ಪಾಲಂಗಾಲ ಗ್ರಾಮದಲ್ಲಿ ಭೂಕುಸಿತ: ಕಳೆದ 4 ರಿಂದ 5 ದಿನಗಳ ಹಿಂದೆ ಸಂಭವಿಸಿರುವ ಘಟನೆ

ವಿರಾಜಪೇಟೆ: ತಾಲ್ಲೂಕಿನ, ವಿರಾಜಪೇಟೆ ಹೋಬಳಿ, ಪಾಲಂಗಾಲ ಗ್ರಾಮದಲ್ಲಿ ಭೂಕುಸಿತ ಉಂಟಾದ ಬಗ್ಗೆ ಗ್ರಾಮಸ್ಥರು ತಿಳಿಸಿದ ಮೇರೆಗೆ ದಿನಾಂಕ 01-08-2025 ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಪಾಲಂಗಾಲ ಗ್ರಾಮದ ಅರಣ್ಯ (ಮಾಕುಟ್ಟಿ) ಮಾಟ್ರಿ ರೆಂಜ್ ಗೆ ಒಳಪಟ್ಟ ಅರಣ್ಯ ಪ್ರದೇಶದ ಬೆಟ್ಟದ ತುದಿಯಿಂದ ಭೂಕುಸಿತ ಉಂಟಾಗಿರುವ ಬಗ್ಗೆ ಮೆಲ್ನೋಟಕ್ಕೆ ಕಂಡು ಬಂದಿರುತ್ತದೆ. ಈ ಭೂಕುಸಿತದಿಂದ ಬಂದಿರುವ ಮಣ್ಣು-ಕಲ್ಲುಗಳು ಮತ್ತು ಮರಗಳು ಪಾಲಂಗಾಲ ಗ್ರಾಮದ ಸರ್ಕಾರಿ ಪೈಸಾರಿ ಸ.ನಂ.171/11ಪಿ2 ರಲ್ಲಿನ 341.0 ಎಕ್ರೆ ಜಾಗಕ್ಕೆ ಬಂದಿದ್ದು,ಈ ಭೂ ಕುಸಿತವು ಕಳೆದ 4 ರಿಂದ 5 ದಿನಗಳ ಹಿಂದೆ ಸಂಭವಿಸಿರುವ ಬಗ್ಗೆ ಸ್ಥಳದಲ್ಲಿದ್ದ ಗ್ರಾಮಸ್ಥರು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ. ಭೂ ಕುಸಿತದಿಂದಾಗಿ ಯಾವುದೇ ಮನೆ, ಮಾನವ ಹಾನಿ ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿರುವುದಿಲ್ಲ ಮತ್ತು ಜಾಗದ ಸುತ್ತಮುತ್ತ ಯಾವುದೇ ಜನ ವಸತಿ ಪ್ರದೇಶವಾಗಿರುವುದಿಲ್ಲ ಹಾಗೂ ಈ ಬಗ್ಗೆ ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೆ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ವಿರಾಜಪೇಟೆ ತಾಲ್ಲೂಕು ತಹಶೀಲ್ದಾರರು ಹಾಗೂ ತಾಲ್ಲೂಕು ದಂಡಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.