಾನ ಕಾರ್ಯದರ್ಶಿ ನಾಗರಾಜು, ಅನುದಾನ ರಹಿತ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಕೊಡ್ರಂಗಡ ತಿಮ್ಮಯ್ಯ, ಗ್ರೇಡ್ 2 ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪೂರ್ಣೇಶ್ ಭಾಗವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
