ಅಕ್ಟೋಬರ್ 19ರಿಂದ 22ರವರೆಗೆ ವಿರಾಜಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಕೊಡವ ಸಮಾಜಗಳ ನಡುವೆ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ

ವಿರಾಜಪೇಟೆ:: ಕೊಡದ ಜನಾಂಗದ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಸಲುವಾಗಿ, ಕ್ರಿಕಿಟ್ ಕ್ರೀಡೆಯಲ್ಲಿ ತಮ್ಮ ಭವಿಷ್ಯ ರೂಪಿಸಲು ಸಹಕಾರಿಯಾಗಲು ಕೊಡವ ಕ್ರಿಕೆಟ್ ಅಕಾಡೆಮಿ ವತಿಯಿಂದ ಅಕ್ಟೋಬರ್ ತಿಂಗಳ 19ರಂದು ಅಂತರ್ ಕೊಡವ ಸಮಾಜಗಳ ನಡುವೆ ಲೆದರ್ ಬಾಲ್ ಕಿಕ್ರೆಟ್ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷರಾದ ಕೀತಿಯಂಡ ಎನ್ ಕಾರ್ಯಪ್ಪ ಅವರು ಮಾಹಿತಿ ನೀಡಿದರು.
ಕೊಡವ ಕ್ರಿಕೆಟ್ ಅಕಾಡೆಮಿ ವಿರಾಜಪೇಟೆ (ರಿ) ವತಿಯಿಂದ ನಗರದ ಕಾರು ನಿಲ್ದಾಣ ಬಳಿಯ ವಿಕ್ಟೋರಿಯ ಕ್ಲಬ್ ಸಭಾಂಗಣದಲ್ಲಿ ಅಂತರ್ ಕೊಡವ ಸಮಾಜಗಳ ನಡುವೆ ಲೆದರ್ ಬಾಲ್ ಕಿಕ್ರೆಟ್ ಪಂದ್ಯಾಟದ ಆಯೋಜನೆಯ ಬಗ್ಗೆ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಅದ್ಯಕ್ಷರಾದ ಕೀತಿಯಂಡ ಎನ್. ಕಾರ್ಯಪ್ಪ ಅವರು,
ಸಂಸ್ಥೆಯು 1996 ರಲ್ಲಿ ಸ್ಥಾಪನೆಯಾಗಿ ಅಂತರ್ ಕೊಡವ ಸಮಾಜಗಳ ನಡುವೆ ಪ್ರಥಮ ಬಾರಿಗೆ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾಟವನ್ನು ಆಯೋಜಿಸಕೊಂಡು ಬರುತ್ತಿದೆ. ನಂತರದಲ್ಲಿ ರಣಜಿ, ಅಂತರ್ ಜಿಲ್ಲಾ, ರಾಜ್ಯ ಮಟ್ಟ ಹಾಗೂ ಐ.ಪಿ.ಎಲ್ ಕ್ರಿಕೆಟ್ ಪಂದ್ಯಾಟಗಳನ್ನು ಮನದಲ್ಲಿಟ್ಟು ಲೆದರ್ ಬಾಲ್ ಪಂದ್ಯಾಟಕ್ಕೆ ಪ್ರೋತ್ಸಾಹ ಮತ್ತು ಜಿಲ್ಲೆಯ ಕೊಡವ ಜನಾಂಗದ ಪ್ರತಿಭೆಗಳನ್ನು ಹೊರ ತರಲು ಉತ್ತಮ ಭವಿಷ್ಯ ರೂಪಿಸಲು ವೇದಿಕೆ ಕಲ್ಪಿಸುವ ನಿಟ್ಟನಲ್ಲಿ ಸತತ ಮೂರು ವರ್ಷಗಳಿಂದ ಲೆದರ್ ಬಾಲ್ ಕ್ರಿಕೇಟ್ ಪಂದ್ಯಾಟವನ್ನು ಆಯೋಜಿಸಿಕೊಂಡು ಬರುತ್ತಿದೆ. ವಿರಾಜಪೇಟೆ ನಗರದಲ್ಲಿ ಅರಂಭವಾಗಿ ಬಾಳಲೆಯಲ್ಲಿ ದ್ವಿತೀಯ ಆವೃತ್ತಿಯ ಪಂದ್ಯಾಟಗಳು ನಡೆದು, ಇದೀಗ ಮೂರನೇ ಆವೃತ್ತಿಯನ್ನು ವಿರಾಜಪೇಟೆಯಲ್ಲಿ ಆಯೋಜಿಸಲು ಮುಂದಾಗಿದ್ದೇವೆ ಎಂದು ಹೇಳಿದರು.
ಕೊಡವ ಕ್ರಿಕಿಟ್ ಅಕಾಡೆಮಿ ವಿರಾಜಪೇಟೆ (ರಿ) ಉಪಾಧ್ಯಕ್ಷರಾದ ಚೇರಂಡ ಕಿಶನ್ ಅವರು ಪಂದ್ಯಾಟದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ಕೊಡವ ಕ್ರಿಕೆಟ್ ಅಕಾಡೆಮಿ ವಿರಾಜಪೇಟೆ (ರಿ) ವತಿಯಿಂದ ನಡೆಸುತ್ತಿರುವ ಮೂರನೇ ವರ್ಷದ ಅಂತರ್ ಕೊಡವ ಸಮಾಜಗಳ ನಡುವಿಣ ಲೆದರ್ ಬಾಲ್ ಕ್ರಿಕಿಟ್ ಪಂದ್ಯಾವಳಿಗಳು ಅಕ್ಟೋಬರ್ 19 ರಿಂದ 22 ರವರೆಗೆ ವಿರಾಜಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ. ಇದು ಕೊಡಗು ಜಿಲ್ಲೆಯ ಕೊಡವ ಜನಾಂಗದ ಕ್ರೀಡಾಪಟುಗಳಿಗೆ ಮಾತ್ರ ಸೀಮಿತವಾಗಿದೆ.ಕೊಡಗು ಜಿಲ್ಲೆಯ ಅಂತರ್ ಕೊಡವ ಸಮಾಜಗಳ ಮಧ್ಯೆ ನಿಗದಿತ ಓವರ್‌ಗಳ ಕ್ರಿಕೆಟ್ ನ ಎಲ್ಲಾ ನಿಯಾಮಾವಳಿಗಳನ್ನು ಅಳವಡಿಸಿಕೊಂಡು ಪಂದ್ಯಾಟ ಆಯೋಜಿಸಲಾಗಿದೆ. ಅಲ್ಲದೆ ಎರಡು ಅತಿಥಿ ಆಟಗಾರರ ಅನುಮತಿಯೊಂದಿಗೆ ಉಳಿದ ಆಟಗಾರರು ಕೊಡಗು ಜಿಲ್ಲೆಯವರಾಗಿರಬೇಕು. ಇಲ್ಲಿನ ನಿವಾಸಿ ಎಂದು ಆಧಾರ್ ಕಾರ್ಡ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ. ಜಿಲ್ಲೆಯ ಆಟಗಾರರು ಜಿಲ್ಲೆಯ ಯಾವುದೇ ಕೊಡವ ಸಮಾಜಗಳ ಪರವಾಗಿ ಪ್ರತಿನಿಧಿಸಬಹುದು ಎಂದು ಹೇಳಿದರು.
ಕೊಡವ ಕ್ರಿಕೆಟ್ ಅಕಾಡೆಮಿ ವಿರಾಜಪೇಟೆ (ರಿ) ನಿರ್ದೇಶಕರಾದ ಶರಣ್ ಅವರು ಮಾತನಾಡಿ, ಬೆಂಗಳೂರು ಮತ್ತು ಮೈಸೂರು ಹಾಗೂ ಇತರ ನಗಗಳಲ್ಲಿ ನೆಲೆಸಿರುವ ಜನಾಂಗದ ಕ್ರೀಡಾಪಟುಗಳಿಗೆ ಕೆಲವು ಕ್ಲಬ್‌ಗಳು ಮತ್ತು ತರಬೇತಿ ಕೇಂದ್ರಗಳಿವೆ. ಆದರೆ ಜಿಲ್ಲೆಯ ಪ್ರತಿಭೆಗಳಿಗೆ ತರಬೇತಿಯ ಕೊರತೆ ಇದೆ. ಅದರಲ್ಲಿಯೂ ತಮ್ಮ ಬಹುಮುಖ ಪ್ರತಿಭೆಯನ್ನು ಅನಾವರಣ ಮಾಡಲು ಇದು ವೇದಿಕೆಯಾಗಿದೆ. ಉತ್ತಮವಾಗಿ ಪ್ರದರ್ಶನ ತೋರುವ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಭವಿಷ್ಯ ರೂಪಿಸಲು ಸಂಸ್ಥೆಯು ಕಾರ್ಯಪ್ರವತ್ತವಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ವಿರಾಜಪೇಟೆ (ರಿ) ಕಾರ್ಯದರ್ಶಿ ಬೋಪಣ್ಣ, ಖಜಾಂಚಿ ಕೊಕ್ಕೆಯಂಗಡ ರಂಜನ್, ನಿರ್ದೇಶಕರಾದ ಪಟ್ಟಡ ಪ್ರಕಾಶ್, ಕೀತಿಯಂಡ ವಿವೇಕ್, ಮಾಚಂಗಡ ದರ್ಶನ್ ಸೋಮಣ್ಣ, ಬಾಳೆಯಡ ಪ್ರತೀಶ್ ಪೂವಯ್ಯ, ಕೊಟ್ಟಂಗಡ ಸುರಜ್ ಮಾದಪ್ಪ ಉಪಸ್ಥಿತರಿದ್ದರು.
ವರದಿ: ಕಿಶೋರ್ ಕುಮಾರ್ ಶೆಟ್ಟಿ