ರಾಷ್ಟ್ರ ಮಟ್ಟದ 26 ನೇ ರಾಷ್ಟ್ರೀಯ ಯುವ ಮಹಿಳಾ ವಾಲಿಬಾಲ್: ಸೋಮವಾರಪೇಟೆಯ ಇಂಚರ ಆಯ್ಕೆ
ಸೋಮವಾರಪೇಟೆ: ರಾಷ್ಟ್ರ ಮಟ್ಟದ 26 ನೇ ರಾಷ್ಟ್ರೀಯ ಯುವ ಮಹಿಳಾ ವಾಲಿಬಾಲ್ ಪಂದ್ಯಾಟದ ಕರ್ನಾಟಕ ತಂಡಕ್ಕೆ ಸೋಮವಾರಪೇಟೆಯ ವಿದ್ಯಾರ್ಥಿನಿ ಡಿ.ವಿ. ಇಂಚರ ಆಯ್ಕೆಯಾಗಿದ್ದಾಳೆ.
ಮಾ.13 ರಿಂದ ಒಡಿಸಾದ ಭುವನೇಶ್ವರದಲ್ಲಿ ರಾಷ್ಟ್ರೀಯ ಯುವ ಮಹಿಳಾ ವಾಲಿಬಾಲ್ ಪಂದ್ಯಾಟ ನಡೆಯಲಿದ್ದು, ಕರ್ನಾಟಕ ತಂಡವನ್ನು ಇಂಚರ ಪ್ರತಿನಿಧಿಸುತ್ತಿದ್ದಾಳೆ. ಈಕೆ ದೊಡ್ಡತೋಳೂರು ಗ್ರಾಮದ ವಿರೂಪಾಕ್ಷ (ವಿಜಯ್) ಹಾಗೂ ಸ್ಮಿತಾ ದಂಪತಿಯ ಪುತ್ರಿಯಾಗಿದ್ದು, ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
