ಕುಶಾಲನಗರ:ಆನೆಕಾಡು ಬಳಿ ಕಾರು ಮತ್ತು ಸ್ಕೂಟಿ ಅಪಘಾತ: ಓರ್ವನ ಸ್ಥಿತಿ ಗಂಭೀರ
ಸುಂಟಿಕೊಪ್ಪ: ಕುಶಾಲನಗರ- ಸುಂಟಿಕೊಪ್ಪ ಮಧ್ಯದ ಆನೆಕಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಾರು ಹಾಗೂ ಒಂದು ಬೈಕಿನ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ. ಬೈಕು ಸವಾರ ನಿಸರ್ಗಧಾಮದ ಸಿಬ್ಬಂದಿ ಹಾಗೂ ಮಡಿಕೇರಿ ನಿವಾಸಿ ಎಂದು ತಿಳಿದುಬಂದಿದೆ.
ಡಿಕ್ಕಿಯ ರಭಸಕ್ಕೆ ಬೈಕು ರಸ್ತೆಯಿಂದ ಕಾಡಿನೊಳಗೆ ಹಾರಿದೆ. ಗಾಯಾಳುವನ್ನು ಕುಶಾಲನಗರ ಆಸ್ಪತ್ರೆಗೆ ಸಾಗಿಸಲಾಗಿದೆ. ಎರಡು ಕಾರುಗಳ ಪೈಕಿ ಒಂದು ಸುಂಟಿಕೊಪ್ಪದ ಗದ್ದೆಹಳ್ಳ ಹಾಗೂ ಮತ್ತೊಂದು ಕಾರು ದಕ್ಷಣ ಕನ್ನಡ ಜಿಲ್ಲೆಗೆ ಸೇರಿದ್ದು ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿಯಬೇಕಾಗಿದೆ.
