ಕುಶಾಲನಗರ: ಎಂಡಿಎಂ ಮಾರಾಟ,ಐವರ ಬಂಧನ

ಕುಶಾಲನಗರ: ಎಂಡಿಎಂ ಮಾರಾಟ,ಐವರ ಬಂಧನ

ಕುಶಾಲನಗರ, ಡಿ 30:ಡಿಸೆಂಬರ್-2025 ನೇ ತಿಂಗಳಿನಲ್ಲಿ ಜಿಲ್ಲೆ/ ಹೊರಜಿಲ್ಲೆ/ ಹೊರರಾಜ್ಯಗಳಿಂದ ಪ್ರವಾಸದ ನಿಮಿತ್ತ ಆಗಮಿಸಿ ಹೋಂ ಸ್ಟೇ/ರೆಸಾರ್ಟ್/ಲಾಡ್ಜ್ ಗಳಲ್ಲಿ ತಂಗಲು ಬರುವ ಪ್ರವಾಸಿಗರು ರೆವಾ ಪಾರ್ಟಿ ನೆಪದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ/ ಸರಬರಾಜು/ಬಳಕೆ ಮಾಡುವುದನ್ನು ತಡೆಗಟ್ಟುವ ಸಲುವಾಗಿ ಮುಂಜಾಗ್ರತ ಕ್ರಮವಾಗಿ ವಿಶೇಷ ಕಾರ್ಯಾಚರಣೆ ನಡೆಸಿ ಸುಂಟಿಕೊಪ್ಪ, ಕುಶಾಲನಗರ ಟೌನ್ & ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಸರಬಾರಜು ಮಾಡಿರುವ ಕುರಿತು 03 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಒಟ್ಟು 05 ಆರೋಪಿಗಳನ್ನು ದಸ್ತಗಿರಿ ಮಾಡಿ, ಒಟ್ಟು 16.97 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ವಿವರ:

1. ಕೌಶಿದ್ ಎಸ್.ಎಂ. 24 ವರ್ಷ, ಕೆಇಬಿ ಹತ್ತಿರ, ಸುಂಟಿಕೊಪ್ಪ,

2. ನೌಶದ್ ಎಸ್.ಎಂ. 23 ವರ್ಷ, ಕೆಇಜಿ ಹತ್ತಿರ ಸುಂಟಿಕೊಪ್ಪ,

3. ಆಫ್ಘಾನ್, 25 ವರ್ಷ, ಶ್ರೀರಾಮ್ ಕಾಲೋನಿ, ಸುಂಟಿಕೊಪ್ಪ,

4. ಜೀವಿಯರ್ ಕೆ.ಸಿ. 40 ವರ್ಷ, ವಿದ್ಯಾರಣ್ಯಪುರಂ, ಮೈಸೂರು

5. ನೌಶೀಫ್, 23 ವರ್ಷ, ಗುಮ್ಮನಕೊಲ್ಲಿ ಗ್ರಾಮ, ಕುಶಾಲನಗರ,