ಕುಶಾಲನಗರ: ಮಾಮ್ಸ್ ಮ್ಯಾಜಿಕ್ ಬಿಸ್ಕೆಟ್ ಪ್ಯಾಕ್ ನೊಳಗೆ ಹುಳ

ಕುಶಾಲನಗರ: ಮಾಮ್ಸ್ ಮ್ಯಾಜಿಕ್ ಬಿಸ್ಕೆಟ್ ಪ್ಯಾಕ್ ನೊಳಗೆ ಹುಳ

ಕುಶಾಲನಗರ ನ 15: ಗ್ರಾಹಕರೊಬ್ಬರು ಖರೀದಿಸಿದ ಸನ್ ಫೀಸ್ಟ್ ಕಂಪನಿಯ ಮಾಮ್ಸ್ ಮ್ಯಾಜಿಕ್ ಬಿಸ್ಕತ್ತು ಪ್ಯಾಕ್ನೊಳಗೆ ಹುಳ ಕಂಡುಬಂದಿದೆ. ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಬಳಿಯ ಅಂಗಡಿಯಲ್ಲಿ ಕರವೇ ಆನಂದ್ ಅವರು ಖರೀದಿಸಿದ ಬಿಸ್ಕಟ್ ಪ್ಯಾಕ್ ನೊಳಗೆ ಬಿಳಿಯ ಹುಳ ಪತ್ತೆಯಾಗಿ ಆತಂಕ ಮೂಡಿಸಿದೆ. ಎಕ್ಸ್ಪೈರಿ ಆಗದೆ ಇದ್ದರೂ ಕೂಡ ಈ ರೀತಿ ಉಂಟಾಗಿರುವುದು ದಿಗಿಲು ಮೂಡಿಸಿದೆ.